Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿವೃತ್ತಿ ಹೊಂದಿದ್ದರೂ ವೆಸ್ಟ್‌ ಇಂಡೀಸ್‌ ತಂಡಕ್ಕೆ ರಿಸರ್ವ್‌ ಪ್ಲೇಯರ್‌ ಈತ!

ಇದು ಕ್ರಿಸ್ ಗೇಲ್ ಕೊನೆಯ ವಿಶ್ವಕಪ್..! | Oneindia Kannada
Retired Bravo included in Windies reserves for WC

ಸೇಂಟ್‌ ಜಾನ್ಸ್‌ (ಆನ್ಟಿಗುವಾ), ಮೇ 19: ಈ ಆಟಗಾರನ ಗತ್ತೇ ಅದು. ಆತನಲ್ಲಿ ಇರುವ ಪ್ರತಿಭೆ ತಂಡಕ್ಕೆ ಯಾವುದೇ ಸ್ಥಿತಿಯಲ್ಲೂ ಗೆಲುವು ತಂದುಕೊಡಬಲ್ಲದು ಎಂಬುದನ್ನು ಇಡೀ ಕ್ರಿಕೆಟ್‌ ಜಗತ್ತು ತಿಳಿದಿದೆ.

ಆದ್ದರಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ವಿಶ್ವಕಪ್‌ನಲ್ಲಿ ಆಡಲು ಪ್ರಕಟಿಸಿರುವ ವೆಸ್ಟ್‌ ಇಂಡೀಸ್‌ ತಂಡದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಆತ ಬೇರಾರೂ ಅಲ್ಲ ಸ್ಟಾರ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಭಾನುವಾರ 10 ಮಂದಿ ಕಾಯ್ದಿರಿಸಿದ ಆಟಗಾರರ (ರಿಸರ್ವ್‌ ಪ್ಲೇಯರ್ಸ್‌) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2018ರಲ್ಲಿ ನಿವೃತ್ತಿ ಹೊಂದಿರುವ 35 ವರ್ಷದ ಅನುಭವಿ ಆಲ್‌ರೌಂಡರ್‌ ಹೆಸರನ್ನು ಸೇರಿಸಲಾಗಿದೆ.

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಜೊತೆಗೆ ವೇತನ ಕುರಿತಾದ ಗೊಂದಲ ಹಿನ್ನೆಲೆಯಲ್ಲಿ 2014ರಿಂದೀಚೆಗೆ ಏಕದಿನ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಬ್ರಾವೋ, 2018ರ ಅಕ್ಟೋಬರ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಇದೀಗ ಬ್ರಾವೋ ಅವರನ್ನು ವಿಶ್ವಕಪ್‌ನ ಕಾಯ್ದಿರಿಸಿದ ಆಟಗಾರರ ಪಟ್ಟಿಗೆ ಸೇರಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಬ್ರಾವೋ, ಇತ್ತೀಚೆಗಷ್ಟೇ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ರನ್ನರ್‌ಅಪ್‌ ಸ್ಥಾನ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದರು. ಅವರು 2016ರ ಸೆಪ್ಟೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಪರ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ.

ಇದೇ ವೇಳೆ ಕೈರೊನ್‌ ಪೊಲಾರ್ಡ್‌ ಕೂಡ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪೊಲಾರ್ಡ್‌ ವೆಸ್ಟ್‌ ಇಂಡೀಸ್‌ ಪರ 2016ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಬಾರಿ ಟಿ20 ಪಂದ್ಯದಲ್ಲಿ ಆಡಿದ್ದರು.

ಪೊಲಾರ್ಡ್‌ ಮತ್ತು ಬ್ರಾವೋ ಹೊರತಾಗಿ, ಸುನಿಲ್‌ ಅಂಬ್ರೀಷ್‌, ಜಾನ್‌ ಕ್ಯಾಂಪ್‌ಬೆಲ್‌, ಜೊನಾಥನ್‌ ಕಾರ್ಟರ್‌, ರಾಸ್ಟನ್ ಚೇಸ್‌, ಶೇನ್‌ ಡೋವ್ರಿಚ್‌, ಕೀಮೊ ಪೌಲ್‌, ಖಾರೀ ಪಿರೀ ಮತ್ತು ರೇಮನ್‌ ರೀಫರ್‌ ವೆಸ್ಟ್‌ ಇಂಡೀಸ್ ವಿಶ್ವಕಪ್‌ಗೆ ಕಾಯ್ದಿರಿಸಿರುವ ಆಟಗಾರರರಾಗಿದ್ದಾರೆ.

ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ಪ್ರಕಟಿಸಿರುವ ತಂಡ ಇಂತಿದೆ
ಜೇಸನ್‌ ಹೋಲ್ಡರ್‌ (ನಾಯಕ), ಕ್ರಿಸ್‌ ಗೇಯ್ಲ್‌, ಕೆಮಾರ್‌ ರೋಚ್‌, ಡರ್ರೆನ್‌ ಬ್ರಾವೋ, ಆಂಡ್ರೆ ರಸೆಲ್‌, ಶೇಯ್‌ ಹೋಪ್‌, ಶೆಲ್ಡನ್‌ ಕಾಟ್ರೆಲ್‌, ಎವಿನ್‌ ಲೂಯಿಸ್‌, ಶನಾನ್‌ ಗೇಬ್ರಿಯೆಲ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಆಷ್ಲೇ ನರ್ಸ್‌, ಶಿಮ್ರಾನ್‌ ಹೆಟ್ಮಾಯೆರ್‌, ಒಶೇನ್‌ ಥಾಮಸ್‌, ನಿಕೊಲಾಸ್‌ ಪೂರನ್‌.

Story first published: Sunday, May 19, 2019, 17:22 [IST]
Other articles published on May 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+