ಸಂಜು ಸ್ಯಾಮ್ಸನ್ 2.0: ಇನ್ನೇನಿದ್ರೂ ಆತನದ್ದೇ ಹವಾ.. ಎಂದ ರವಿಚಂದ್ರನ್ ಅಶ್ವಿನ್

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಪ್ರಮುಖ ಸ್ಕ್ವಾಡ್‌ಗೆ ಸೇರುವ ಎಲ್ಲಾ ಲಕ್ಷಣಗಳನ್ನ ತೋರಿದ್ದಾರೆ. ಸರಣಿಯಲ್ಲಿ 118ರನ್‌ಗಳನ್ನ ದಾಖಲಿಸುವುದರ ಜೊತೆಗೆ ಮೂರು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಐಪಿಎಲ್ 2022ರ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಭರ್ಜರಿ ಪ್ರದರ್ಶನ ನೀಡಿದ ಸ್ಯಾಮ್ಸನ್ ಅದ್ಭುತ ಪ್ರತಿಭೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಈ ಹಿಂದೆ ಸಿಕ್ಕ ಅವಕಾಶವನ್ನ ಕಬಳಿಸುವಲ್ಲಿ ಎಡವಿದ್ದ ಸ್ಯಾಮ್ಸನ್ ಭಾರತದ ಪರ ಪದಾರ್ಪಣೆ ಮಾಡಿ ತುಂಬಾ ಸಮಯವೇ ಕಳೆದು ಹೋದ್ರೂ ಸಹ, ಖಾಯಂ ಸ್ಥಾನ ಪಡೆಯುವಲ್ಲಿ ಎಡವಿದ್ರು. ಹೀಗಿರುವಾಗ ಕಳೆದ ಕೆಲವು ತಿಂಗಳಿನಿಂದ ಸಂಜು ಕೊಟ್ಟ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರ
ಸಂಜು ಕಳೆದ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಅಜೇಯರಾಗಿ ಉಳಿಯುವ ಮೂಲಕ ಮಿಂಚಿನ ಆಟ ಪ್ರದರ್ಶಿಸಿದರು. 114.56ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿ 118 ರನ್ ಗಳಿಸಿದರು. ಇದರಲ್ಲಿ ಅರ್ಧಶತಕ ಕೂಡ ಸೇರಿತ್ತು. ಅವರ ಅತ್ಯುತ್ತಮ ಪ್ರದರ್ಶನವೆಂದರೆ ಮೊದಲ ಪಂದ್ಯದಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ 86 ಆಗಿತ್ತು.
ಸಂಜು ಈ ಆಟದೊಂದಿಗೆ ಫಿನಿಶಿಂಗ್ ಪಾತ್ರದಲ್ಲಿ ತಮ್ಮ ಶ್ರೇಷ್ಠತೆಯನ್ನು ಒತ್ತಿಹೇಳಿದರು. ಹೀಗಾಗಿಯೇ ಭಾರತದ ಸ್ಟಾರ್ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರು ಸಂಜು ಅವರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದಲ್ಲಿರುವ ಆ್ಯಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜು ಅವರನ್ನು ಹೊಗಳಿದ್ದಾರೆ.
ಶಮಿ ಅಲ್ಲ, ಚಹರ್ ಅಲ್ಲ: ಜಸ್ಪ್ರೀತ್ ಬೂಮ್ರಾ ಬದಲಿಗೆ ಗವಾಸ್ಕರ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತಾ!

ಸ್ಯಾಮ್ಸನ್ ಪ್ರದರ್ಶನ ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿನ ಪ್ರದರ್ಶನವು ಸಂಜು ಸ್ಯಾಮ್ಸನ್‌ಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಸಂಜು ಅದ್ಭುತ ಆಟಗಾರ ಮತ್ತು ತುಂಬಾ ಒಳ್ಳೆಯ ವ್ಯಕ್ತಿ. ಅವರು ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಸಂಜು ಅವರಲ್ಲಿ ಅಸಾಧಾರಣ ಪ್ರತಿಭೆಯೂ ಇದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಅವರು ಐಪಿಎಲ್‌ನಲ್ಲಿ ಸಂಜು ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.
ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ವಿಘ್ನ: ದೀಪಕ್ ಚಹಾರ್ ಕೂಡ ಔಟ್!

ಅಜೇಯ 83ರನ್ ಕಲೆಹಾಕಿದ ಸಂಜು ಸ್ಯಾಮ್ಸನ್
ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮರೆಯಲಾಗದ ಇನ್ನಿಂಗ್ಸ್ ಆಡಿದ್ದರು. 40 ಓವರ್‌ಗಳಲ್ಲಿ 250 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಶಿಖರ್ ಧವನ್, ಶುಭಮನ್ ಗಿಲ್ ಸಿಂಗಲ್ ಡಿಜಿಟ್‌ಗೆ ಔಟಾದ್ರೆ, ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಉತ್ತಮ ಆಟವಾಡುವಲ್ಲಿ ಎಡವಿದ್ರು. ಆದ್ರೆ ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು.
ಪಂದ್ಯದ ಅಂತ್ಯದವರೆಗೂ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್ ಅದ್ಭುತ ಆಟವಾಡಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಶತ ಪ್ರಯತ್ನ ನಡೆಸಿದ್ರು. 63 ಎಸೆತಗಳಲ್ಲಿ ಅಜೇಯ 83ರನ್ ಕಲೆಹಾಕಿದ ಸಂಜು ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
''ಸಂಜು ಭಾರತವನ್ನು ಬಹುತೇಕ ಗೆಲ್ಲುವ ಹಂತಕ್ಕೆ ಕೊಂಡೊಯ್ದರು ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಅಧ್ಯಾಯ 2.0 ಇಲ್ಲಿಂದ ಪ್ರಾರಂಭವಾಗುತ್ತಿದೆ ಮತ್ತು ಅದು ಉತ್ತಮವಾಗಿರುತ್ತದೆ, "ಎಂದು ಅಶ್ವಿನ್ ಸೇರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications