ಮರಿಯಾ ಶರಪೋವಾ ನಿದ್ದೆಗೆಡಿಸಿದ ಸಚಿನ್ 'ಫ್ಯಾನ್ಸ್'
ಬೆಂಗಳೂರು,ಜು.3: ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ ಎಂದಿರುವ ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ವಿರುದ್ಧ ಸಚಿನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಮರಿಯಾ ಫೇಸ್ ಬುಕ್ ಪುಟ, ಟ್ವಿಟ್ಟರ್ ಖಾತೆಯಲ್ಲಿ ಖಾರವಾದ ಪ್ರತಿಕ್ರಿಯೆಗಳನ್ನು ಹಾಕುವ ಮೂಲಕ ಸಚಿನ್ ಫ್ಯಾನ್ಸ್ ಆಕೆ ನಿದ್ದೆಗೆಡಿಸಿದ್ದಾರೆ.
ಲಂಡನ್ನಿನಲ್ಲಿ ಕೆಲ ದಿನಗಳ ಹಿಂದೆ ವಿಂಬಲ್ಡನ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರಷ್ಯಾದ ಟೆನ್ನಿಸ್ ತಾರೆ ಮರಿಯಾ ಶರಪೋವಾ ಅವರು ಸಚಿನ್ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಸಚಿನ್ ಗೊತ್ತಿಲ್ಲ ಎಂದಿದ್ದರು. ಶರಪೋವಾರ ಈ ಹೇಳಿಕೆ ಸಚಿನ್ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.[ಇಷ್ಟಕ್ಕೂ ಸಚಿನ್ ಬಗ್ಗೆ ಮರಿಯಾ ಹೇಳಿದ್ದೇನು?]
ಈ ಕುರಿತು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. Who is Maria Sharapova?' ಎಂಬುದು ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡ್ಆಗಿದೆ. ಫೇಸ್ ಬುಕ್ ನಲ್ಲಿ ಶರಪೋವಾ ಅಧಿಕೃತ ಪೇಜ್ ನಲ್ಲಿ ಬೈಗುಳಗಳ ಸುರಿಮಳೆಗೈದಿದ್ದಾರೆ. ಟ್ವಿಟ್ಟರ್ ನಲ್ಲಿರುವ 20 ಲಕ್ಷಕ್ಕೂ ಅಧಿಕ ಸಚಿನ್ ಫಾಲೋಯರ್ಸ್ ಗಳ ಪೈಕಿ ಹಲವರು ಶರಪೋವಾ ವಿರುದ್ಧ ಕಿಡಿ ಕಾರಿದ್ದಾರೆ.

ಸೋಲಿನ ಕಹಿ ಜತೆಗೆ ಸುದ್ದಿಗೋಷ್ಠಿಯಲ್ಲಿ
ವಿಂಬಲ್ಡನ್ ಐದನೇ ಸುತ್ತಿನಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಐದನೇ ಸೀಡ್ ನ ಜರ್ಮನಿಯ ಕರ್ಬರ್ ಅವರು 7-6, 4-6, 6-4 ರಲ್ಲಿ ಸೋಲಿಸಿದ್ದರು. ಮರಿಯಾ ಶರಪೋವಾ ಅವರು ಸೋಲಿನ ಕಹಿ ಜತೆಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾಗ ಪತ್ರಕರ್ತನೊಬ್ಬನ ಪ್ರಶ್ನೆಗೆ ಉತ್ತರಿಸಿದ್ದೇ ಈಗ ಮುಳುವಾಗಿದೆ.

ಪ್ರತಿ ವರ್ಷದಂತೆ ಸಚಿನ್ ರಿಂದ ಪಂದ್ಯ ವೀಕ್ಷಣೆ
ಪ್ರತಿ ವರ್ಷದಂತೆ ಈ ಬಾರಿಯೂ ವಿಂಬಲ್ಡನ್ ಟೂರ್ನಿ ವೀಕ್ಷಿಸಲು ತೆರಳಿದ್ದ ಸಚಿನ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಂಡ್ರ್ಯೂ ಸ್ಟ್ರಾಸ್, ಫುಟ್ಬಾಲ್ ಪಟು ಡೇವಿಡ್ ಬೆಕ್ ಹ್ಯಾಮ್ದಂಪತಿ ಸಾಥ್ ನೀಡಿದ್ದರು. ಎಲ್ಲರೂ ರಾಯಲ್ ಬಾಕ್ಸ್ ನಲ್ಲಿ ಕುಳಿತು ಪಂದ್ಯವೀಕ್ಷಿಸಿದ್ದರು.

ಮರಿಯಾ ಫೇಸ್ ಬುಕ್ ಪುಟ ಹೇಟ್ ಬುಕ್
ಮರಿಯಾ ಫೇಸ್ ಬುಕ್ ಪುಟ ಈಗ ಹೇಟ್ ಬುಕ್ ಆಗಿಬಿಟ್ಟಿದೆ. 20 ಸಾವಿರಕ್ಕೂ ಅಧಿಕ ಕಾಮೆಂಟ್ ಗಳು ಸಚಿನ್ ಫ್ಯಾನ್ಸ್ ಕಡೆಯಿಂದ ಬಂದಿವೆ. ಸಚಿನ್ ಅವರ ಕ್ರಿಕೆಟ್ ವೃತ್ತಿ ಜೀವನ ಬಗ್ಗೆ ಮಾಹಿತಿ ನೀಡುವ ಕಾಮೆಂಟ್ ಗಳ ಜತೆಗೆ ಶರಪೋವಾ ಡ್ರೆಸಿಂಗ್, ವೈಯಕ್ತಿಕ ಜೀವನ, ಮಾಡೆಲಿಂಗ್ ಬಗ್ಗೆ ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿದೆ.

ಮರಿಯಾ ಕ್ಷಮಾಪಣೆ ಕೇಳಲಿ: ಅಭಿಮಾನಿಗಳು
ಸಚಿನ್ ತೆಂಡೂಲ್ಕರ್ ಬಳಿ ಮರಿಯಾ ಬಹಿರಂಗವಾಗಿ ಕ್ಷಮಾಪಣೆ ಕೇಳಲಿ ಎಂದು ಸಚಿನ್ ಅಭಿಮಾನಿಗಳು ಎಲ್ಲೆಡೆ ಆಂದೋಲನ ಆರಂಭಿಸಿದ್ದಾರೆ.

ಅದು ಆಕೆ ತಪ್ಪಲ್ಲ ಎಂದು ವಾದಿಸಿದ್ದಾರೆ
ಮರಿಯಾ ಪ್ರತಿ ಪುಟ, ಚಿತ್ರಗಳನ್ನು ಹುಡುಕಿಕೊಂಡು ಹೋಗಿ ಸಚಿನ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.ಎಲ್ಲೋ ಕೆಲವರು ಮಾತ್ರ ಸಚಿನ್ ನಿಮಗೆ ದೇವರಿರಬಹುದು ಆದ್ರೆ, ಕ್ರಿಕೆಟ್ ಜಾಗತಿಕ ಕ್ರೀಡೆಯಲ್ಲ. ಸಚಿನ್ ಅವರು ರಷ್ಯಾದಲ್ಲೇನು ಆಡಿಲ್ಲ ಹೀಗಾಗಿ ಆಕೆಗೆ ಸಚಿನ್ ಬಗ್ಗೆ ಅರಿವಿಲ್ಲದಿದ್ದರೆ ಅದು ಆಕೆ ತಪ್ಪಲ್ಲ ಎಂದು ವಾದಿಸಿದ್ದಾರೆ.
ಸಚಿನ್ ಅಭಿಮಾನಿಗಳಿಗೆ ಸಂದೇಶ
ಸಚಿನ್ ಅಭಿಮಾನಿಗಳಿಗೆ ಪ್ರತಿ ಸಂದೇಶ
ಮರಿಯಾ ಯಾರು ಗೊತ್ತೇ
ಮರಿಯಾ ಯಾರು ಗೊತ್ತೇ ಎಂಬ ಪ್ರಶ್ನೆಗೆ ಹೀಗೊಂದು ಉತ್ತರ ಸಿಕ್ಕಿದೆ
ದೇಶದ ಮಾನ ಮರ್ಯಾದೆ ಹೋಯ್ತು
ಹುಚ್ಚು ಅಭಿಮಾನಿಗಳಿಂದ ದೇಶದ ಮಾನ ಮರ್ಯಾದೆ ಹೋಯ್ತು.. ಆಕೆಗೆ ಸಚಿನ್ ಗೊತ್ತಿಲ್ಲ ಎಂದರೆ ನೀವು ಯಾಕೆ ಅಷ್ಟು ಕೀಳು ಸಂದೇಶ ಹಾಕುತ್ತಿದ್ದೀರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications