ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಶದಾಬ್ ಖಾನ್, ಅನ್ ಕ್ಯಾಪ್ಡ್ ಆಟಗಾರ ಹೈದರ್ ಅಲಿ, ವೇಗಿ ಹ್ಯಾರಿಸ್ ರೌಫ್‌ಗೆ ಮಾರಕ ಕೊರನಾವೈರಸ್ ಸೋಂಕು ತಗುಲಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಈ ವಿಚಾರವನ್ನು ಖಾತರಿಪಡಿಸಿದೆ.
ಮೂವರೂ ಆಟಗಾರರು ಭಾನುವಾರ ರಾವಲ್ಪಿಂಡಿಯಲ್ಲಿ ನಡೆಸಿದ ಪರೀಕ್ಷೆಯ ಮೊದಲು ಯಾವುದೇ ಲಕ್ಷಣಗಳನ್ನು ತೋರಿಸಿರಲಿಲ್ಲ ಎಂದು ಪಿಸಿಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 'ಮೂವರು ಆಟಗಾರರಾದ ಹೈದರ್ ಅಲಿ, ಹ್ಯಾರಿಸ್ ರೌಫ್ ಮತ್ತು ಶಾದಾಬ್ ಖಾನ್ ಅವರಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ ಎಂದು ಪಿಸಿಬಿ ಈ ಮೂಲಕ ಎಂದು ಖಚಿತಪಡಿಸಿದೆ,' ಎಂದು ಪಿಸಿಬಿ ಪ್ರಕಟಣೆ ತಿಳಿಸಿದೆ.
'ಇಂಗ್ಲೆಂಡ್‌ಗೆ ಪಾಕಿಸ್ತಾನ ತಂಡದ ಪ್ರವಾಸದ ಸಲುವಾಗಿ ಭಾನುವಾರ ರಾವಲ್ಪಿಂಡಿಯಲ್ಲಿ ನಡೆಸಲಾಗ ಕೊರೊನಾ ವೈರಸ್ ಪರೀಕ್ಷೆಗೂ ಮುನ್ನ ಆಟಗಾರರು ಯಾವುದೇ ಗುಣಲಕ್ಷಣಗಳನ್ನು ತೋರಿಸಿರಲಿಲ್ಲ.,' ಎಂದು ಪಿಸಿಬಿ ಮಾಹಿತಿ ನೀಡಿದೆ. ಆಟಗಾರರಿಗೆ ಕೂಡಲೇ ಸೆಲ್ಫ್ ಐಸೊಲೇಶನ್‌ಗೆ ಸಲಹೆ ನೀಡಲಾಗಿದೆ ಎಂದೂ ಪಿಸಿಬಿ ಹೇಳಿದೆ.
ಪಾಕ್‌ನ ಇನ್ನಿಬ್ಬರು ಆಟಗಾರರಾದ ಇಮಾದ್ ವಸಿಮ್ ಮತ್ತು ಉಸ್ಮಾನ್ ಶಿನ್ವಾರಿ ಕೂಡ ರಾವಲ್ಪಿಂಡಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಅವರಿಗೆ ಫಲಿತಾಂಶ ನೆಗೆಟಿವ್ ಬಂದಿದೆ. ಇಬ್ಬರೂ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಜೂನ್ 24ರಂದು ಲಾಹೋರ್‌ಗೆ ಪ್ರಯಾಣಿಸಲಿದ್ದಾರೆ.
ಪಾಕ್ ತಂಡದ ಇಂಗ್ಲೆಂಡ್ ಪ್ರವಾಸವು 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ಜುಲೈ 3೦ರಿಂದ ಟೆಸ್ಟ್ ಸರಣಿ ಆರಂಭಗೊಂಡರೆ, ಆಗಸ್ಟ್ 29ರಿಂದ ಟಿ20ಐ ಸರಣಿ ಶುರುವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications