ಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರ

ಅಕ್ಟೋಬರ್ 18 ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಸಿಸಿಐ ಎಜಿಎಂ ಸಭೆಯಲ್ಲಿ ಕರ್ನಾಟಕ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಬಿಸಿಸಿಐ ಅಧ್ಯಕ್ಷನಾಗುವ ಸೌರವ್ ಗಂಗೂಲಿಗೆ ಹಿನ್ನಡೆಯಾಗಿದೆ.
ಬಿಸಿಸಿಐ ನಿಯಮಗಳ ಪ್ರಕಾರ, ವಾರ್ಷಿಕ ಸಭೆಯನ್ನು ಪ್ರತಿ ವರ್ಷ ನಡೆಸಬೇಕು ಮತ್ತು ದಿನಾಂಕ ಮತ್ತು ಸ್ಥಳವನ್ನು ಅಧ್ಯಕ್ಷರು ನಿಗದಿಪಡಿಸುತ್ತಾರೆ. ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ವಾರ್ಷಿಕ ಸಾಮಾನ್ಯ ಸಭೆಗಳು ಮತ್ತು ಚುನಾವಣೆಗಳಿಗೆ ಪ್ರತಿನಿಧಿಗಳ ಹೆಸರನ್ನು ಕಳುಹಿಸಲು ರಾಜ್ಯ ಸಂಸ್ಥೆಗಳನ್ನು ಕೇಳಲಾಗಿತ್ತು. ಅಂತೆಯೇ ಕರ್ನಾಟಕ ಕೆಎಸ್‌ಸಿಎ ಕಡೆಯಿಂದ ರೋಜರ್ ಬಿನ್ನಿ, ಬಂಗಾಳದಿಂದ CAB ಅನ್ನು ಸೌರವ್ ಗಂಗೂಲಿ ಅವರು ಪ್ರತಿನಿಧಿಸುತ್ತಿದ್ದರು.

ಬಿಸಿಸಿಐ ವಾರ್ಷಿಕ ಸಭೆಯಲ್ಲಿ ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆ
ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆಯಲ್ಲಿ ಕಾರ್ಯದರ್ಶಿಯಾಗಿ ಅಮಿತ್ ಶಾ ಪುತ್ರ ಜಯ್ ಷಾ ಮುಂದುವರಿದಿದ್ದಾರೆ. ಇದೇ ವೇಳೆಯಲ್ಲಿ ಪದಾಧಿಕಾರಿಗಳ ಚುನಾವಣೆಯೂ ನಡೆದಿದೆ. ಜೊತೆಗೆ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಕೂಡ ನಡೆಯಲಿದೆ.
ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಪದಾಧಿಕಾರಿಗಳ ಆಯ್ಕೆಯ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಲ್ಲಿ ಬಿಸಿಸಿಐ ಅನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಈ ಸಭೆ ನಿರ್ಧರಿಸುತ್ತದೆ. ಆದ್ರೆ ಈ ಕುರಿತಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಲು ರೇಸ್‌ನಲ್ಲಿ ಮುಂದಿದ್ದ ರೋಜರ್ ಬಿನ್ನಿ
1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಆಲ್ ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಜಯ್ ಶಾ ಕೂಡ ಕಾರ್ಯದರ್ಶಿಯಾಗಿ ಮುಂದುವರಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದಲ್ಲಿ ಅವಿರೋಧವಾಗಿ ರೋಜರ್ ಬಿನ್ನಿ ಹಾಗೂ ಜಯ್ ಶಾ ಆಯ್ಕೆಯಾಗಿದ್ದಾರೆ.

ಭಾರತದ ಪರ ಎರಡು ವಿಶ್ವಕಪ್ ಪ್ರತಿನಿಧಿಸಿರುವ ರೋಜರ್ ಬಿನ್ನಿ
ರೋಜರ್ ಬಿನ್ನಿ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಭಾರತದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡರು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಇವರು, 27 ಟೆಸ್ಟ್ ಪಂದ್ಯಗಳು ಮತ್ತು 72 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಪ್ರತಿನಿಧಿಸಿದ್ದು 1979ರಿಂದ 1987ರವರೆಗೆ ಭಾರತದ ಪರ ಆಡಿದ್ದಾರೆ.
T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ತೀವ್ರ ಟೀಕೆಗೆ ಗುರಿಯಾಗಿದ್ದ ಸೌರವ್ ಗಂಗೂಲಿ
ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಅನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರ ಅಧಿಕಾರಾವಧಿಯು ಕೆಲವು ಅರ್ಹತೆಗಳು ಮತ್ತು ಕೆಲವು ನ್ಯೂನತೆಗಳಿಂದ ಗುರುತಿಸಲ್ಪಟ್ಟಿದೆ.
ಇದ್ರ ಜೊತೆಗೆ ಭಾರತದ ಮಾಜಿ ಕೋಚ್ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಬದಲಾವಣೆ ಅಗತ್ಯವಿತ್ತು ಎಂದು ಪರೋಕ್ಷವಾಗಿ ಗಂಗೂಲಿಯನ್ನ ಕುಟುಕಿದ್ರು. ಇತಿಹಾಸದಲ್ಲಿ ಎಂದಿಗೂ ರೋಜರ್ ಬಿನ್ನಿಗೆ ಬೆಂಬಲಿಸದ ರವಿಶಾಸ್ತ್ರಿ ಇದೀಗ ಬಿನ್ನಿ ಉತ್ತಮ ಆಯ್ಕೆ ಎಂದು ಬೆಂಬಲಿಸಿದ್ದಾರೆ.

ಸೌರವ್ ಗಂಗೂಲಿ ಪರ ಪಶ್ವಿಮ ಬಂಗಾಳ ಮುಖ್ಯಮಂತ್ರಿ ಬ್ಯಾಟಿಂಗ್
ಗಂಗೂಲಿ ಅವರನ್ನು ಬೆಂಬಲಿಸಿ ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಐಸಿಸಿ ಅಧ್ಯಕ್ಷರಾಗಲು ಚುನಾವಣೆಗೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಲು ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಮನವಿ ಮಾಡಿದರು. ಸೌರವ್ ಗಂಗೂಲಿ ಬಗ್ಗೆ ಜಗತ್ತು ಹೆಮ್ಮೆ ಪಡುತ್ತಿದೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಟಗಾರ ಮತ್ತು ಉತ್ತಮ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ. ಅಮಿತ್ ಶಾ ಪುತ್ರನಿಗೆ ಮೂರು ವರ್ಷಗಳ ಅಧಿಕಾರಾವಧಿ ನೀಡಲಾಗಿದೆ. ಸೌರವ್ ಗಂಗೂಲಿಗೆ ಐಸಿಸಿ ಹೋಗಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications