Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ಆಟಗಾರ ಕ್ರಿಕೆಟ್ ಆಡಿದರೆ....! ಬೆಳಗಾವಿ ಹುಡುಗ ಕ್ಯಾಚ್‌ ಹಿಡಿದ ಶೈಲಿಗೆ ಸಚಿನ್ ಪ್ರತಿಕ್ರಿಯೆ

Sachin Tendulkar Funny Reaction About Amazing Catch In A Local Match At Belagavi

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಅತ್ಯುತ್ತಮ ಫೀಲ್ಡಿಂಗ್‌ಗಳನ್ನು ನೋಡುತ್ತೇವೆ. 'ಕ್ಯಾಚಸ್ ವಿನ್ ದ ಮ್ಯಾಚಸ್' (Catches Win The Matches) ಎನ್ನುವ ಜನಪ್ರಿಯ ಮಾತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ದೇಶೀಯ ಕ್ರಿಕೆಟ್, ಗಲ್ಲಿ ಕ್ರಿಕೆಟ್‌, ಟೆನಿಸ್ ಬಾಲ್ ಟೂರ್ನಿಗಳಲ್ಲಿ ಕೂಡ ಹಲವು ಅದ್ಬುತ ಕ್ಯಾಚ್‌ಗಳು ಆಗಾಗ ಗಮನ ಸೆಳೆಯುತ್ತವೆ.

ಇದೀಗ ಬೆಳಗಾವಿ ಹುಡುಗನೊಬ್ಬ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಕ್ಯಾಚ್ ಹೀಗೂ ಹಿಡಿಯಬಹುದು ಎಂದು ತೋರಿಸಿದ್ದಾನೆ. ವಿಡಿಯೋದಲ್ಲಿ ಇರುವ ಆಟಗಾರನ ಹೆಸರು ಕಿರಣ್ ತಾರಳೇಕರ್, ಬೌಂಡರಿ ಗೆರೆಯಾಚೆ ಹೋಗುತ್ತಿದ್ದ ಚೆಂಡನ್ನು ಹಿಡಿಯುವ ಕಿರಣ್ ತಾಳೇಕರ್ ಬೌಂಡರಿ ಗೆರೆಗೆ ಕಾಲು ತಾಗುವ ಭಯದಿಂದ ಚೆಂಡನ್ನು ಮೇಲೆಕ್ಕೆ ಎಸೆಯುತ್ತಾರೆ. ಆದರೆ, ಚೆಂಡು ಬೌಂಡರಿ ಗೆರೆಯಾಚೆ ಹೋಗುವುದನ್ನು ಕಂಡು, ಬೌಂಡರಿ ಗೆರೆ ದಾಟಿ ಫುಟ್ಬಾಲ್ ರೀತಿ ಚೆಂಡನ್ನು ಒದ್ದು ಬೌಂಡರಿ ಒಳಗೆ ಕಳುಹಿಸುತ್ತಾರೆ ಬೌಂಡರಿ ಗೆರೆಯ ಬಳಿಯಿದ್ದ ಮತ್ತೊಬ್ಬ ಫೀಲ್ಡರ್ ಆ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.

ಬೆಳಗಾವಿ ಆಟಗಾರನ ಕಾಲ್ಚಳಕಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಮಾರುಹೋಗಿದ್ದಾರೆ. ಮಾತ್ರವಲ್ಲದೆ, ಟ್ವಿಟರ್ ನಲ್ಲಿ ಆಟಗಾರನ ವಿಶಿಷ್ಠ ಕ್ಯಾಚ್ ವಿಡಿಯೋವನ್ನು ಹಂಚಿಕೊಂಡಿದ್ದು, ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಫುಟ್ಬಾಲ್ ಆಡುವ ಹುಡುಗನನ್ನು ಕ್ರಿಕೆಟ್ ಆಡಲು ಕರೆದುಕೊಂಡು ಬಂದರೆ ಹೀಗೆ ಆಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಆದ ವಿಡಿಯೋ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬುದ್ದಿವಂತಿಕೆ ಇದ್ದರೆ ಕ್ರಿಕೆಟ್‌ನಲ್ಲಿ ಹೇಗೆಲ್ಲಾ ಕ್ಯಾಚ್ ಹಿಡಿಯಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋ ಇದುವರೆಗೂ 38 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್‌ಗೆ 77 ಸಾವಿರ ಲೈಕ್ ಬಂದಿದ್ದು, ಸಾಕಷ್ಟು ಜನ ಆಟಗಾರನ ಚಾಕಚಕ್ಯತೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅದು ಔಟ್ ಅಲ್ಲ ಸಿಕ್ಸ್ ಎಂದು ವಾದಿಸಿದ್ದಾರೆ. ಆದರೆ, ಅಂಪೈರ್ ಮಾತ್ರ ಔಟ್ ಎಂದು ತೀರ್ಪು ನೀಡಿದ್ದಾರೆ.

Story first published: Monday, February 13, 2023, 10:37 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+