Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆ

Shikhar Dhawan

ಟ್ರಿನಿಡಾಡ್‌ನ ಪೋರ್ಟ್‌ ಆಪ್ ಸ್ಪೇನ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 307ರನ್ ಕಲೆಹಾಕಿದ್ದು, ಆತಿಥೇಯರಿಗೆ 308ರನ್ ಟಾರ್ಗೆಟ್ ನೀಡಿದೆ. ಪಂದ್ಯದಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತಿದ್ದ ಶಿಖರ್ ಧವನ್ ನಾಯಕನ ಆಟವಾಡಿದ್ದು, ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಶುಭಮನ್ ಗಿಲ್ ಜೊತೆಗೆ ಶತಕದ ಜೊತೆಯಾಟವಾಡಿದ ಶಿಖರ್ ಧವನ್ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು. ಮೊದಲ ವಿಕೆಟ್‌ಗೆ 119ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಆತಿಥೇಯರಿಗೆ ಸಾಕಷ್ಟು ಟ್ರಬಲ್ ಆದರು.

ಶುಭಮನ್ ಗಿಲ್ 64ರನ್‌ಗಳಿಸಿ ರನೌಟ್ ಆದ ಬಳಿಕವೂ ಶಿಖರ್ ಧವನ್ ತಮ್ಮ ಸೊಗಸಾದ ಆಟ ಮುಂದುವರಿಸಿದರು. ಎರಡನೇ ವಿಕೆಟ್‌ಗೆ ಶ್ರೇಯಸ್ ಜೊತೆಗೂಡಿ 94ರನ್‌ಗಳ ಜೊತೆವಾಡಿದ್ದ ಶಿಖರ್ ಧವನ್ ಶತಕದಂಚಿನಲ್ಲಿ ಎದುರಾಳಿ ತಂಡದ ಆಟಗಾರ ಬ್ರೂಕ್ಸ್‌ ಹಿಡಿದ ಕ್ಯಾಚ್‌ಗೆ ಬಲಿಯಾದರು.

33.4 ಓವರ್‌ಗಳಲ್ಲಿ ಗುಡಾಕೇಶ್ ಮೋಟಿ ಬೌಲಿಂಗ್‌ನಲ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್‌ನತ್ತ ಚೆಂಡನ್ನ ಬೌಂಡರಿಯತ್ತ ಬಾರಿಸಿದ ಶಿಖರ್ ಧವನ್‌ಗೆ ಶಾಕ್ ಎದುರಾಯಿತು. ಸಮರಾ ಬ್ರೂಕ್ಸ್‌ ಹಿಡಿದ ಅದ್ಭುತ ಕ್ಯಾಚ್‌ನಿಂದ ಶಿಖರ್ ಧವನ್ ಕೇವಲ ಮೂರು ರನ್‌ಗಳ ಅಂತರದಲ್ಲಿ ವಿಂಡೀಸ್ ವಿರುದ್ಧ ಮೊದಲ ಹಾಗೂ ಏಕದಿನ ಫಾರ್ಮೆಟ್‌ನಲ್ಲಿ 18ನೇ ಶತಕವನ್ನು ಮಿಸ್ ಮಾಡಿಕೊಂಡಿದ್ದಾರೆ.

99 ಎಸೆತಗಳಲ್ಲಿ 97 ರನ್‌ಗಳನ್ನ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು. ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ್ದ ಗಬ್ಬರ್ ನಂತರ ಅಬ್ಬರಿಸೋಕೆ ಶುರು ಮಾಡಿದ್ದು, 97.98ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಶಿಖರ್ ಧವನ್ ಏಕದಿನ ಫಾರ್ಮೆಟ್‌ನಲ್ಲಿ ಏಳನೇ ಬಾರಿಗೆ 90 ರ ಗಡಿಯಲ್ಲಿ ಔಟಾಗಿದ್ದಾರೆ. ಧವನ್ ಹೊರತುಪಡಿಸಿ ಸಚಿನ್ ಮಾತ್ರ ಗರಿಷ್ಠ 18 ಬಾರಿ, ಶ್ರೀಲಂಕಾದ ಅರವಿಂದ್ ಡಿಸಿಲ್ವಾ , ನಥಾನ್ ಆ್ಯಶ್ಲೆ ಮತ್ತು ಗ್ರಾಂಟ್ ಫ್ಲವರ್ 9 ಬಾರಿ, ಜಾಕ್ವೆಸ್ ಕಾಲಿಸ್ 8 ಬಾರಿ ಔಟಾಗಿದ್ದಾರೆ. ನಂತರದಲ್ಲಿ ಶಿಖರ್‌ ಧವನ್ ಸ್ಥಾನ ಪಡೆದಿದ್ದಾರೆ.

Team india

ಶಿಖರ್ ಧವನ್ ಇನ್ನೊಂದು ಸಾಧನೆ ಏನಂದರೆ 150 ಇನ್ನಿಂಗ್ಸ್‌ಗಳು ಓಪನರ್ ಆಗಿ ಆಡಿರುವ ಲೆಕ್ಕಾಚಾರದ ಧವನ್ 53ನೇ ಬಾರಿಗೆ 50ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಇಷ್ಟೇ ಇನ್ನಿಂಗ್ಸ್‌ ಒಳಗೆ 53 ಬಾರಿ ಈ ಸಾಧನೆ ಮಾಡಿದ್ರು.

ಶಿಖರ್ ಧವನ್ ಶತಕದಂಚಿನಲ್ಲಿ ಔಟಾದ ಪರಿಣಾಮ ಅವರ ಅಭಿಮಾನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ಶತಕ ಮಿಸ್ ಮಾಡಿಕೊಂಡರಬಹುದು, ಆದ್ರೆ ನಿಮ್ಮ ಆಟ ಎವರ್‌ಗ್ರೀನ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಶಿಖರ್ ಧವನ್ ನೀವು ನಾಯಕತ್ವಕ್ಕೆ ತಕ್ಕನಾದ ಆಟವಾಡಿದ್ದೀರಿ ಎಂದು ಹೊಗಳಿದ್ದಾರೆ. ಇದೇ ವೇಳೆಯಲ್ಲಿ ಅಂಕಿ-ಅಂಶಗಳು ಸಹ ಹೊರಬಿದ್ದಿವೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ಶಿಖರ್ ಧವನ್ (ನಾಯಕ), ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್

Story first published: Saturday, July 23, 2022, 9:58 [IST]
Other articles published on Jul 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+