ಶೇನ್ ವಾರ್ನ್ ವಿವಾದಗಳು ಒಂದೇ, ಎರಡೇ!: ಡ್ರಗ್ಸ್, ಮಹಿಳೆಯರ ಜೊತೆಗಿನ ಸಂಬಂಧ, ಫಿಕ್ಸಿಂಗ್,

ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ಅಕಾಲಿಕ ಮರಣವು ಕ್ರಿಕೆಟ್ ಜಗತ್ತನ್ನು ದುಃಖದ ಕಡಲಲ್ಲಿ ತೇಲುವಂತೆ ಮಾಡಿದೆ. ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ವಾರ್ನ್ ಹೆಸರು ಅಜರಾಮರವಾಗಿದೆ. ಲೆಗ್ ಸ್ಪಿನ್‌ನ ಬ್ರಾಡ್‌ಮನ್ ಖ್ಯಾತಿಯ ಶೇನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ. ಸ
ಎಲ್ಲಾ ಮಾದರಿಗಳಲ್ಲಿ ಸಾವಿರಕ್ಕೂ ಹೆಚ್ಚು ವಿಕೆಟ್ ಪಡೆದಿರುವ ವಾರ್ನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ವಾರ್ನ್ ಅವರು ದಾಖಲೆಗಳಂತೆಯೇ ವಿವಾದಗಳಿಂದಲೂ ಪ್ರಸಿದ್ಧರಾದರು. ಶೇನ್ ಅವರ ಜೀವನವು ಅಳಿಸಲಾಗದ ದಾಖಲೆಗಳು ಮತ್ತು ಮರೆಯಲಾಗದ ವಿವಾದಗಳನ್ನು ಹೊಂದಿದೆ.

ಮ್ಯಾಚ್ ಫಿಕ್ಸಿಂಗ್ ವಿವಾದ
1998ರಲ್ಲಿ ಮ್ಯಾಚ್ ಫಿಕ್ಸಿಂಗ್‌ಗಾಗಿ ಬುಕ್ಕಿಯಿಂದ ಶೇನ್ ವಾರ್ನ್ ಹಣ ಪಡೆದಿದ್ದರು ಎಂಬ ಆರೋಪಗಳು ಆ ಸಮಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ವಾರ್ನ್ ಬುಕ್ಕಿಯೊಂದಿಗೆ ಮಾತನಾಡಿದ್ದಾರೆ ಎಂಬ ಸುದ್ದಿ ಆ ಸಮಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು. 1999ರ ವಿಶ್ವಕಪ್ ವೇಳೆ ಶ್ರೀಲಂಕಾ ನಾಯಕ ಅರ್ಜುನ್ ರಣತುಂಗ ಅವರಿಗೂ ಅವಮಾನಕರ ಟೀಕೆಗಳನ್ನು ಮಾಡಿದ್ದರು. ಆ ವಿಶ್ವಕಪ್‌ನಲ್ಲಿ ವಾರ್ನ್‌ಗೆ ಎರಡು ಪಂದ್ಯಗಳನ್ನು ಆಡದಂತೆ ಐಸಿಸಿ ನಿಷೇಧಿಸಿತು.

ಡ್ರಗ್ಸ್ ವಿವಾದ
ಡೋಪಿಂಗ್ ಪರೀಕ್ಷೆಯಲ್ಲಿ ಶೇನ್ ವಾರ್ನ್ 2003ರ ವಿಶ್ವಕಪ್ ವೇಳೆ ಡ್ರಗ್ಸ್ ಸೇವಿಸಿರುವುದು ಬೆಳಕಿಗೆ ಬಂದಿತ್ತು. ಇದರೊಂದಿಗೆ ವಿಶ್ವಕಪ್ ಆಡದೆ ಹೊರಗಿಡಲಾಯಿತು. 2013 ರಲ್ಲಿ ಬಿಗ್ ಬ್ಯಾಶ್ ಲೀಗ್‌ನಲ್ಲಿ ದುರ್ವರ್ತನೆಗಾಗಿ ಬಿಗ್‌ಬಾಶ್ ವಾರ್ನ್‌ಗೆ $ 4,500 ದಂಡ ವಿಧಿಸಿತು. ಇದಲ್ಲದೆ ಶೇನ್ ವಾರ್ನ್ ಹಲವಾರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸಿದ್ದಾರೆ.
574 ರನ್‌ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ: ಜಡೇಜಾ ಅಜೇಯ 175 ರನ್

ಅವಿವಾಹಿತ ಸಂಬಂಧಗಳು
ಶೇನ್ ವಾರ್ನ್ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವಿದೆ. 2006ರಲ್ಲಿ ಮಹಿಳೆಯರೊಂದಿಗೆ ಒಳಉಡುಪಿನಲ್ಲಿ ವಾರ್ನ್ ಫೋಟೋಗಳು ವೈರಲ್ ಆಗಿದ್ದವು. ಇವು ವಾರ್ನ್ ಅವರ ಖ್ಯಾತಿಯನ್ನು ಮತ್ತಷ್ಟು ಕೆಡಿಸಿತು. ಇನ್ನು ವಾರ್ನ್ ದಾಂಪತ್ಯ ಜೀವನ ಸುಗಮವಾಗಿಲ್ಲ.
ಅವರು ತಮ್ಮ ವೈವಾಹಿಕ ಜೀವನದಲ್ಲಿ ಮೂರು ವಿವಾಹಗಳನ್ನು ಹೊಂದಿದ್ದರು. ಅವರ ಪತ್ನಿ ಸೈಮನ್ ವಾರ್ನ್ ದೂರವಾಗಿದ್ದಾರೆ. 1995ರಲ್ಲಿ ವಿವಾಹವಾದ ಈ ಜೋಡಿ 2005ರಲ್ಲಿ ಬೇರ್ಪಟ್ಟಿತು. ವಾರ್ನ್‌ಗೆ ಅನೇಕ ಮಹಿಳೆಯರೊಂದಿಗೆ ಸಂಬಂಧವಿರುವುದನ್ನ ತಿಳಿದು ಪತ್ನಿ ಡಿವೋರ್ಸ್ ನೀಡಿದರು. ಶೇನ್ ವಾರ್ನ್ ಮತ್ತು ಸೈಮೊನ್ ಕಲ್ಲಹಾನ್‌ಗೆ ಮೂರು ಮಕ್ಕಳಿದ್ದಾರೆ.
ಆದ್ರೆ 2007 ರಲ್ಲಿ ಮತ್ತೆ ಇವರಿಬ್ಬರು ಒಂದಾಗಿದ್ದರೂ, ಆದ್ರೆ ನಟಿ ಎಲಿಜಬೆತ್ ಹಾರ್ಲೆಯೊಂದಿಗೆ ವಾರ್ನ್ ಅವರ ನಿಶ್ಚಿತಾರ್ಥವು ಮತ್ತೆ ಬೇರ್ಪಡಲು ಕಾರಣವಾಯಿತು.
RIP ಎಂದು ಟ್ವೀಟ್ ಮಾಡಿದ್ದ ಶೇನ್ ವಾರ್ನ್ ಇನ್ನಿಲ್ಲ: ವಾರ್ನ್ ಕೊನೆಯ ಟ್ವೀಟ್ ಇಲ್ಲಿದೆ

ವಾರ್ನ್ ದಾಖಲೆಗಳು
ಶೇನ್ ವಾರ್ನ್ ತಮ್ಮ 15 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹಲವು ಮೈಲಿಗಲ್ಲುಗಳನ್ನು ಗಳಿಸಿದ್ದಾರೆ. ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ ಎಂದರೆ ಸ್ಪಿನ್ ಬೌಲಿಂಗ್. ಶೇನ್ ವಾರ್ನ್ ತಮ್ಮ ವೃತ್ತಿ ಜೀವನದಲ್ಲಿ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಕಬಳಿಸಿದ್ದಾರೆ. ಅವರು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. 55 ಟಿ20 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅವರು ಎಲ್ಲಾ ಮಾದರಿಗಳಲ್ಲಿ ಸಾವಿರ ವಿಕೆಟ್ ಪಡೆದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ವಾರ್ನ್, ತಮ್ಮ ಮೊದಲ ಋತುವಿನಲ್ಲಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು.
ಶೇನ್ ವಾರ್ನ್ ಅವರ ವೃತ್ತಿಜೀವನದ ಶ್ರೇಷ್ಠ ಇನ್ನಿಂಗ್ಸ್ 1999 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ಗಳು ಮತ್ತು ಫೈನಲ್‌ನಲ್ಲಿ ಒಂದರ ಹಿಂದೆ ಮತ್ತೊಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಸೇರಿವೆ. ಇದರ ಜೊತೆಗೆ ಅವರು ಇಂಗ್ಲೆಂಡ್ ವಿರುದ್ಧ ಐದು ಆಶಸ್ ಸರಣಿಗಳನ್ನು ಗೆದ್ದ ಆಸ್ಟ್ರೇಲಿಯನ್ ತಂಡದ ಸದಸ್ಯರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications