For Quick Alerts
ALLOW NOTIFICATIONS  
For Daily Alerts
 

ಎಂಸಿಜಿಯಲ್ಲಿ ನಿಮಗಾಗಿ ಕಾಯುತ್ತಿರುತ್ತೇವೆ ಬನ್ನಿ ಎಂದು ಭಾರತಕ್ಕೆ ಶುಭ ಹಾರೈಸಿದ ಪಾಕ್ ಮಾಜಿ ಆಟಗಾರ

Shoaib Akthar Wishes India For Semi Final And He Said Pakistan Will Wait In MCG To Play In Final

ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ 20 ವಿಶ್ವಕಪ್ 2022 ರ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಬುಧವಾರ, ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿದೆ. 153 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 7 ವಿಕೆಟ್‌ಗಳ ಜಯ ಸಾಧಿಸಿತು.

ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅರ್ಧಶತಕ ಗಳಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಸುಲಭವಾಗಿಸಿದರು. 2009ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಗುರುವಾರ, ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಸೆಣೆಸಲಿದೆ. ಭಾರತ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದರೆ, ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣೆಸಲಿದೆ.

ನಿಮಗಾಗಿ ಎಂಸಿಜಿಯಲ್ಲಿ ಕಾಯುತ್ತಿದ್ದೇವೆ

ನಿಮಗಾಗಿ ಎಂಸಿಜಿಯಲ್ಲಿ ಕಾಯುತ್ತಿದ್ದೇವೆ

"ಭಾರತ, ನಾವು ಮೆಲ್ಬೋರ್ನ್ ತಲುಪಿದ್ದೇವೆ ಮತ್ತು ಈಗ ನಾವು ನಿಮಗಾಗಿ ಕಾಯುತ್ತಿದ್ದೇವೆ. ನಿಮಗೆ ಶುಭ ಹಾರೈಸುತ್ತೇನೆ ಮತ್ತು ನೀವು ಮೆಲ್ಬೋರ್ನ್ ತಲುಪುತ್ತೀರಿ ಎಂದು ಭಾವಿಸುತ್ತೇವೆ. ನನಗೆ ಭಾರತ ಮತ್ತು ಪಾಕಿಸ್ತಾನದ ಫೈನಲ್ ಬೇಕು, ಮತ್ತೊಮ್ಮೆ ಅವರು ಪರಸ್ಪರ ಮುಖಾಮುಖಿಯಾಗುವುದನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ" ಎಂದು ಶೋಯೆಬ್ ಹೇಳಿದ್ದಾರೆ.

2007ರಲ್ಲಿ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ ಆ ಪಂದ್ಯದಲ್ಲಿ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿತ್ತು.

ಯಶಸ್ಸಿನ ಜೊತೆ ಒಲಿದ ಅದೃಷ್ಟ: ಸೂರ್ಯಕುಮಾರ್ ಯಾದವ್‌ಗೆ ಫುಲ್ ಡಿಮ್ಯಾಂಡ್‌!

ಪಿಚ್ ಅರ್ಥಮಾಡಿಕೊಳ್ಳುವಲ್ಲಿ ಸೋತ ನ್ಯೂಜಿಲೆಂಡ್

ಪಿಚ್ ಅರ್ಥಮಾಡಿಕೊಳ್ಳುವಲ್ಲಿ ಸೋತ ನ್ಯೂಜಿಲೆಂಡ್

ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶೋಯೆಬ್ ಅಖ್ತರ್, ನ್ಯೂಜಿಲೆಂಡ್ ಪಿಚ್‌ ಅನ್ನು ತಪ್ಪಾಗಿ ಅರ್ಥ ಮಾಡಿಕೊಂಡರು. ಟಾಸ್ ಗೆದ್ದ ನಂತರ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

"ಪಾಕಿಸ್ತಾನ ಉತ್ತಮವಾಗಿ ಆಡಿದೆ, ಫೈನಲ್ ತಲುಪಲು ಪ್ರಾರ್ಥನೆಗಳು ನೆರವಾಗಿವೆ. ನಾವು ಈ ಮೊದಲು ಈ ರೀತಿ ಕಂ ಬ್ಯಾಕ್ ಮಾಡಿದ್ದೇವೆ. ಪಾಕಿಸ್ತಾನ ಅದ್ಭುತವಾಗಿ ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಬೇಕಿತ್ತು ಮತ್ತು ಅವರು ಪಿಚ್ ಅನ್ನು ತಪ್ಪಾಗಿ ನಿರ್ಣಯಿಸಿದ್ದಾರೆ" ಎಂದು ಪಂದ್ಯದ ಬಳಿಕ ತಿಳಿಸಿದರು.

 ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಫೈನಲ್

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಫೈನಲ್

ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಫೈನಲ್ ತಲುಪಿರುವ ಪಾಕಿಸ್ತಾನ, ಭಾರತ ಅಥವಾ ಇಂಗ್ಲೆಂಡ್ ಜೊತೆ ಫೈನಲ್‌ನಲ್ಲಿ ಸೆಣೆಸಲಿದೆ. ಭಾರತ-ಪಾಕಿಸ್ತಾನ ಮೆಲ್ಬೋರ್ನ್‌ನಲ್ಲಿ ಈ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದ್ದವು.

ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಸೋಲು ಕಂಡ ಭಾರತ, ಉಳಿದ 4 ಪಂದ್ಯಗಳನ್ನು ಗೆದ್ದು 2ನೇ ಗುಂಪಿನಲ್ಲಿ ಅಗ್ರಸ್ಥಾನಿಗಳಾಗಿ ಸೆಮಿಫೈನಲ್ ಪ್ರವೇಶಿಸಿದರು. ಅದೃಷ್ಟದ ಲಾಭ ಪಡೆದ ಪಾಕಿಸ್ತಾನ, ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಆಟವಾಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ಈಗ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಏನಾದರೂ ಆಗಲಿ, ಭಾರತ-ಪಾಕಿಸ್ತಾನ ಮತ್ತೊಮ್ಮೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವುದಂತೂ ಸುಳ್ಳಲ್ಲ.

Story first published: Wednesday, November 9, 2022, 19:50 [IST]
Other articles published on Nov 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+