ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್: ವಿಶ್ವಕಪ್‌ನಲ್ಲಿ ಆಡೋದು ಬಿಟ್ಟು, ಇದೇನಿದು?

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದಲ್ಲಿರುವ ರಿಷಭ್ ಭಾರತ ತಂಡದೊಂದಿಗೆ ಮೆಲ್ಬರ್ನ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಈಗಾಗಲೇ ಎಂಸಿಜಿ ಮೈದಾನಕ್ಕೆ ತಲುಪಿರುವ ರೋಹಿತ್ ಪಡೆ ಶುಕ್ರವಾರದಿಂದ ಅಭ್ಯಾಸ ಆರಂಭಿಸಲಿದೆ.
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಇತ್ತೀಚೆಗೆ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಈ ವೀಡಿಯೋದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ಗೆ ಕಾರಣವಾಗಿದೆ.
ರಿಷಭ್ ಪಂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ವೀಡಿಯೋದಲ್ಲಿ ಪಂತ್ ವಿಭಿನ್ನವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಉದ್ದವಾದ ಬಿಳಿ ಕೂದಲು ಮತ್ತು ಕುರ್ತಾವನ್ನು ಧರಿಸಿದ್ದಾರೆ. ಆ ಹೊಸ ಅವತಾರದಲ್ಲಿ ರಿಷಭ್ ಪಂತ್‌ರನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಾಗಿಲ್ಲ. ಏಕೆಂದರೆ ಆತನು ವಯಸ್ಸಾದ ವ್ಯಕ್ತಿಯಂತೆ ಕಾಣಿಸುತ್ತಿದ್ದಾನೆ.

ತನ್ನ ಹೊಸ ಲುಕ್‌ಗೆ ಮೂರು ಆಯ್ಕೆಗಳನ್ನ ನೀಡಿದ ರಿಷಭ್
ಇನ್‌ಸ್ಟಾದಲ್ಲಿ ತನ್ನ ಸ್ಟೋರಿಯನ್ನು ಪೋಸ್ಟ್ ಮಾಡಿರುವ ರಿಷಭ್ ಜನತೆಯ ಅಭಿಪ್ರಾಯವನ್ನು ಸಹ ಕೇಳಿದ್ದಾರೆ. ಆತನ ಹೊಸ ಲುಕ್ ಯಾರ ರೀತಿಯಲ್ಲಿ ಕಾಣುತ್ತಿದೆ ಎಂದು ಅಭಿಮಾನಿಗಳನ್ನ ಪ್ರಶ್ನಿಸಿದ್ದಾರೆ. ಜೊತೆಗೆ ಕೆಳಗೆ ಮೂರು ಆಯ್ಕೆಗಳನ್ನ ಸಹ ನೀಡಿದ್ದಾರೆ. ಅವರ ಮೊದಲ ಆಯ್ಕೆಯಲ್ಲಿ ಸಂಗೀತಗಾರ ಎಂದು, ಎರಡನೇ ಆಯ್ಕೆಯಲ್ಲಿ ಶಾಲೆಯ ಪ್ರಿನ್ಸಿಪಲ್ ಮತ್ತು ಮೂರನೇ ಆಯ್ಕೆಯು ಪ್ರೊಫೆಸರ್ ಎಂದು ಒಳಗೊಂಡಿದೆ.
ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ
ರಿಷಭ್ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ!
ರಿಷಬ್ ಪಂತ್ ಹೊಸ ಲುಕ್ ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಫೋಟೋಗೆ ಪ್ರತಿಕ್ರಿಯೆ ನೀಡುತ್ತಿದ್ದು, ಯಾವ ರೀತಿಯಲ್ಲಿ ಹೀಗೆ ಕಾಣಿಸಿಕೊಂಡಿದ್ದಿರಿ ಎಂಬೆಲ್ಲಾ ಪ್ರಶ್ನೆ ಹಾಕಿದ್ದಾರೆ. ಅದೇ ವೇಳೆಯಲ್ಲಿ ರಿಷಭ್ ಪಂತ್ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಜೋಸ್ ಇಂಗ್ಲಿಸ್ ಇಂಜ್ಯುರಿ ನೆಪ: ಕ್ಯಾಮರೂನ್ ಗ್ರೀನ್ ತಂಡಕ್ಕೆ ಸೇರಿಸಿಕೊಳ್ಳಲು ಆಸ್ಟ್ರೇಲಿಯಾ ಪ್ಲ್ಯಾನ್ ಮಾಡಿತಾ?

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಂತ್‌ಗೆ ಪ್ಲೇಯಿಂಗ್ 11ನಲ್ಲಿ ಸ್ಥಾನವಿಲ್ಲ?
ಇನ್ನು ಭಾರತದ ಟಿ20 ವಿಶ್ವಕಪ್ ಅಭಿಯಾನ ಅಕ್ಟೋಬರ್ 23ರಂದು ಪಾಕಿಸ್ತಾನ ತಂಡದ ವಿರುದ್ಧ ಪ್ರಾರಂಭವಾಗಲಿದೆ. ಈಗಾಗಲೇ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ 11 ರೆಡಿಯಿದೆ ಎಂದು ಹೇಳಿದ್ದು, ರಿಷಭ್ ಪಂತ್‌ಗೆ ಸ್ಥಾನ ಸಿಗುತ್ತಾ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅದ್ರಲ್ಲೂ ರಿಷಭ್ ಪಂತ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಗುವುದೇ ಅನುಮಾನ ಎನ್ನಲಾಗಿದೆ.
ಪ್ರಸ್ತುತ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿರುವ ಇಬ್ಬರು ವಿಕೆಟ್ ಕೀಪರ್‌ಗಳು. ರಿಷಭ್ ಪಂತ್ ಎಡಗೈ ಬ್ಯಾಟರ್ ಆಗಿದ್ದು, ದಿನೇಶ್ ಕಾರ್ತಿಕ್ ಬಲಗೈ ಅನುಭವಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಪ್ರಭಾವ ಬೀರಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರಲ್ಲಿ ಯಾರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications