ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

T20 World Cup: Aakash Chopra Surprised By Captain Rohit Sharma Decision To Give Final Over To Shami

ಅಕ್ಟೋಬರ್ 17 ರಂದು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಡಿಯಾ 6 ರನ್‌ಗಳ ರೋಚಕ ಜಯ ಸಾಧಿಸಿತು. ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 11 ರನ್‌ಗಳ ಅಗತ್ಯವಿದ್ದಾಗ ಬೌಲಿಂಗ್ ಮಾಡಿದ ಶಮಿ, ಕೇವಲ 4 ರನ್ ನೀಡಿ, 3 ವಿಕೆಟ್ ಪಡೆದರು ಮತ್ತು ಪಂದು ರನ್‌ಔಟ್ ಕೂಡ ಮಾಡಿದರು.

T20 World Cup 2022, IND vs AUS: ರೋಹಿತ್ ಶರ್ಮಾ ಚಿಂತೆ ದೂರ ಮಾಡಿದ ಮೊದಲನೇ ಅಭ್ಯಾಸ ಪಂದ್ಯT20 World Cup 2022, IND vs AUS: ರೋಹಿತ್ ಶರ್ಮಾ ಚಿಂತೆ ದೂರ ಮಾಡಿದ ಮೊದಲನೇ ಅಭ್ಯಾಸ ಪಂದ್ಯ

ಶಮಿ ಬೌಲಿಂಗ್‌ನಿಂದ ಟೀಂ ಇಂಡಿಯಾ ಅಂತಿಮವಾಗಿ 6 ರನ್‌ಗಳ ಜಯ ಸಾಧಿಸಿತು. ಆರಂಭದಿಂದಲೂ ಒಂದೇ ಒಂದು ಓವರ್ ಬೌಲಿಂಗ್ ಮಾಡದ ಶಮಿಗೆ ರೋಹಿತ್ ಶರ್ಮಾ ಕೊನೆಯ ಓವರ್ ನೀಡಿದರು. ಇದು ಹಲವರಿಗೆ ಆಶ್ಚರ್ಯ ಉಂಟುಮಾಡಿದೆ.

ಭಾರತದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಕೂಡ, ಪಂದ್ಯದ ಆರಂಭದಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿಗೆ ಓವರ್ ನೀಡದಿರುವ ನಾಯಕ ರೋಹಿತ್ ಶರ್ಮಾ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ನಾಯಕ ರೋಹಿತ್ ಶರ್ಮಾ ತಂತ್ರದಿಂದ ಆಘಾತಕ್ಕೊಳಗಾಗಿದ್ದರು, ಏಕೆಂದರೆ ನಾಯಕ ರೋಹಿತ್ ಮೊಹಮ್ಮದ್ ಶಮಿಗೆ ಪಂದ್ಯಗಳಲ್ಲಿ ಹೆಚ್ಚಿನ ಓವರ್ ಬೌಲಿಂಗ್ ಮಾಡಲು ಅವಕಾಶವನ್ನು ನೀಡುತ್ತಾರೆ ಎಂದು ನಿರೀಕ್ಷಿಸಿದ್ದರು.

 ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಪಂದ್ಯದ ಆರಂಭದಿಂದ ಬೌಲಿಂಗ್ ಮಾಡದ ಶಮಿ, ಅಂತಿಮ ನಿರ್ಣಾಯಕ ಓವರ್ ನಲ್ಲಿ ಬೌಲಿಂಗ್ ಮಾಡಿದರು. ತಾನು ಎಷ್ಟು ಪ್ರಭಾವಶಾಲಿಯಾಗಿದ್ದನೆಂದು ಅವರು ಸಾಬೀತು ಮಾಡಿದರು. ಯಾರ್ಕರ್ ಎಸೆತಗಳ ಮೂಲಕ ವಿಕೆಟ್ ಪಡೆದು ತಮ್ಮ ತಂಡವನ್ನು ಗೆಲ್ಲಿಸಿದರು.

"ಮೊಹಮ್ಮದ್ ಶಮಿ ಕೇವಲ ಆರು ಎಸೆತಗಳನ್ನು ಪಡೆದರು. ನೀವು ಅವರಿಗೆ ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ನಮಗೆಲ್ಲರಿಗೂ ಆಶ್ಚರ್ಯವಾಯಿತು. ಅಭ್ಯಾಸ ಪಂದ್ಯಗಳಲ್ಲಿ ಸಾಮಾನ್ಯವಾಗಿ ವಿಭಿನ್ನ ಪ್ರಯೋಗಗಳನ್ನು ಮಾಡಲು ಮತ್ತು ನಿಮ್ಮ ಆಟಗಾರರಿಗೆ ಅವಕಾಶಗಳನ್ನು ನೀಡಲು ಬಳಸಲಾಗುತ್ತದೆ." ಎಂದು ಅವರು ಹೇಳಿದರು.

ಸೂಪರ್ 12 ಹಂತಕ್ಕೇರುವುದೇ ನಮ್ಮ ಗುರಿ: ಜಿಂಬಾಬ್ವೆ ಸ್ಟಾರ್ ಆಟಗಾರ ಸಿಕಂದರ್ ರಾಜಾ ಹೇಳಿಕೆ

ಆತ ಎಂತ ಬೌಲರ್ ಎಂದು ಸಾಬೀತುಪಡಿಸಿದ್ದಾರೆ

ಆತ ಎಂತ ಬೌಲರ್ ಎಂದು ಸಾಬೀತುಪಡಿಸಿದ್ದಾರೆ

"ಶಮಿ ಹೆಚ್ಚಿನ ಓವರ್ ಪಡೆಯುತ್ತಾರೆ ಎಂದು ನಾವೆಲ್ಲರೂ ಆಶಿಸಿದ್ದೆವು, ಆದರೆ ರೋಹಿತ್ ಶರ್ಮಾ ಅದನ್ನು ಮಾಡಲಿಲ್ಲ. ಆಸ್ಟ್ರೇಲಿಯಾಕ್ಕೆ ಆರು ಎಸೆತಗಳಲ್ಲಿ 11 ರನ್ ಅಗತ್ಯವಿದ್ದಾಗ ಭಾರತವು ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು"

"ಆದರೆ, ಶಮಿ ಬಂದು ಯಾರ್ಕರ್‌ಗಳ ನಂತರ ಯಾರ್ಕರ್‌ಗಳನ್ನು ಬೌಲ್ ಮಾಡಿದರು. ಅವರು ಕೇವಲ ಒಂದು ಶಾರ್ಟ್ ಬಾಲ್ ಅನ್ನು ಬೌಲ್ ಮಾಡಿದರು, ಉಳಿದವುಗಳು ಎಲ್ಲಾ ಯಾರ್ಕರ್‌ಗಳಾಗಿವೆ." ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಶಮಿ ತಮಗೆ ಸಿಕ್ಕಿದ ಒಂದು ಓವರ್‍ ನಲ್ಲಿ ತಾನು ಎಂತಹ ಬೌಲರ್ ಎಂದು ಸಾಬೀತುಪಡಿಸಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದರು.

ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು

ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು

ಬಲಗೈ ಸೀಮರ್ ಅಂತಿಮ ಓವರ್‌ಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ತುಂಬಬಲ್ಲರು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

"ಮೊಹಮ್ಮದ್ ಶಮಿ ಸಾಮರ್ಥ್ಯ ಏನು ಎಂದು ಜಗತ್ತಿಗೆ ತೋರಿಸಲು ಕೇವಲ ಆರು ಎಸೆತಗಳನ್ನು ತೆಗೆದುಕೊಂಡರು. ಜಸ್ಪ್ರೀತ್ ಬುಮ್ರಾ ಅಲ್ಲಿ ಇಲ್ಲದಿರಬಹುದು, ಆದರೆ ನಾನು ಇಲ್ಲಿದ್ದೇನೆ ಎಂದು ಅವರು ಹೇಳುವಂತಿದೆ." ಎಂದು ಚೋಪ್ರಾ ಹೇಳಿದ್ದಾರೆ.

"ಅವರು ಭಾರತದ ಸಮಸ್ಯೆಗಳಿಗೆ ಉತ್ತರವಾಗಬಲ್ಲರು ಮತ್ತು 20 ನೇ ಓವರ್‌ನಲ್ಲಿಯೂ ಅವರು ಅತ್ಯುತ್ತಮ ಬೌಲಿಂಗ್ ಮಾಡಬಲ್ಲರು. ಅವರು ಕಳೆದ ವರ್ಷದಿಂದ ಭಾರತಕ್ಕಾಗಿ ಟಿ20 ಪಂದ್ಯಗಳಲ್ಲಿ ಆಡದಿದ್ದರೂ, ಅಂತಿಮವಾಗಿ ಅವರು ಅವಕಾಶ ಪಡೆದಾಗ ತಮ್ಮನ್ನು ತಾವು ಸಾಬೀತುಪಡಿಸಿದರು." ಎಂದು ಹೇಳಿದ್ದಾರೆ.

Story first published: Tuesday, October 18, 2022, 7:59 [IST]
Other articles published on Oct 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X