ಸಚಿನ್ ತೆಂಡೂಲ್ಕರ್‌ರ ಆಲ್ ಟೈಂ ಬೆಸ್ಟ್ 11 ಆಟಗಾರರು: ಧೋನಿ, ಕೊಹ್ಲಿಗಿಲ್ಲ ಸ್ಥಾನ, ಮುರಳೀಧರನ್‌ನ ಲೆಕ್ಕಕ್ಕೆ ಇಟ್ಟಿಲ್ಲ!

ಭಾರತದ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜಂಟಲ್‌ಮನ್ ಗೇಮ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಇವರ ಸಾಮರ್ಥ್ಯ ಹೇಗಿತ್ತು ಎಂಬುದಕ್ಕೆ ಇವರ ಬ್ಯಾಟ್‌ನಿಂದ ಸಿಡಿದ 100 ಶತಕಗಳೇ ಸಾರಿ ಸಾರಿ ಹೇಳುತ್ತವೆ.
ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 18,426 ರನ್ ಕಲೆಹಾಕಿದದ್ದಾರೆ. ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ಜೊತೆಗೆ 201 ವಿಕೆಟ್‌ಗಳು ಸಹ ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಂತೂ ಪ್ರಸ್ತುತ ಅವರ ದಾಖಲೆಯ ಸಮೀಪಕ್ಕೆ ಯಾರಿಗಾದ್ರೂ ಹೋಗಲು ಸಾಧ್ಯವಾಗುವಂತಿದ್ರೆ, ಅದು ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಗೆ ಮಾತ್ರ. ಹೀಗಿರುವಾಗ ಸಚಿನ್ ತೆಂಡೂಲ್ಕರ್ ತಮ್ಮ ಆಲ್ ಟೈಂ ಬೆಸ್ಟ್ ಇಲೆವೆನ್ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗಾಗಲಿ, ಭಾರತಕ್ಕೆ ಮೂರು ಐಸಿಸಿ ವಿಶ್ವಕಪ್ ಗೆದ್ದ ಧೋನಿಗಾಗಲಿ ಸ್ಥಾನ ಕೊಟ್ಟಿಲ್ಲ.

ಬಹುದೊಡ್ಡ ಆಟಗಾರರ ಹೆಸರನ್ನೇ ಕೈ ಬಿಟ್ಟ ಸಚಿನ್
ಮಾಸ್ಟರ್ ಬ್ಲಾಸ್ಟರ್ ತಮ್ಮ ಬೆಸ್ಟ್ ಇಲೆವೆನ್ ಆಟಗಾರರ ಪಟ್ಟಿಯಲ್ಲಿ ಪ್ರಮುಖ ದಿಗ್ಗಜ ಕ್ರಿಕೆಟಿಗರ ಹೆಸರನ್ನೇ ಕೈ ಬಿಟ್ಟಿದ್ದಾರೆ. ಇದರಲ್ಲಿ ತನ್ನ ಸಹ ಕ್ರಿಕೆಟಿಗರಾದ ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ಹೆಸರು ಇಲ್ಲವೇ ಇಲ್ಲ. ಅಷ್ಟೇ ಏಕೆ ಶ್ರೀಲಂಕಾದ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರ್ ಹೆಸರೇ ಲೆಕ್ಕಕ್ಕೆ ಇಟ್ಟಿಲ್ಲ.

ಭಾರತದ ಗೋಡೆ ರಾಹುಲ್‌ರನ್ನೇ ಮರೆತ್ರಾ ತೆಂಡೂಲ್ಕರ್!
ಟೀಂ ಇಂಡಿಯಾದ ಗೋಡೆ ಖ್ಯಾತಿ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗೆ ಸರಿಸಮಾನವಾಗಿ ಬ್ಯಾಟ್ ಬೀಸಿದ ಅಗ್ರಗಣ್ಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಂತೂ ದ್ರಾವಿಡ್‌ಗಿಂತ ಮತ್ತೊಬ್ಬ ಪ್ಲೇಯರ್ ಇಲ್ಲ ಎಂಬಂತೆ ಆಟವಾಡುತ್ತಿದ್ರು. ಆದ್ರೆ ಸಚಿನ್ ತೆಂಡೂಲ್ಕರ್ ಎಂಬ ಮೇರು ಪರ್ವತದಡಿಯ ನೆರಳಿನಲ್ಲಿ ದ್ರಾವಿಡ್‌ನಂತಹ ಅತ್ಯಮೂಲ್ಯ ದಿಗ್ಗಜ ಆಟಗಾರನು ಸ್ವಲ್ಪ ಮರೆಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹೀಗಿರುವಾಗ ಸಚಿನ್ ತೆಂಡೂಲ್ಕರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ರಾಹುಲ್‌ಗೆ ಸ್ಥಾನ ನೀಡದೇ ಇರುವುದು ದ್ರಾವಿಡ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಭಾರತದ ಬೌಲರ್‌ಗಳಿಂದ, ಪ್ರತಿ ಓವರ್‌ನಲ್ಲೂ ಹಾರ್ಟ್ ಅಟ್ಯಾಕ್ ಆದಂಗೆ ಆಗ್ತಿದೆ: ಅಂಪೈರ್

ತನ್ನ ಇಬ್ಬರು ಕುಚಿಕು ಗೆಳೆಯರನ್ನ ಪಟ್ಟಿಗೆ ಸೇರಿಸಿದ ಸಚಿನ್
ಕ್ರಿಕೆಟ್ ವಲಯದಲ್ಲಿ ಅದ್ರಲ್ಲೂ ವಿದೇಶಿ ತಂಡದಲ್ಲಿ ಸಚಿನ್ ನೆಚ್ಚಿನ ಆಟಗಾರ ಹಾಗೂ ಸ್ನೇಹಿತರಲ್ಲಿ ಪ್ರಮುಖರಾದ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಸಚಿನ್ ತೆಂಡೂಲ್ಕರ್‌ರ ಬೆಸ್ಟ್ 11 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರ ಜೊತೆಗೆ ಲೆಜೆಂಡರಿ ಆಟಗಾರ ವಿವಿಯನ್ ರಿಚರ್ಡ್ಸ್ ಸಚಿನ್ ಲಿಸ್ಟ್‌ನಲ್ಲಿದ್ದಾರೆ. ಇನ್ನು ತನ್ನ ಅತ್ಯಂತ ನಿಕಟ ಸ್ನೇಹಿತ ಹಾಗೂ ಆಟಗಾರ ಭಾರತದ ದಾದಾ ಖ್ಯಾತಿಯ ಸೌರವ್ ಗಂಗೂಲಿ ಹೆಸರನ್ನ ಸಚಿನ್ ಕೈ ಬಿಟ್ಟಿಲ್ಲ. ಜೊತೆಗೆ ತನ್ನ ಜೊತೆಗಿನ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ರನ್ನು ಸಚಿನ್ ಹೆಸರಿಸಿದ್ದಾರೆ.

ಮುರಳೀಧರನ್ ಹೆಸರಿಲ್ಲ, ವಾರ್ನ್‌ಗೆ ಅವಕಾಶ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಬೇಟೆಯಾಡಿರುವ ಮುತ್ತಯ್ಯ ಮುರಳೀಧರನ್‌ಗೆ ಸಚಿನ್ ತೆಂಡೂಲ್ಕರ್ ತಮ್ಮ ಬೆಸ್ಟ್ 11 ಆಟಗಾರರ ಪಟ್ಟಿಯಲ್ಲಿ ಸ್ಥಾನ ಒದಗಿಸಿಲ್ಲ. ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಅವಕಾಶ ನೀಡಿದ್ದಾರೆ. ಜೊತೆಗೆ ಭಜ್ಜಿ ಹರ್ಭಜನ್ ಸಿಂಗ್ ಸಚಿನ್ ಲಿಸ್ಟ್‌ನಲ್ಲಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ಸಚಿನ್ ತಮ್ಮ ಹೆಸರನ್ನೂ ಕೂಡ ಈ ಪಟ್ಟಿಯಲ್ಲಿ ಸೇರಿಸಿಲ್ಲ. ಹಾಗಿದ್ರೆ ಸಚಿನ್ ತೆಂಡೂಲ್ಕರ್ ಆಲ್ ಟೈಂ ಬೆಸ್ಟ್ 11 ಆಟಗಾರರ ಪಟ್ಟಿಯಲ್ಲಿ ಇನ್ನು ಯಾವೆಲ್ಲಾ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನ ಈ ಕೆಳಗೆ ಓದಿ
ವಾಂಡರರ್ಸ್ ಕ್ರೀಡಾಂಗಣದಲ್ಲಿ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಯಾರಿಗಿದೆ ಗೆಲುವಿನ ಅವಕಾಶ?

ಸಚಿನ್ ತೆಂಡೂಲ್ಕರ್‌ನ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರು
ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಜಾಕ್ವೆಸ್ ಕಾಲಿಸ್, ಸೌರವ್ ಗಂಗೂಲಿ, ಆಡಂ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ವಾಸಿಂ ಅಕ್ರಮ್, ಹರ್ಭಜನ್ ಸಿಂಗ್ ಮತ್ತು ಗ್ಲೆನ್ ಮೆಗ್ರಾತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications