For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ನ್ಯೂಸ್‌ ಚಾನೆಲ್‌ನಲ್ಲಿ ಶಾಹಿದ್ ಅಫ್ರಿದಿ ಮತ್ತು ಅಹ್ಮದ್ ಶೆಹಜಾದ್ ಕಿತ್ತಾಟ

Afridi and shehzad

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಮತ್ತೋರ್ವ ಪಾಕ್ ಕ್ರಿಕೆಟಿಗ ಅಹ್ಮದ್ ಶೆಹ್ಜಾದ್ ನ್ಯೂಸ್‌ ಚಾನೆಲ್‌ವೊಂದರಲ್ಲಿ ವಾಗ್ದಾದ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಅಹ್ಮದ್‌ ಶೆಹ್ಜಾದ್‌ಗೆ ತಾನು ಬೆಂಬಲ ನೀಡಿದ್ದಕ್ಕಾಗಿ, ತಾನು ನಿವೃತ್ತಿ ಪಡೆದ ಮೇಲೆ ಆತನನ್ನ ಗುರಿಯಾಗಿಸಲಾಯಿತು ಎಂದು ಅಫ್ರಿದಿ ಹೇಳಿದ್ದರು.

ಇದಕ್ಕೆ ಉತ್ತರಿಸಿದ ಅಹ್ಮದ್ ಶೆಹ್ಜಾದ್‌, ಅಫ್ರಿದಿಯಿಂದ ತನಗೆ ಹೆಚ್ಚು ಅವಕಾಶ ಸಿಗಲಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಹ್ಮದ್ ಶೆಹಜಾದ್ ಕೊನೆಯ ಬಾರಿಗೆ 2019 ರಲ್ಲಿ ಪಾಕಿಸ್ತಾನ ಪರ ಟಿ20 ಪಂದ್ಯಗಳನ್ನಾಡಿದರು. ಕಳೆದ ತಿಂಗಳಷ್ಟೇ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅವಕಾಶಗಳನ್ನು ನಿರಾಕರಿಸಿದ್ದಕ್ಕಾಗಿ ಟೀಕಿಸಿದರು.

ಪಾಕ್‌ ಕ್ರಿಕೆಟ್‌ ಮಂಡಳಿ ನಿರ್ವಹಣೆ, ಕೋಚಿಂಗ್ ಸಿಬ್ಬಂದಿ ಮತ್ತು ಮಾಜಿ ತರಬೇತುದಾರರು ತಮ್ಮ ವೃತ್ತಿಜೀವನವನ್ನು 'ಹಾಳುಮಾಡಲು ಮತ್ತು ನೋಯಿಸಲು' ಆರೋಪ ಮಾಡಿದ್ದರು.

ಪಾಕಿಸ್ತಾನ ನ್ಯೂಸ್ ಚಾನೆಲ್‌ನಲ್ಲಿ ಅಫ್ರಿದಿ-ಶೆಹಜಾದ್ ಮುಖಾಮುಖಿ

ಪಾಕಿಸ್ತಾನ ನ್ಯೂಸ್ ಚಾನೆಲ್‌ನಲ್ಲಿ ಅಫ್ರಿದಿ-ಶೆಹಜಾದ್ ಮುಖಾಮುಖಿ

ಇತ್ತೀಚೆಗಷ್ಟೇ ಅಹ್ಮದ್ ಶೆಹಜಾದ್‌ ಮತ್ತು ಶಾಹಿದ್ ಅಫ್ರಿದಿ ಪಾಕಿಸ್ತಾನದ ಟಿವಿ ನ್ಯೂಸ್ ಚಾನೆಲ್‌ನಲ್ಲಿ ಚರ್ಚೆಯೊಂದರಲ್ಲಿ ಭಾಗಿಯಾಗಿದ್ದರು. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಮಾ ಟಿವಿ ಚಾನೆಲ್‌ನಲ್ಲಿ ಶಾಹಿದ್‌ ಅಫ್ರಿದಿ ಪ್ಯಾನೆಲ್‌ ಎಕ್ಸ್‌ಪರ್ಟ್‌ ಆಗಿ ಕಾಣಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ಅಫ್ರಿದಿ ತನ್ನ ಅವಧಿಯ ನಂತರದಲ್ಲಿ ಅಹಮ್ಮದ್ ಶೆಹಜಾದ್‌ಗೆ ಹೆಚ್ಚಿನ ಬೆಂಬಲ ನೀಡಿದ್ದೆನು. ಆದ್ರೆ ಬಳಿಕ ಇದೇ ಕಾರಣಕ್ಕಾಗಿ ಆತನನ್ನು ಟಾರ್ಗೆಟ್ ಮಾಡಲಾಯಿತು ಎಂದು ಹೇಳಿಕೆ ನೀಡಿದ್ದರು.

