Road Safety World Series 2023: ಮತ್ತೆ ಮೈದಾನದಲ್ಲಿ ಭಾರತ vs ಪಾಕ್ ಲೆಜೆಂಡ್ಸ್ ಕಾಳಗ; 3ನೇ ಆವೃತ್ತಿಗೆ ದಿನಗಣನೆ
ಈವರೆಗೆ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಎರಡು ಆವೃತ್ತಿಗಳು ನಡೆದಿವೆ. ಮಾರ್ಚ್ 2020ರಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಉದ್ಘಾಟನಾ ಆವೃತ್ತಿಯನ್ನು ಮಧ್ಯದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಕೋವಿಡ್ ಪ್ರಯಾಣದ ನಿರ್ಬಂಧಗಳ ಕಾರಣದಿಂದಾಗಿ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ಹೊರಗುಳಿಯುವುದರೊಂದಿಗೆ 2021ರಲ್ಲಿ ಪುನರಾರಂಭವಾಯಿತು. ಆಗ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಲೆಜೆಂಡ್ಸ್ ತಂಡಗಳು ಸೇರಿಕೊಂಡವು.
ಆರು ತಂಡಗಳ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡವನ್ನು ಫೈನಲ್‌ನಲ್ಲಿ 14 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಲೆಜೆಂಡ್ಸ್ ಗೆಲುವು ಸಾಧಿಸಿತು. ಮೊದಲು ಪಂದ್ಯಾವಳಿಯನ್ನು ಮುಂಬೈನಲ್ಲಿ ನಿಗದಿಪಡಿಸಲಾಗಿತ್ತು, ಆದರೆ ಅದು 2021ರಲ್ಲಿ ರಾಯ್‌ಪುರದಲ್ಲಿ ಪುನರಾರಂಭವಾಯಿತು.

ಇದೀಗ ಭಾರತ ಮತ್ತು ಪಾಕಿಸ್ತಾನ ಒಳಗೊಂಡಿರುವ ಪಂದ್ಯಾವಳಿಯಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತೆ ಪಾಕಿಸ್ತಾನದ ಮಾರಕ ವೇಗಿ ಶೋಯೆಬ್ ಅಖ್ತರ್ ಅವರನ್ನು ಎದುರಿಸಬಹುದು.
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಮೂರನೇ ಸೀಸನ್‌ಗೆ ಮೊದಲ ಬಾರಿಗೆ ಪಾಕಿಸ್ತಾನ ಲೆಜೆಂಡ್ಸ್ ತಂಡ ಸೇರಲು ಸಿದ್ಧವಾಗುವ ಸಾಧ್ಯತೆಯಿದೆ. 2022ರ ಆವೃತ್ತಿಯಲ್ಲಿ 8 ತಂಡಗಳು ಭಾಗವಹಿಸಿದ್ದವು.
ಇಂಡಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ಸೌತ್ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ನ್ಯೂಜಿಲೆಂಡ್ ಲೆಜೆಂಡ್ಸ್. ಇಎಸ್‌ಪಿಎನ್‌ಕ್ರಿಕ್ ಇನ್ಫೋ ವರದಿಯ ಪ್ರಕಾರ, ಪಾಕಿಸ್ತಾನ ಲೆಜೆಂಡ್ಸ್ ಒಂಬತ್ತನೇ ತಂಡವಾಗಿ ಸೇರಿಕೊಳ್ಳಲಿದೆ.

ಕಳೆದ ಎರಡು ಆವೃತ್ತಿಗಳು ಭಾರತದಲ್ಲೇ ಆಡಲಾಯಿತು. ಆದರೆ ಮೂರನೇ ಆವೃತ್ತಿಗಾಗಿ ಪಂದ್ಯಾವಳಿಯು ಭಾರತದ ಹೊರಗೆ ಅಂದರೆ, ಇಂಗ್ಲೆಂಡ್‌ಗೆ ಸ್ಥಳಾಂತಗೊಳ್ಳಬಹುದು ಎಂದು ವರದಿ ಹೇಳಿದ್ದು, ಆಯೋಜಕರು ಪ್ರಸ್ತುತ ಪಂದ್ಯಾವಳಿಯ ಅಂತಿಮ ದಿನಾಂಕಗಳನ್ನು ಅಂತಿಮಗೊಳಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಎಂದು ವರದಿಯಾಗಿದೆ.
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕೆವಿನ್ ಪೀಟರ್ಸನ್, ಶೇನ್ ಬಾಂಡ್, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್, ಯುವರಾಜ್ ಸಿಂಗ್, ಶೇನ್ ವ್ಯಾಟ್ಸನ್, ಜಾಂಟಿ ರೋಡ್ಸ್ ಸೇರಿದಂತೆ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಡ್ವೇನ್ ಸ್ಮಿತ್, ಬ್ರೆಟ್ ಲೀ, ತಿಸಾರ ಪೆರೇರಾ ಇತರ ಮಾಜಿ ಆಟಗಾರರು ಟೂರ್ನಿಯ ಭಾಗವಾಗಿರುವ ಕೆಲವು ಲೆಜೆಂಡ್ಸ್‌ಗಳಾಗಿದ್ದಾರೆ.
ಪಾಕಿಸ್ತಾನ ಲೆಜೆಂಡ್ಸ್ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಆಡಿದರೆ, ಮಾಜಿ ಕ್ರಿಕೆಟಿಗರಾದ ಇಂಜಮಾಮ್-ಉಲ್-ಹಕ್, ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್, ಅಬ್ದುಲ್ ರಜಾಕ್, ಮಿಸ್ಬಾ-ಉಲ್-ಹಕ್ ಆಡಬಹುದು ಎಂಬುದು ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮಿಸ್ಬಾ-ಉಲ್-ಹಕ್ ಸ್ಥಾನ ಪಡೆದಿದ್ದರೆ ಇಂಜಮಾಮ್-ಉಲ್-ಹಕ್ ಮೈದಾನಕ್ಕಿಳಿಯಲು ಸದ್ಯ ಕ್ರಿಕೆಟ್ ಆಡುವಷ್ಟು ಫಿಟ್‌ನೆಸ್ ಹೊಂದಿಲ್ಲ. ಆದರೆ, ಇದೀಗ ಅಫ್ರಿದಿ ಮತ್ತು ಅಖ್ತರ್ ಇನ್ನೂ ಕ್ರಿಕೆಟ್ ಆಡುತ್ತಿದ್ದಾರೆ.
ವೀರೇಂದ್ರ ಸೆಹ್ವಾಗ್ ವಿರುದ್ಧ ಶಾಹಿದ್ ಅಫ್ರಿದಿ ಮತ್ತು ತೆಂಡೂಲ್ಕರ್ ವಿರುದ್ಧ ಅಖ್ತರ್ ಕದನವು ಮರುಕಳಿಸುವ ದೊಡ್ಡ ಅವಕಾಶವಿದೆ. ಮೊಹಮ್ಮದ್ ಹಫೀಜ್, ಉಮರ್ ಗುಲ್, ವಹಾಬ್ ರಿಯಾಜ್ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದಾದ ಇತರ ಪಾಕಿಸ್ತಾನ ಕ್ರಿಕೆಟಿಗರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications