ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಔಟ್

ಹರಿಣಗಳ ನಾಡಿಗೆ ಕಾಲಿಡುವ ಮುನ್ನವೇ ಟೀಂ ಇಂಡಿಯಾ ಆಘಾತ ಅನುಭವಿಸಿದೆ. ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ಯಾಪ್ಟನ್ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದಾರೆ.
ಡಿಸೆಂಬರ್ 26ರಿಂದ ಪ್ರಾರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯ ಹಿನ್ನಲೆಯಲ್ಲಿ ಭಾರತವು ಇದೇ ತಿಂಗಳು ಡಿ. 16ರಂದೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಆದ್ರೆ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಇಡೀ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಅವರ ಜಾಗದಲ್ಲಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಪ್ರಿಯಾಂಕ್ ಪಾಂಚಾಲ್ ಅವರು ಸ್ಥಾನ ಪಡೆದಿದ್ದಾರೆ. ಆದ್ರೆ ಉಪನಾಯಕ ಯಾರು ಎಂಬ ಬಗ್ಗೆ ತಕ್ಷಣವೇ ನಿರ್ಧಾರವಾಗಿಲ್ಲ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ಒಂದು ವಾರದಿಂದ ಅಭ್ಯಾಸ ನಡೆಸುತ್ತಿದ್ದ ರೋಹಿತ್ ಅಭ್ಯಾಸದ ವೇಳೆ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಅವರು ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಾಗುತ್ತಾರೆಯೇ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಇನ್ನು ಗಾಯವು ಸ್ವಭಾವತಃ ಸಾಕಷ್ಟು ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
ಈ ಕುರಿತು ಬಿಸಿಸಿಐ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ . ಇನ್ನು ರೋಹಿತ್ ಜಾಗದಲ್ಲಿ ಸ್ಥಾನ ಪಡೆದ ಗುಜರಾತ್‌ನ ಆರಂಭಿಕ ಬ್ಯಾಟ್ಸ್‌ಮನ್ ಪಾಂಚಾಲ್, ಭಾರತ ಎ ಪರ ಮೂರು ಇನ್ನಿಂಗ್ಸ್‌ಗಳಲ್ಲಿ 40ರ ಸರಾಸರಿಯಲ್ಲಿ ಗರಿಷ್ಠ 96 ರನ್ ಗಳಿಸಿ ಒಟ್ಟು 120 ರನ್ ಗಳಿಸಿದರು. ಅವರು 100 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 45.52ರ ಬ್ಯಾಟಿಂಗ್ ಸರಾಸರಿಯಲ್ಲಿ 7011 ರನ್ ಗಳಿಸಿದ್ದಾರೆ ಮತ್ತು ಅವರ ಹೆಸರಲ್ಲಿ 24 ಶತಕಗಳಿವೆ.

ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿರುವ ಟೀಂ ಇಂಡಿಯಾ ಪ್ಲೇಯರ್ಸ್
ಹೌದು ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ 16ರಂದು ತೆರಳಲಿರುವ ಟೀಂ ಇಂಡಿಯಾ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ. ಇದಕ್ಕೂ ಮೊದಲು ಡಿಸೆಂಬರ್ 12 ರಿಂದಲೇ ಎಲ್ಲಾ ಆಟಗಾರರು ಮುಂಬೈನಲ್ಲಿ ನಾಲ್ಕು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
ರೋಹಿತ್ ಶರ್ಮಾ ಟೀಂ ಇಂಡಿಯಾದ ಯಶಸ್ವಿ ನಾಯಕನಾಗಬಹುದು: ಇಲ್ಲಿವೆ 4 ಕಾರಣಗಳು

ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ
ಬಾಕ್ಸಿಂಗ್ ಡೇ ಎನ್‌ಕೌಂಟರ್‌ನಿಂದ ಪ್ರಾರಂಭವಾಗಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಈಗಾಗಲೇ ಟೀಂ ಇಂಡಿಯಾ 18 ಸದಸ್ಯರನ್ನೊಳಗೊಂಡ ತಂಡವು ಪ್ರಕಟಗೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ಏಕದಿನ ತಂಡವನ್ನು ಹೆಸರಿಸುವ ಸಾಧ್ಯತೆಯಿದೆ.
ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ ಎನ್‌ಕೌಂಟರ್‌ನಿಂದ ಪ್ರಾರಂಭವಾಗುವ ಮೂರು ಟೆಸ್ಟ್‌ಗಳಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ ಇತ್ತೀಚೆಗೆ ಘೋಷಿಸಿತ್ತು, ಆದರೆ ಮುಂದಿನ ಒಂದೆರಡು ದಿನಗಳಲ್ಲಿ ODI ತಂಡವನ್ನು ಹೆಸರಿಸುವ ಸಾಧ್ಯತೆಯಿದೆ.
ಈ ಮೊದಲು ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದಲ್ಲಿ ನಿಗದಿಪಡಿಸಲಾಗಿತ್ತು. ಆದ್ರೆ ಈ ವೆನ್ಯೂಗಳನ್ನ ಮತ್ತೆ ಪರಿಷ್ಕರಿಸಿದ್ದು, ಸೆಂಚುರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ನಡೆಯಲಿದೆ. ಇನ್ನು ಎರಡನೇ ಪಂದ್ಯವು ಹೊಸ ವರ್ಷದಲ್ಲಿ, ಅಂದರೆ 2022 ರಿಂದ ಆರಂಭವಾಗಲಿದೆ.
2011ರಿಂದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಸ್: ಅಶ್ವಿನ್ ನಂ 1 ಸ್ಪಿನ್ನರ್

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
2021 ಫ್ಲ್ಯಾಶ್‌ಬ್ಯಾಕ್: ಈ ವರ್ಷ 2 ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದ ಟೀಂ ಇಂಡಿಯಾ
Read more at: https://kannada.mykhel.com/cricket/flashback-2021-india-lost-2-icc-trophies-in-this-year-021590.html

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications