ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್ ಯಾದವ್‌ನನ್ನ ತಂಡದಿಂದ ಕೈ ಬಿಟ್ಟಿಲ್ಲ: ವಿಶ್ರಾಂತಿ ಅಷ್ಟೇ ಎಂದ ಜಸ್ಪ್ರೀತ್ ಬುಮ್ರಾ

Kuldeep yadav

ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಕ್ಕೂ ಮೊದಲೇ ಸ್ಪಿನ್ನರ್ ಕುಲ್‌ದೀಪ್ ಯಾದವ್‌ರನ್ನ ತಂಡದಿಂದ ಹೊರಗಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ವಿಷಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ತೆರೆ ಎಳೆದಿದ್ದಾರೆ.

ಎಡಗೈ ವ್ರಿಸ್ಟ್‌ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿದ್ದರೂ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಪಡೆಯಲಿಲ್ಲ. ಎರಡನೇ ಟೆಸ್ಟ್‌ಗೂ ಮುನ್ನವೇ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಸ್ಥಾನ ಒದಗಿಸಿ ಕುಲ್‌ದೀಪ್‌ ಯಾದವ್‌ರನ್ನ ಸ್ಕ್ವಾಡ್‌ನಿಂದ ಬಿಡಲಾಗಿದೆ.

ಸಾಕಷ್ಟು ಸಮಯದ ಕಾಲ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಟೀಂ ಇಂಡಿಯಾಕ್ಕೆ ವಾಪಸ್ಸಾಗಿದ್ದಾರೆ. ಎನ್‌ಎಸ್‌ಇ ಪುನರ್‌ವಸತಿ ಶಿಬಿರದಲ್ಲಿ ಫಿಟ್ನೆಸ್ ಕಂಡುಕೊಂಡಿರುವ ಗುಜರಾತ್ ಮೂಲದ ಆಲ್‌ರೌಂಡರ್ ಭಾರತ ತಂಡಕ್ಕೆ ವಾಪಸ್ಸಾಗಿರುವುದು ತಂಡದ ಬಲವನ್ನ ಹೆಚ್ಚಿಸಿದೆ.

ಇದೇ ವೇಳೆಯಲ್ಲಿ ಚೈನಾಮೆನ್ ಬೌಲರ್ ಕುಲ್‌ದೀಪ್ ಯಾದವ್‌ ಟೀಂ ಇಂಡಿಯಾದಿಂದ ಕೈ ಬಿಡಲಾಗಿದೆ. ಜಡೇಜಾ ಮತ್ತು ಅಕ್ಷರ್ ಪಟೇಲ್ ಗಾಯಗೊಂಡಿದ್ದರ ಪರಿಣಾಮ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದಿದ್ದ ಕುಲ್‌ದೀಪ್ ಯಾದವ್‌ಗೆ ಟೆಸ್ಟ್ ಸ್ಕ್ವಾಡ್‌ನಲ್ಲೂ ಸ್ಥಾನವನ್ನ ಪಡೆದಿದ್ದರು.

ಆದ್ರೆ ಅಕ್ಷರ್ ಸಂಪೂರ್ಣ ಫಿಟ್ ಆಗಿದ್ದು, ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಟೀಮ ಇಂಡಿಯಾ ಸೇರಿಕೊಳ್ಳಲಿದ್ದು, ಪರಿಣಾಮ ಕುಲ್‌ದೀಪ್ ಯಾದವ್‌ ತಂಡದಿಂದ ಹೊರಬೀಳಲಿದ್ದಾರೆ.

ಡೇ & ನೈಟ್ ಟೆಸ್ಟ್‌ನಿಂದ ಕುಲ್‌ದೀಪ್ ಯಾದವ್ ಹೊರಗೆ!

ಡೇ & ನೈಟ್ ಟೆಸ್ಟ್‌ನಿಂದ ಕುಲ್‌ದೀಪ್ ಯಾದವ್ ಹೊರಗೆ!

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಇದೇ ತಿಂಗಳ ಮಾರ್ಚ್‌ 12ರಿಂದ 16ರವರೆಗೆ ನಡೆಯಲಿರುವ ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ ಚೈನಾಮೆನ್ ಬೌಲರ್ ಕುಲ್‌ದೀಪ್ ಆಯ್ಕೆಯಾಗುವುದಿಲ್ಲ. ಪಂದ್ಯ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಸ್ಕ್ವಾಡ್‌ನಿಂದ ಹೊರಗಿಟ್ಟಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈ ವಿಚಾರವಾಗಿದ್ದ ಗೊಂದಲವನ್ನ ಬುಮ್ರಾ ಪರಿಹರಿಸಿದ್ದಾರೆ.

ಕುಲ್‌ದೀಪ್‌ರನ್ನ ತಂಡದಿಂದ ಕೈ ಬಿಟ್ಟಿಲ್ಲ, ಬಯೋ ಬಬಲ್‌ನಿಂದ ವಿಶ್ರಾಂತಿ!

ಕುಲ್‌ದೀಪ್‌ರನ್ನ ತಂಡದಿಂದ ಕೈ ಬಿಟ್ಟಿಲ್ಲ, ಬಯೋ ಬಬಲ್‌ನಿಂದ ವಿಶ್ರಾಂತಿ!

"ನೋಡಿ, ನಾವು ಅವರನ್ನು ತಂಡದಿಂದ ತೆಗೆದುಹಾಕಿಲ್ಲ. ಅವರು ಬಹಳ ಸಮಯದಿಂದ ಬಯೋ ಬಬಲ್‌ನಲ್ಲಿದ್ದರು, ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ. ಬಯೋ ಬಬಲ್‌ನಲ್ಲಿ ಹೆಚ್ಚು ಕಾಲ ಉಳಿಯುವುದು ಸುಲಭವಲ್ಲ. ಮಾನಸಿಕ ಅಂಶವು ಮುಖ್ಯವಾಗಿದೆ'' ಎಂದು ಬುಮ್ರಾ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಕ್ಷರ್ ಪಟೇಲ್ ಅವರ ಸೇರ್ಪಡೆಯ ಬಗ್ಗೆ ಕೇಳಿದಾಗ, ಫಿಟ್‌ನೆಸ್‌ಗೆ ಮರಳಿದ ನಂತರ ಆಲ್‌ರೌಂಡರ್ ಅವರನ್ನು ಸೇರಿಸುವುದು ಖಚಿತ ಎಂದು ಹೇಳಿದರು.

IPL 2022: ಈ 5 ಸೂಪರ್ ಜೋಡಿಗಳನ್ನ ಮತ್ತೆ ಒಟ್ಟಾಗಿ ನೋಡಲು ಸಾಧ್ಯವಿಲ್ಲ

ಅಕ್ಷರ್ ಪಟೇಲ್‌ಗೆ ಸ್ಥಾನ ಖಚಿತ ಎಂದ ಬುಮ್ರಾ

ಅಕ್ಷರ್ ಪಟೇಲ್‌ಗೆ ಸ್ಥಾನ ಖಚಿತ ಎಂದ ಬುಮ್ರಾ

"ಅಕ್ಷರ್ ಪಟೇಲ್ ಅವರು ಆಡಿದಾಗಲೆಲ್ಲಾ ತಂಡಕ್ಕೆ ಸಾಕಷ್ಟು ಮೌಲ್ಯವನ್ನು ಸೇರಿಸಿದ್ದಾರೆ, ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೇವಲ ಒಂದು ಕಡೆಯಲ್ಲದೆ ಎಲ್ಲಾ ವಿಭಾಗಗಳಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರು ಗಾಯಗೊಂಡಿದ್ದರು ಹೀಗಾಗಿ ಇದೀಗ ಫಿಟ್ ಆಗಿರುವಾಗ ಹಿಂತಿರುಗುತ್ತಾರೆ. ನಾವು ನಮ್ಮ ತಂಡದ ಸಂಯೋಜನೆಯನ್ನು ಚರ್ಚಿಸುತ್ತೇವೆ '' ಎಂದು ಬುಮ್ರಾ ಹೇಳಿದರು.

ರೋಹಿತ್ ಶರ್ಮಾ ಮನಸ್ಸು ತುಂಬಾ ಚೆನ್ನಾಗಿದೆ ಎಂದ ಆರ್. ಅಶ್ವಿನ್

Rohit Sharma ಬಗ್ಗೆ Ashwin ಹೇಳಿದ್ದೇನು? | Oneindia Kannada
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್-ಕೀಪರ್), ಕೆ.ಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ)

Story first published: Friday, March 11, 2022, 15:03 [IST]
Other articles published on Mar 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X