"ಅಹ್ಮದ್ ಅವರನ್ನು ನನ್ನಿಂದಾಗಿ ಟಾರ್ಗೆಟ್ ಮಾಡಲಾಗಿದೆ ಏಕೆಂದರೆ ನಾನು ಅವರನ್ನು ಸಾಕಷ್ಟು ಬೆಂಬಲಿಸಿದೆ. ನಾನು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ, ನಾನು ನಾಯಕತ್ವವನ್ನು ತೊರೆದಾಗ ಅದು ಅವರಿಗೆ ನಕಾರಾತ್ಮಕ ವಿಷಯವಾಯಿತು. ಆತ ನನ್ನ ಫೇವರಿಟ್ ಎಂದು ಜನರು ಭಾವಿಸಿದ್ದಾರೆಂದು ನಾನು ಭಾವಿಸುತ್ತೇನೆ. ಪಾಕಿಸ್ತಾನದಲ್ಲಿ ಅವರ ಸಾಮರ್ಥ್ಯದ ಆರಂಭಿಕರನ್ನು ನಾನು ಕಂಡುಕೊಳ್ಳದ ಕಾರಣ ನಾನು ಅವರನ್ನು ಸಾಕಷ್ಟು ಬೆಂಬಲಿಸಿದೆ. ಹಾಗೆಯೇ ಪ್ರದರ್ಶನ ನೀಡುತ್ತಿದ್ದರು. ನಿಸ್ಸಂಶಯವಾಗಿ, ಅವರು ಎಲ್ಲಾ ಪಂದ್ಯಗಳಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ನನ್ನ ಕಾರಣದಿಂದಾಗಿ ಅವರು ಗುರಿಯಾಗಿದ್ದರು, "ಅಫ್ರಿದಿ ಹೇಳಿದರು.

ಅಫ್ರಿದಿ ಮಾತು ಕೇಳಿ ಆಶ್ಚರ್ಯಗೊಂಡ ಅಹ್ಮದ್ ಶೆಹಜಾದ್‌

ಅಫ್ರಿದಿ ಮಾತು ಕೇಳಿ ಆಶ್ಚರ್ಯಗೊಂಡ ಅಹ್ಮದ್ ಶೆಹಜಾದ್‌

ತಾನು ಸಾಕಷ್ಟು ಅವಕಾಶ ನೀಡಿದ್ದೇ ಎಂದು ಶಾಫ್ರಿದಿ ಅಫ್ರಿದಿ ಹೇಳಿಕೆ ಕುರಿತಾಗಿ ಅಹ್ಮದ್ ಶೆಹಜಾದ್ ಸಾಕಷ್ಟು ಆಶ್ಚರ್ಯಗೊಂಡಿದ್ದಾರೆ. ಅವಕಾಶ ಕೊಟ್ಟಿದ್ದರೆ ತಾನೆ ರನ್‌ಗಳಿಸಲು ಸಾಧ್ಯ ಎಂದು ಶೆಹಜಾದ್ ಅಫ್ರಿದಿ ಮಾತಿಗೆ ತಿರುಗೇಟು ನೀಡಿದರು.

"ಶಾಹಿದ್ ಭಾಯ್, ನೀವು ಯಾಕೆ ಹಾಗೆ ಹೇಳಿದಿರಿ ಎಂದು ನನಗೆ ಗೊತ್ತಿಲ್ಲ. ನೀವು ನನಗೆ ಅಣ್ಣ, ನೀವು ನನಗೆ ಏನು ಬೇಕಾದರೂ ಹೇಳಬಹುದು. ಕೆಲವೊಮ್ಮೆ, ಇದು ನನಗೆ ನೋವುಂಟುಮಾಡುತ್ತದೆ, ಆದರೆ ನೀವು ಯಾವಾಗಲೂ ನನಗೆ ಹಿರಿಯ ಸಹೋದರರಾಗಿದ್ದೀರಿ" ಎಂದು ಆರಂಭಿಕ ಬ್ಯಾಟರ್ ಹೇಳಿದರು.

ಶೆಹಜಾದ್ ಮಾತಿಗೆ ಮಧ್ಯೆ ಬಾಯಿ ಹಾಕಿದ ಅಫ್ರಿದಿ ಶೆಹಜಾದ್ ನೀನು ಹೆಚ್ಚು ರನ್‌ಗಳಿಸುವುದನ್ನು ನಾನು ನಿರೀಕ್ಷಿಸುತ್ತಿದ್ದೇ ಎಂದರು. ಅದಕ್ಕೆ ಶೆಹಜಾದ್ ಅವಕಾಶ ಸಿಕ್ಕರೆ ತಾನೆ ರನ್‌ಗಳಿಸುವುದು? ಮನೆಯಲ್ಲಿ ಕುಳಿತು ರನ್‌ಗಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

"ನೀವು ರನ್ ಗಳಿಸಬೇಕೆಂದು ನಾನು ಬಯಸುತ್ತೇನೆ, ನಿಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ನಿಮ್ಮ ಜೀವನವನ್ನು ಆನಂದಿಸಿ. ಅಲ್ಲಾಹನು ನಿನಗಾಗಿ ಜೀವನವನ್ನು ಸುಂದರಗೊಳಿಸಿದ್ದಾನೆ" ಎಂದು ಅಫ್ರಿದಿ ಹೇಳಿದ್ದಾರೆ.

IND vs WI 3rd ODI: ಭಾರತ ಆಡುವ 11ರ ಬಳಗ ಹೀಗಿದೆ; ಪದಾರ್ಪಣೆ ಮಾಡುತ್ತಾರಾ ಅರ್ಷದೀಪ್? l

ಅವಕಾಶ ಕೊಡಿ ರನ್‌ಗಳಿಸಿ ತೋರಿಸುತ್ತೇನೆ ಎಂದ ಶೆಹಜಾದ್

ಅವಕಾಶ ಕೊಡಿ ರನ್‌ಗಳಿಸಿ ತೋರಿಸುತ್ತೇನೆ ಎಂದ ಶೆಹಜಾದ್

ಅಫ್ರಿದಿ ಮಾತಿಗೆ ಕೆಂಡವಾದ ಶೆಹಜಾದ್ ಅವಕಾಶ ಕೊಡದೆ ರನ್‌ಗಳಿಸು ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

"ನಾನು ಹೇಳುತ್ತಲೇ ಇದ್ದೇನೆ. ನಾನು ರನ್ ಗಳಿಸಲು ಬಯಸುತ್ತೇನೆ, ಆದರೆ ಕನಿಷ್ಠ ನಾನು ಸ್ಕೋರ್ ಮಾಡಬಹುದಾದ ವೇದಿಕೆಗಳನ್ನು ನಿರಾಕರಿಸಬೇಡಿ. ನಾನು ನಿಮ್ಮನ್ನು ಕೇಳುತ್ತೇನೆ, ಪಿಎಸ್‌ಎಲ್‌ನಲ್ಲಿನ ಕಡೆಯವರು ನನ್ನನ್ನು ಆಯ್ಕೆ ಮಾಡಲು ಬಯಸಿದಾಗ, ಯಾರು ಆತನನ್ನ ಆಯ್ಕೆ ಮಾಡಬೇಡಿ ಎಂದು ಹೇಳುತ್ತಾರೆ? ನೀವು ಹೇಳಿ, ನಾನು ಎಲ್ಲಿ ರನ್ ಗಳಿಸುತ್ತೇನೆ? ನನ್ನ ಮನೆಯಲ್ಲಾ?" ಎಂದು ಅಹ್ಮದ್ ಶೆಹಜಾದ್ ಉತ್ತರಿಸಿದರು.

ಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣು

ಪಾಕಿಸ್ತಾನ ಪರ ಅಹ್ಮದ್ ಶೆಹಜಾದ್ ಅಂಕಿ-ಅಂಶಗಳು

ಪಾಕಿಸ್ತಾನ ಪರ ಅಹ್ಮದ್ ಶೆಹಜಾದ್ ಅಂಕಿ-ಅಂಶಗಳು

ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಡಿಯಲ್ಲಿ ಹಲವು ಪಂದ್ಯಗಳನ್ನಾಡಿರುವ ಅಹ್ಮದ್ ಶೆಹಜಾದ್, 2019ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನಾಡಿದರು. ಕಳೆದ ಮೂರು ವರ್ಷಗಳಿಂದ ಯಾವುದೇ ಪಂದ್ಯವನ್ನಾಡದಿದ್ರೂ, ನಿವೃತ್ತಿಯನ್ನ ಘೋಷಣೆ ಮಾಡಿಲ್ಲ.

ಪಾಕಿಸ್ತಾನ ಪರ ಶೆಹಜಾದ್ 81 ಏಕದಿನ ಪಂದ್ಯ ಮತ್ತು 59 ಟಿ20 ಪಂದ್ಯಗಳನ್ನ ಆಡಿದ್ದಾರೆ. ಏಕದಿ ಕ್ರಿಕೆಟ್‌ನಲ್ಲಿ 32.56ರ ಸರಾಸರಿಯಲ್ಲಿ 81 ಏಕದಿನ 2605 ರನ್ ಕಲೆಹಾಕಿದ್ದು, 59 ಟಿ20 ಪಂದ್ಯಗಳಲ್ಲಿ 25.81ರ ಸರಾಸರಿಯಲ್ಲಿ 1474ರನ್ ಸಿಡಿಸಿದ್ದಾರೆ. ಇನ್ನು 13 ಟೆಸ್ಟ್ ಪಂದ್ಯಗಳಲ್ಲಿ 40.92ರ ಬ್ಯಾಟಿಂಗ್ ಸರಾಸರಿಯಲ್ಲಿ 982 ರನ್ ದಾಖಲಿಸಿದ್ದಾರೆ. ಶೆಹಜಾದ್ ಒಟ್ಟಾರೆ 10 ಅಂತರಾಷ್ಟ್ರೀಯ ಶತಕ ದಾಖಲಿಸಿದ್ದಾರೆ.

Story first published: Wednesday, July 27, 2022, 15:14 [IST]
Other articles published on Jul 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+