For Quick Alerts
ALLOW NOTIFICATIONS  
For Daily Alerts
 

ನೆಟ್ ಪ್ರಾಕ್ಟೀಸ್‌ನಲ್ಲಿ ಬ್ಯುಸಿಯಾದ ಶಿಖರ್ ಧವನ್: ಬಿರುಸಿನ ಬ್ಯಾಟಿಂಗ್ ಅಭ್ಯಾಸ

Shikhar dhawan

ಭಾರತ ತಂಡದ ಬ್ಯಾಟ್ಸ್‌ಮನ್ ಶಿಖರ್ ಧವನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ಗೆ ತಂಡದ ಭಾಗವಾಗಿಲ್ಲ. ಆದ್ರೆ ಅವರ ಅಭ್ಯಾಸ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಧವನ್ ಅವಕಾಶ ಪಡೆಯದೇ ಹೊರಗುಳಿದಿರುವುದು ಅವರ ಅಭಿಮಾನಿಗಳಿಗೆ ಈಗಾಗಲೇ ಬೇಸರ ತಂದಿದೆ. ಧವನ್ ಬದಲಿಗೆ ಕೆಎಲ್ ರಾಹುಲ್‌ಗೆ ಆರಂಭಿಕರಾಗಿ ಆಯ್ಕೆಗಾರರು ಆದ್ಯತೆ ನೀಡಿದ್ದರು.

ಇಂತಹ ಪರಿಸ್ಥಿತಿಯಲ್ಲಿ ಧವನ್ ಗೆ ಇನ್ನೂ ಸಾಕಷ್ಟು ಬಿಡುವಿನ ಸಮಯವಿದೆ, ಆದರೆ ಈ ಬಿಡುವಿನ ವೇಳೆಯಲ್ಲಿ ಧವನ್ ಕ್ರಿಕೆಟ್ ಅಭ್ಯಾಸದತ್ತ ಗಮನ ಹರಿಸಲಾರಂಭಿಸಿದ್ದಾರೆ. ಮುಂದಿನ ಐಪಿಎಲ್ ಮತ್ತು 2023ರ ಏಕದಿನ ವಿಶ್ವಕಪ್‌ಗೆ ಧವನ್ ತಯಾರಿ ಆರಂಭಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ವಾಸ್ತವವಾಗಿ, ಶಿಖರ್ ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಧವನ್ ಈ ವಿಡಿಯೋವನ್ನು ರೀಲ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಧವನ್ ಬಿರುಸಿನ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಟಿ 20 ವಿಶ್ವಕಪ್‌ಗೆ ಧವನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳದಿರಬಹುದು, ಆದರೆ ಅವರನ್ನು 2023 ರ ಏಕದಿನ ವಿಶ್ವಕಪ್‌ಗೆ ಅತಿದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ ಮತ್ತು ಆಯ್ಕೆದಾರರು ಇದಕ್ಕೆ ಉದಾಹರಣೆಯನ್ನು ನೀಡಿದ್ದಾರೆ.. ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಧವನ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಈ ಹಿಂದೆ ಜಿಂಬಾಬ್ವೆಯಲ್ಲಿ ಧವನ್ ಕೂಡ ತಂಡದ ನಾಯಕರಾಗಿದ್ದರು.

Story first published: Saturday, October 29, 2022, 21:04 [IST]
Other articles published on Oct 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+