ಸೂರ್ಯಕುಮಾರ್ ರೀತಿ ಬ್ಯಾಟಿಂಗ್ ಅಭ್ಯಾಸ ಮಾಡು ಎಂದು ಪಾಕ್ ಬ್ಯಾಟರ್‌ಗೆ ಅಫ್ರಿದಿ ಸಲಹೆ

ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಹಂತವನ್ನು ತಲುಪಿದೆ. ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಜೊತೆ ಸೆಣೆಸಿದರೆ, ಪಾಕಿಸ್ತಾನ ನ್ಯೂಜಿಲೆಂಡ್ ಜೊತೆ ಸೆಣೆಸಲಿದೆ. ನಾಲ್ಕು ತಂಡಗಳು ಬಲಿಷ್ಠವಾಗಿದ್ದು, ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕೂಡ ಕಷ್ಟವಾಗಿದೆ.
ಸೂರ್ಯಕುಮಾರ್ ಯಾದವ್ ಸದ್ಯ ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸೂರ್ಯಕುಮಾರ್ ಯಾದವ್, ಮೈದಾನದ ಯಾವ ಮೂಲೆಗಾದರೂ ಚೆಂಡನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಭಾರತ ಮಿಸ್ಟರ್ 360 ಬ್ಯಾಟರ್ ಎಂದು ಕರೆಯಲಾಗುತ್ತದೆ. ಸೂರ್ಯಕುಮಾರ್ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶೈಲಿಗೆ ಮಾರುಹೋಗಿದ್ದಾರೆ. ಪಾಕಿಸ್ತಾನ ಸೆಮಿಫೈನಲ್ ತಲುಪಿದೆ, ಆದರೆ ಟೂರ್ನಿಯಲ್ಲಿ ಇದುವರೆಗೆ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಪಾಕ್‌ನ ಮಾಜಿ ನಾಯಕ ಶಾಹಿದ್ ಅಫ್ರಿದಿ ಮೊಹಮ್ಮದ್ ರಿಜ್ವಾನ್‌ಗೆ ಸಲಹೆ ನೀಡಿದ್ದಾರೆ.
ರಿಜ್ವಾನ್ ತಮ್ಮ ಕಡಿಮೆ ಸ್ಟ್ರೈಕ್‌ರೇಟ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ. ರಿಜ್ವಾನ್‌ಗೆ ಸಲಹೆ ನೀಡಿರುವ ಶಾಹಿದ್ ಅಫ್ರಿದಿ, ಸೂರ್ಯಕುಮಾರ್ ಯಾದವ್ ರೀತಿ ಹೊಡೆತಗಳನ್ನು ಆಡಲು ಅಭ್ಯಾಸ ಮಾಡಿ ಎಂದು ಹೇಳಿದ್ದಾರೆ.

ರಿಜ್ವಾನ್ ಆಟದ ಶೈಲಿಯಲ್ಲಿ ಬದಲಾವಣೆ ಮಾಡಬೇಕು
ಸಮಾ ಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ತಮ್ಮ ಎದುರಾಳಿ ಬೌಲರ್‌ಗಳು ತನ್ನ ವಿರುದ್ಧ ಯೋಜನೆಗಳನ್ನು ರೂಪಿಸಲು ಸಾಧ್ಯವಾಗದಂತೆ ಆಟದ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಬಯಸುತ್ತೀರಾ ಎಂದು ಆಂಕರ್, ಅಫ್ರಿದಿ ಬಳಿ ಪ್ರಶ್ನೆ ಕೇಳಿದರು.
ಆಂಕರ್ ಸೂರ್ಯಕುಮಾರ್ ಯಾದವ್‌ರ ಉದಾಹರಣೆಯನ್ನು ನೀಡಿ ಅವರಂತೆ ವಿಭಿನ್ನವಾಗಿ ಆಡುವುದನ್ನು ರಿಜ್ವಾನ್ ರೂಡಿಸಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು.
ತೆಗೆದುಕೊಳ್ಳಬೇಕೇ ಎಂದು ಕೇಳಿದರು.
T20 World Cup 2022 Semifinal; ಪಾಕಿಸ್ತಾನ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ರಿಜ್ವಾನ್ ಆಟವನ್ನು ಉತ್ತಮಪಡಿಸಿಕೊಳ್ಳಲಿ
ಇದಕ್ಕೆ ಪ್ರತಿಕ್ರಿಯಿಸಿದ ಅಫ್ರಿದಿ, "ಸೂರ್ಯಕುಮಾರ್ ಅವರ ಪ್ರಮುಖ ವಿಷಯವೆಂದರೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬರುವ ಮೊದಲು ದೇಶೀಯ ಸರ್ಕ್ಯೂಟ್‌ನಲ್ಲಿ 200-250 ಪಂದ್ಯಗಳನ್ನು ಆಡಿದ್ದಾರೆ. ಸೂರ್ಯಕುಮಾರ್ ಗೆ ಅವರ ಆಟದ ಶೈಲಿ ತಿಳಿದಿದೆ. ಅವರು ಆ ಹೊಡೆತಗಳನ್ನು ಚನ್ನಾಗಿ ಅಭ್ಯಾಸ ಮಾಡಿದ್ದಾರೆ, ಆದ್ದರಿಂದ ಮೈದಾನದಲ್ಲಿ ಅದನ್ನು ಯಶಸ್ವಿಯಾಗಿ ಆಡುತ್ತಾರೆ. ಈ ಸ್ವರೂಪದಲ್ಲಿ ನೀವು ಬ್ಯಾಟರ್ ಆಗಿ ವಿಕಸನಗೊಳ್ಳಬೇಕು ಮತ್ತು ನಿಮ್ಮ ಆಟವನ್ನು ಅಭಿವೃದ್ಧಿಪಡಿಸಬೇಕು." ಎಂದು ಹೇಳಿದರು.
ರಿಜ್ವಾನ್ ರನ್ ಗಳಿಸಲು ಪರದಾಡುತ್ತಿರುವ ಬಗ್ಗೆ ಮಾತನಾಡಿದ ಅಫ್ರಿದಿ, ರಿಜ್ವಾನ್ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಆಫ್ ಸೈಡ್ ಮೂಲಕ ಶಾಟ್‌ಗಳನ್ನು ಆಡಬೇಕಾಗುತ್ತದೆ ಮತ್ತು ಅದಕ್ಕಾಗಿ ಅವರು ಆ ಹೊಡೆತಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಆತನಂತೆ ಆಡಲು ಅಭ್ಯಾಸ ಮಾಡಲಿ
"ವಿಶ್ವಕಪ್‌ಗೆ ಬರುವ ಮೊದಲು ಪ್ರತಿ ತಂಡವು ಎದುರಾಳಿ ವಿರುದ್ದ ಹೇಗೆ ಆಡಬೇಕೆಂದು ತಯಾರಿ ಮಾಡುತ್ತದೆ ಎನ್ನುವುದು ನಮಗೆ ತಿಳಿದಿದೆ. ರಿಜ್ವಾನ್‌ಗೆ, ಅವರು ಡೀಪ್ ಸ್ಕ್ವೇರ್-ಲೆಗ್ ಮತ್ತು ಮಿಡ್‌ವಿಕೆಟ್‌ಗೆ ಉತ್ತಮ ಹೊಡೆತಗಳನ್ನು ಆಡುವ ಕಾರಣ ಅವರನ್ನು ಕಟ್ಟಿಹಾಕಲು ಎದುರಾಳಿ ತಂಡಗಳು ರಣತಂತ್ರ ರೂಪಿಸಿರುತ್ತವೆ" ಎಂದು ಹೇಳಿದರು.
"ರಿಜ್ವಾನ್ ಟ್ರ್ಯಾಕ್ ಕೆಳಗೆ ಬಂದು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಅವರು ಮಿಡ್-ಆಫ್ ಮತ್ತು ಎಕ್ಸ್ಟ್ರಾ-ಕವರ್ ಕಡೆಗೆ ಹೊಡೆಯಬೇಕಾಗುತ್ತದೆ ಮತ್ತು ಇದಕ್ಕಾಗಿ ಅವರು ಸೂರ್ಯಕುಮಾರ್ ಯಾದವ್ ರೀತಿ ಸ್ಟ್ರೋಕ್ ಆಡುವುದನ್ನು ಅಭ್ಯಾಸ ಮಾಡಬೇಕಾಗುತ್ತದೆ," ಅಫ್ರಿದಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications