ಎಂ.ಎಸ್ ಧೋನಿ ದಾಖಲೆ ಮುರಿಯಲು ಈ ಆಟಗಾರನಿಂದ ಸಾಧ್ಯ: ನಿಖಿಲ್ ಚೋಪ್ರಾ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ಕಂಡಂತಹ ಅಪ್ರತಿಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಕೇವಲ ಆಟಗಾರನಾಗಿ ಅಷ್ಟೇ ಅಲ್ಲದೆ ನಾಯಕನಾಗಿಯೂ ವಿಶ್ವದ ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಮಾಡಿದ್ದಾರೆ. ಐಸಿಸಿಯ ಮೂರು ಟ್ರೋಫಿಗಳನ್ನ ಗೆದ್ದಿರುವ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ ಗೆಲುವಿನ ಅಲೆಯಲ್ಲಿ ತೇಲಾಡುತ್ತಿತ್ತು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿದೆ .
ಧೋನಿ ಸಾಕಷ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ. ವಿಕೆಟ್ ಹಿಂಬದಿ ದೈತ್ಯ ಕೀಪರ್ ಆಗಿ ಎದುರಾಳಿ ತಂಡಕ್ಕೆ ಆಘಾತ ನೀಡುತ್ತಿದ್ದ ಧೋನಿ ಸ್ಟಂಪಿಂಗ್‌ನಲ್ಲಿ ವಿಶ್ವದಾಖಲೆಯನ್ನೇ ಹೊಂದಿದ್ದಾರೆ. ಹೀಗಾಗಿಯೇ ಧೋನಿಯಿಂದ ಸ್ಪೂರ್ತಿಗೊಂಡು ಕ್ರಿಕೆಟ್ ಆಟ ಆರಂಭಿಸಿದ ಅನೇಕ ಯುವ ಪ್ರತಿಭೆಗಳಿದ್ದಾರೆ. ಸದ್ಯ ಟೀಂ ಇಂಡಿಯಾದ ಸ್ಫೋಟಕ ಆಟಗಾರ ರಿಷಭ್ ಪಂತ್ ಕೂಡ ಧೋನಿ ದಾಖಲೆಯನ್ನ ಒಂದೊಂದಾಗಿ ಸರಿಗಟ್ಟುತ್ತಿದ್ದಾರೆ.

ಕಪಿಲ್ ದೇವ್ ದಾಖಲೆ ಮುರಿದ ಪಂತ್
ಬೆಂಗಳೂರಿನ ಎನ್. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮಾಜಿ ನಾಯಕ ಕಪಿಲ್ ದೇವ್ ಹೆಸರಲ್ಲಿದ್ದ 40 ವರ್ಷಗಳ ಹಳೆಯ ದಾಖಲೆಯನ್ನ ಪುಡಿಗಟ್ಟಿದ್ದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ರಿಷಭ್ ಭಾರತ ಪರ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದ್ರು.
1982ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಪಿಲ್ ದೇವ್ 30 ಎಸೆತಗಳಲ್ಲಿ 50 ರನ್ ಕಲೆಹಾಕಿದ್ದರು. ಆದ್ರೆ ಇದೀಗ ಬರೋಬ್ಬರಿ 40 ವರ್ಷದ ಬಳಿಕ ಪಂತ್ ತನ್ನ ಹೆಸರಿಗೆ ಈ ದಾಖಲೆ ಬರೆದುಕೊಂಡಿದ್ದಾನೆ.
ಭಾರತ vs ಶ್ರೀಲಂಕಾ: ಬೆಂಗಳೂರು ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಗೆಲುವು: ಮತ್ತೊಂದು ಸರಣಿ ಕ್ಲೀನ್ ಸ್ವೀಪ್

ಪಂತ್ ಆಟವನ್ನ ಹಾಡಿ ಹೊಗಳಿದ ನಿಖಿಲ್ ಚೋಪ್ರಾ
ಮಾಜಿ ಕ್ರಿಕೆಟಿಗ ನಿಖಿಲ್ ಚೋಪ್ರಾ ರಿಷಭ್ ಪಂತ್ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್‌ಗೆ ವಿಶ್ವದ ಲೆಜೆಂಡ್ ವಿಕೆಟ್ ಕೀಪರ್‌ಗಳ ದಾಖಲೆಯನ್ನ ಮುರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಭಾರತದ ಲೆಜೆಂಡರಿ ವಿಕೆಟ್ ಕೀಪರ್ ಎಂ.ಎಸ್ ಧೋನಿ ಹೆಸರಲ್ಲಿನ ದಾಖಲೆಗಳನ್ನ ಸರಿಗಟ್ಟುವ ಸಾಮರ್ಥ್ಯ ಇದೆ ಎಂದಿದ್ದಾರೆ.
ಇನ್ನು ಮಹೇಂದ್ರ ಸಿಂಗ್ ಧೋನಿ ಕುರಿತಾಗಿ ಮಾತನಾಡಿದ ಚೋಪ್ರಾ, ಬಹುಶಃ ಧೋನಿ ಕೂಡ ತನ್ನ ದಾಖಲೆಯನ್ನ ಪಂತ್ ಮುರಿಯಲಿ ಎಂದು ಬಯಸಿರಬಹುದು ಎಂದು ಅಂದಾಜಿಸಿದ್ದಾರೆ.
ಐಪಿಎಲ್‌ಗೆ ಆರಂಭದಲ್ಲಿಯೇ ಹಿನ್ನಡೆ: ಮೊದಲ ವಾರ ಅಲಭ್ಯವಾಗಲಿರುವ ಆಟಗಾರರ ಪಟ್ಟಿ

ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ ಉತ್ತಮ ಗೇಮ್‌ಪ್ಲಾನ್ ಕಾಣಿಸಿತ್ತು
ಶ್ರೀಲಂಕಾ ವಿರುದ್ಧ ರಿಷಭ್ ಪಂತ್ ಜೊತೆಗೆ ಉತ್ತಮ ಆಟವಾಡಿದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ ಉತ್ತಮ ಗೇಮ್‌ಪ್ಲಾನ್ ಗೋಚರಿಸಿತ್ತು ಎಂದು ಚೋಪ್ರಾ ಹೇಳಿದ್ದಾರೆ. ಬೌಲರ್‌ಗಳ ಮೇಲೆ ಒತ್ತಡ ಹೇರಲು ಅಯ್ಯರ್ ತಮ್ಮ ಇನ್ನಿಂಗ್ಸ್ ಅನ್ನು ಬಳಸಿಕೊಂಡ ರೀತಿ ನಿಜಕ್ಕೂ ಮೆಚ್ಚುವಂತದ್ದು. ಹೀಗಾಗಿಯೇ ಪ್ರವಾಸಿ ಶ್ರೀಲಂಕಾ ತಂಡವು ಈ ರೀತಿಯಾಗಿ ಪ್ರದರ್ಶನ ನೀಡಲು ಸಾಧ್ಯವಾಗಿದೆ.
ಶ್ರೀಲಂಕಾ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 208ರನ್‌ಗೆ ಆಲೌಟ್ ಆಗುವ ಮೂಲಕ 236 ರನ್‌ಗಳ ಹೀನಾಯ ಸೋಲು ಕಂಡಿದೆ. ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ 2-0ಯಿಂದ ವೈಟ್‌ವಾಶ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications