ಸೌರವ್ ಗಂಗೂಲಿಗೆ ಬಿಸಿಸಿಐ ಪಟ್ಟವೂ ಸಿಗಲಿಲ್ಲ, ಐಸಿಸಿ ಚುನಾವಣೆಗೂ ಅವಕಾಶವಿಲ್ಲ!

ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಈಗ ಮಾಜಿ ಅಧ್ಯಕ್ಷರಾಗಿದ್ದಾರೆ. ಮುಂಬೈನಲ್ಲಿ ಮಂಗಳವಾರ (ಅ.18) ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ CABಯನ್ನು ಪ್ರತಿನಿಧಿಸಿದ್ದ ಸೌರವ್ ಬರಿಗೈನಲ್ಲಿ ಮನೆಗೆ ವಾಪಸ್ಸಾಗಿದ್ದಾರೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಸೌರವ್ ಅವರನ್ನು ಬಿಸಿಸಿಐ ಕಳುಹಿಸುತ್ತದಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಆದ್ರೆ ಆ ಎಲ್ಲಾ ಸಾಧ್ಯತೆಗಳು ಇದೀಗ ಕೊನೆಗೊಂಡಿವೆ.
ಐಸಿಸಿ ಚುನಾವಣೆಯಲ್ಲಿ ಬಿಸಿಸಿಐ ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗಂಗೂಲಿಗೆ ಅಲ್ಲೂ ಅವಕಾಶ ಸಿಗೋದು ಅನುಮಾನವಾಗಿದೆ.

ಐಸಿಸಿ ಚುನಾವಣೆಗೆ ಕಳುಹಿಸಿಕೊಡಿ ಎಂದಿದ್ದ ಮಮತಾ ಬ್ಯಾನರ್ಜಿ
ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ್ರೂ ಸಹ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಅ.18) ಪ್ರತಿಕ್ರಿಯಿಸಿದ್ದರು.
ಗಂಗೂಲಿ ಅವರನ್ನು ಬೆಂಬಲಿಸಿ ಮಾತನಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಐಸಿಸಿ ಅಧ್ಯಕ್ಷರಾಗಲು ಚುನಾವಣೆಗೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಲು ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಮನವಿ ಮಾಡಿದರು. ಸೌರವ್ ಗಂಗೂಲಿ ಬಗ್ಗೆ ಜಗತ್ತು ಹೆಮ್ಮೆ ಪಡುತ್ತಿದೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಟಗಾರ ಮತ್ತು ಉತ್ತಮ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ. ಅಮಿತ್ ಶಾ ಪುತ್ರನಿಗೆ ಮೂರು ವರ್ಷಗಳ ಅಧಿಕಾರಾವಧಿ ನೀಡಲಾಗಿದೆ. ಸೌರವ್ ಗಂಗೂಲಿಗೆ ಐಸಿಸಿ ಹೋಗಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.

ಐಸಿಸಿಯ ಪ್ರಸ್ತುತ ಅಧ್ಯಕ್ಷರನ್ನೇ ಮುಂದುವರಿಸಲು ಬಿಸಿಸಿಐ ಯೋಜನೆ!
ಬಿಸಿಸಿಐ ಮೂಲಗಳ ಪ್ರಕಾರ, ಐಸಿಸಿಯ ಪ್ರಸ್ತುತ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಮುಂದಿನ ಅವಧಿಗೆ ಹುದ್ದೆಯಲ್ಲಿ ಉಳಿಯಲು ಬಿಸಿಸಿಐ ಬೆಂಬಲ ನೀಡುತ್ತಿದೆ. ಸೌರವ್ ಅವರನ್ನು ಬಾರ್ಕ್ಲಿ ವಿರುದ್ಧ ಬಿಸಿಸಿಐ ಕಣಕ್ಕಿಳಿಸುತ್ತಿಲ್ಲ ಎಂಬುದು ಇಂದಿನ ಎಜಿಎಂನಲ್ಲಿ ಸ್ಪಷ್ಟವಾಗಿದೆ. ಐಸಿಸಿಯಲ್ಲಿ ಮಂಡಳಿಯನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ.
ಮುಂಬೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಂತರ, ಐಸಿಸಿಯಲ್ಲಿ ಬಿಸಿಸಿಐ ಅನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೂ ಮುನ್ನ ಬಿಸಿಸಿಐ ಪರವಾಗಿ ಸೌರವ್ ಗಂಗೂಲಿ ಮತ್ತು ಜೈ ಶಾ ಐಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಐಸಿಸಿ ಮಂಡಳಿ ಸಭೆಯಲ್ಲಿ ಜಯ್ ಶಾ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಪ್ರತಿನಿಧಿಸಲಿದ್ದಾರೆ ಎಂದು ನಂಬಲಾಗಿದೆ.
ಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರ

ನ್ಯೂಜಿಲೆಂಡ್‌ನ ಬಾರ್ಕ್ಲಿಗೆ ಮತ್ತೊಂದು ಅವಧಿಗೆ ಅವಕಾಶ!
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ. ಬಿಸಿಸಿಐ ಯಾರನ್ನಾದರೂ ನೇಮಿಸಿದ್ದರೆ ಅವರು ಐಸಿಸಿ ಅಧ್ಯಕ್ಷರಾಗಬಹುದಿತ್ತು. ಸೌರವ್ ಬಗ್ಗೆ ಅವರ ಅಭಿಮಾನಿಗಳು ಸಹಜವಾಗಿಯೇ ಭರವಸೆ ಹೊಂದಿದ್ದರು. ಆದರೆ ಬಿಸಿಸಿಐ, ನ್ಯೂಜಿಲೆಂಡ್‌ನ ಬಾರ್ಕ್ಲಿಯನ್ನು ಅವರ ಹುದ್ದೆಯಲ್ಲಿ ಇನ್ನೂ ಒಂದು ಅವಧಿಗೆ ಮುಂದುವರಿಸುವಂತೆ ಬೆಂಬಲಿಸಲು ನಿರ್ಧರಿಸಿದೆ.
ಸೌರವ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದರೊಂದಿಗೆ ರಾಜಕೀಯವೂ ಪ್ರಾರಂಭವಾಗಿದೆ. ತೃಣಮೂಲ ಕಾಂಗ್ರೆಸ್ ಆರಂಭದಿಂದಲೂ ಕೇಂದ್ರದ ಆಡಳಿತ ಪಕ್ಷವಾದ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಬಂದಿದೆ. ಸೋಮವಾರ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೌರವ್ ಅವರನ್ನು ಅತ್ಯಂತ ಅರ್ಹ ಎಂದು ಕರೆದಿದ್ದು, ಐಸಿಸಿಗೆ ಕಳುಹಿಸಲು ಕ್ರಮವನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
T20 ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಈ ನಾಲ್ವರಿಗೆ ಅವಕಾಶ ಡೌಟ್!

ಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಆಯ್ಕೆ
ಅಕ್ಟೋಬರ್ 18 ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಸಿಸಿಐ ಎಜಿಎಂ ಸಭೆಯಲ್ಲಿ ಕರ್ನಾಟಕ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆಯಲ್ಲಿ ಕಾರ್ಯದರ್ಶಿಯಾಗಿ ಅಮಿತ್ ಶಾ ಪುತ್ರ ಜಯ್ ಷಾ ಮುಂದುವರಿದಿದ್ದಾರೆ. ಇದೇ ವೇಳೆಯಲ್ಲಿ ಪದಾಧಿಕಾರಿಗಳ ಚುನಾವಣೆಯೂ ನಡೆದಿದೆ. ಜೊತೆಗೆ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಕೂಡ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications