For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022ರ ಬೆಸ್ಟ್‌ ಪ್ಲೇಯಿಂಗ್ 11 ಹೆಸರಿಸಿದ ಸಚಿನ್ ತೆಂಡೂಲ್ಕರ್ : ಕೊಹ್ಲಿ, ರೋಹಿತ್ ಇಲ್ಲ

Sachin

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಐಪಿಎಲ್ 2022ರ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಆಟಗಾರರನ್ನ ಹೆಸರಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 15ನೇ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಚೊಚ್ಚಲ ಸೀಸನ್‌ನಲ್ಲೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಸಕ್ತ 10 ತಂಡಗಳಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಹನ್ನೊಂದು ಆಟಗಾರರನ್ನ ಸಚಿನ್ ತೆಂಡೂಲ್ಕರ್ ಆಯ್ಕೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಆಯ್ಕೆ ಮಾಡಿರುವ ಬೆಸ್ಟ್ ತಂಡದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದಾರೆ.

ಸ್ಟಾರ್ ಆಟಗಾರ ಎಂದು ಹೆಸರಿಸಿಲ್ಲ ಎಂದ ತೆಂಡೂಲ್ಕರ್

ಸ್ಟಾರ್ ಆಟಗಾರ ಎಂದು ಹೆಸರಿಸಿಲ್ಲ ಎಂದ ತೆಂಡೂಲ್ಕರ್

"ಇದು ಆಟಗಾರರ ಖ್ಯಾತಿ ಅಥವಾ ಅವರ ಹಿಂದಿನ ಪ್ರದರ್ಶನಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಸಂಪೂರ್ಣವಾಗಿ ಅವರ ಈ ಸೀಸನ್‌ನ ಪ್ರದರ್ಶನ ಮತ್ತು ಈ ಸೀಸನ್‌ನಲ್ಲಿ ಅವರು ಏನನ್ನು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಆಧರಿಸಿದೆ "ಎಂದು ತೆಂಡೂಲ್ಕರ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋದಲ್ಲಿ ಹೇಳಿದ್ದಾರೆ.

"ಈ ಸೀಸನ್‌ನಲ್ಲಿ ಹಾರ್ದಿಕ್ ಅತ್ಯುತ್ತಮ ನಾಯಕರಾಗಿದ್ದರು. ಅವನು ತನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿದ್ದನು, ಕ್ರಿಯಾಶೀಲನಾಗಿದ್ದನು. ನಾನು ಯಾವಾಗಲೂ ಹೇಳುತ್ತಿದ್ದೆ ತಪ್ಪಾದಲ್ಲಿ ವಿಷಾದಿಸಬೇಡಿ, ಸಂಭ್ರಮಿಸಿ ಎಂದು. ನೀವು ಸಂಭ್ರಮಿಸಲು ಸಾಧ್ಯವಾದರೆ, ಕ್ಯಾಪ್ಟನ್ ಎದುರಾಳಿಗಳನ್ನು ಮೀರಿಸುತ್ತಿದ್ದಾರೆ ಎಂದರ್ಥ ಮತ್ತು ಹಾರ್ದಿಕ್ ಅದನ್ನೇ ಮಾಡಿದರು, "ಎಂದು ಅವರು ಹೇಳಿದ್ದಾರೆ.

ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ; ಹಾರ್ದಿಕ್ ಪತ್ನಿ ನತಾಶ

ಕೊಹ್ಲಿ, ರೋಹಿತ್‌ಗಿಲ್ಲ ಅವಕಾಶ

ಕೊಹ್ಲಿ, ರೋಹಿತ್‌ಗಿಲ್ಲ ಅವಕಾಶ

ಸಚಿನ್ ಈ ಮೊದಲೇ ತಿಳಿಸಿದಂತೆ ಯಾವುದೇ ಸ್ಟಾರ್ ಆಟಗಾರ ಎಂಬ ಆಧಾರದ ಮೇಲೆ ತಂಡವನ್ನ ಹೆಸರಿಸಿಲ್ಲ. ಹೀಗಾಗಿ ಐಪಿಎಲ್ 2022ರಲ್ಲಿ ಫ್ಲಾಪ್ ಆದ ಸ್ಟಾರ್ ಪ್ಲೇಯರ್‌ಗಳಾದ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಅವಕಾಶ ನೀಡಿಲ್ಲ.

IPL ಫೈನಲ್‌ಗಳಲ್ಲಿ ಒಂದೇ ದಿನ ವಿರಾಟ್ ಕೊಹ್ಲಿ, ಬಟ್ಲರ್‌ಗೆ ನಿರಾಸೆ; ಏನಿದರ ಕಥೆ-ವ್ಯಥೆ!

ಜೋಸ್ ಬಟ್ಲರ್, ಶಿಖರ್ ಧವನ್‌ಗೆ ಓಪನಿಂಗ್ ಸ್ಥಾನ

ಜೋಸ್ ಬಟ್ಲರ್, ಶಿಖರ್ ಧವನ್‌ಗೆ ಓಪನಿಂಗ್ ಸ್ಥಾನ

ಸಚಿನ್ ತೆಂಡೂಲ್ಕರ್ ತನ್ನ ಬೆಸ್ಟ್ ಐಪಿಎಲ್ 2022 ತಂಡದಲ್ಲಿ ರಾಜಸ್ತಾನ್ ರಾಯಲ್ಸ್ ಓಪನರ್, ಆರೆಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡದ ಓಪನರ್ ಆಗಿದ್ದ ಶಿಖರ್ ಧವನ್‌ ಅವರನ್ನು ತಂಡದ ಓಪನರ್ಸ್ ಆಗಿ ಆಯ್ಕೆ ಮಾಡಿದ್ದಾರೆ. ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ್ದ ಬಟ್ಲರ್ (863) , ಹಾಗೂ ಶಿಖರ್ ಧವನ್ (460) ಉತ್ತಮ ರನ್ ಕಲೆಹಾಕಿದ್ದರು.

ಕೆ.ಎಲ್ ರಾಹುಲ್‌ಗೆ ಮೂರನೇ ಸ್ಥಾನ, ಪಾಂಡ್ಯಗೆ 4ನೇ ಕ್ರಮಾಂಕ

ಕೆ.ಎಲ್ ರಾಹುಲ್‌ಗೆ ಮೂರನೇ ಸ್ಥಾನ, ಪಾಂಡ್ಯಗೆ 4ನೇ ಕ್ರಮಾಂಕ

ಸಚಿನ್ ತಂಡದ ಮೂರನೇ ಕ್ರಮಾಂಕದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಜೊತೆಗೆ ಅದೇ ತಂಡದ ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್‌ಗೆ ಐದನೇ ಸ್ಥಾನ, ಪಂಜಾಬ್ ಕಿಂಗ್ಸ್‌ನ ಲಿಯಾಮ್ ಲಿವಿಂಗ್‌ಸ್ಟೋನ್‌ ಹಾಗೂ ಆರ್‌ಸಿಬಿಯ ಫಿನಿಷರ್ ದಿನೇಶ್ ಕಾರ್ತಿಕ್‌ಗೂ ಅವಕಾಶ ನೀಡಲಾಗಿದೆ.

ಮೂವರು ಭಾರತೀಯ ಪೇಸರ್‌ಗಳಿಗೆ ತಂಡದಲ್ಲಿ ಅವಕಾಶ

ಮೂವರು ಭಾರತೀಯ ಪೇಸರ್‌ಗಳಿಗೆ ತಂಡದಲ್ಲಿ ಅವಕಾಶ

ಸಚಿನ್ ಆಯ್ಕೆ ಮಾಡಿರುವ ತಂಡದಲ್ಲಿ ಪೇಸರ್‌ಗಳೆಲ್ಲರೂ ಟೀಂ ಇಂಡಿಯಾಕ್ಕೆ ಆಡುವವರೇ ಆಗಿದ್ದು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಲಾಗಿದೆ. ಜೊತೆಗೆ ಪರ್ಪಲ್ ಕ್ಯಾಪ್‌ ವಿನ್ನರ್ ಯುಜವೇಂದ್ರ ಚಹಾಲ್ ಜೊತೆಗೆ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್‌ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದಾರೆ.

ವಿಶ್ವದಲ್ಲಿ ಅನೇಕ ಯುವ ಬೌಲರ್‌ಗಳು ಹುಟ್ಟುಕೊಂಡಿದ್ದರೂ ಸಹ ಜಸ್ಪ್ರೀತ್ ಬುಮ್ರಾ ಬೆಸ್ಟ್ ಡೆತ್ ಓವರ್ ಬೌಲರ್ ಎಂದು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.

IPL ಫೈನಲ್ ಪಂದ್ಯಕ್ಕೂ ಮುಂಚೆ ಸೈಲೆಂಟಾಗಿದ್ದ ಸಂಜು ಸ್ಯಾಮ್ಸನ್ ಪತ್ನಿ ನಿನ್ನೆ ಫುಲ್ ವೈಲೆಂಟ್ | Oneindia Kannada
ಸಚಿನ್ ತೆಂಡೂಲ್ಕರ್ ಅವರ ಬೆಸ್ಟ್ ಪ್ಲೇಯಿಂಗ್ 11

ಸಚಿನ್ ತೆಂಡೂಲ್ಕರ್ ಅವರ ಬೆಸ್ಟ್ ಪ್ಲೇಯಿಂಗ್ 11

ಜೋಸ್ ಬಟ್ಲರ್, ಶಿಖರ್ ಧವನ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ದಿನೇಶ್ ಕಾರ್ತಿಕ್, ರಶೀದ್ ಖಾನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್

Story first published: Tuesday, May 31, 2022, 14:34 [IST]
Other articles published on May 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+