Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK ಪರ ದಾಖಲೆ ಬರೆದ ರುತುರಾಜ್ ಗಾಯಕ್ವಾಡ್

Ruturaj Gaikwad

ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ ಗೆಲುವು ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ರಾಹುಲ್ ಪಡೆಯನ್ನು 153ರನ್‌ಗಳಿಗೆ ಕಟ್ಟಿಹಾಕಿದ್ದ ಚೆನ್ನೈ ಸುಲಭವಾಗಿ ಗುರಿಯನ್ನು ತಲುಪಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿದ್ದರೂ ಉತ್ತಮ ಪ್ರದರ್ಶನ ತೋರುವ ಮೂಲಕ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 9 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಈ ಗೆಲುವಿನ ಹಿಂದೆ ಗುರುವಿನ ಗಮ್ಮತ್ತು ಜೋರಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಅದಾಗಲೇ ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳಮುಟ್ಟಿದ ಬಳಿಕ ಅಮೂಲ್ಯ ರತ್ನದಂತೆ ಚೆನ್ನೈ ಪರ ಹೊಳಪು ಪ್ರದರ್ಶಿಸಿದ ಓಪನರ್ ರುತುರಾಜ್‌ ಗಾಯಕ್ವಾಡ್ ಸತತ ಮೂರನೇ ಅರ್ಧಶತಕ ದಾಖಲಿಸಿ ಮತ್ತೊಮ್ಮೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ್ರು. ಸಿಎಸ್‌ಕೆ ಪರ ಸತತ ಮೂರು ಬಾರಿ 50ರ ಗಡಿ ದಾಟಿದ ಗಾಯಕ್ವಾಡ್ ಈ ಸಾಧನೆ ಮಾಡಿದ ಮೊದಲ ಸಿಎಸ್‌ಕೆ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 49ಎಸೆತಗಳಲ್ಲಿ ಅಜೇಯ 62ರನ್ ಕಲೆಹಾಕಿದ ರುತುರಾಜ್ ಗಾಯಕ್ವಾಡ್ ಹಿಂದಿನ ಎರಡು ಪಂದ್ಯಗಳಲ್ಲಿ ಕೂಡ ಅರ್ಧಶತಕ ಗಳಿಸಿದ್ರು. ಕೆಕೆಆರ್ ವಿರುದ್ಧ 51*, ಆರ್‌ಸಿಬಿ ವಿರುದ್ಧ 72 ರನ್ ದಾಖಲಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್‌ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನದೊಂದಿಗೆ ಐಪಿಎಲ್ 2020ರ ಅಭಿಯಾನವನ್ನು ಮುಗಿಸಿದೆ.

Story first published: Monday, November 2, 2020, 10:03 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+