For Quick Alerts
ALLOW NOTIFICATIONS  
For Daily Alerts
 

SL vs Afg 1st ODI: ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್, ಪ್ಲೇಯಿಂಗ್ 11

Afghanistan

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಮೂರು ಏಕದಿನ ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ಕಾಲಿಟ್ಟಿರುವ ಅಫ್ಘಾನಿಸ್ತಾನ ಶುಭಾರಂಭ ಮಾಡುವ ನಿರೀಕ್ಷೆ ಹೊಂದಿದೆ.

ಶ್ರೀಲಂಕಾ ತಂಡದಲ್ಲಿ ಆಟಗಾರರ ಇಂಜ್ಯುರಿ ಲಿಸ್ಟ್ ಮತ್ತಷ್ಟು ಹೆಚ್ಚಾಗಿದೆ. ವೇಗದ ಬೌಲರ್ ಪ್ರಮೋದ್ ಮದುಸೂಧನ್ ಅಭ್ಯಾಸದ ವೇಳೆ ಹ್ಯಾಮ್‌ಸ್ಟ್ರಿಂಗ್‌ಗೆ ತುತ್ತಾಗಿದ್ದಾರೆ. ಈತನ ಬದಲು ಮಿಲನ್ ರತ್ನಾಯ್ಕೆ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದಿದ್ದಾರೆ. ಭಾನುಕಾ ರಾಜಪಕ್ಷ ಬದಲು ನುವನಿಂದು ಫರ್ನಾಂಡೊ ಅವಕಾಶ ಪಡೆದಿದ್ದಾರೆ.

ಎರಡು ತಂಡಗಳ ಮುಖಾಮುಖಿಯಲ್ಲಿ ಶ್ರೀಲಂಕಾ ತಂಡವು 6-2ರ ದಾಖಲೆ ಹೊಂದಿದೆ. ಲಂಕಾ ವಿರುದ್ಧ ಎರಡು ಪಂದ್ಯಗಳಲ್ಲಷ್ಟೇ ಜಯಿಸಲು ಅಫ್ಘಾನಿಸ್ತಾನ ಯಶಸ್ವಿಯಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲೇ ಅಫ್ಘಾನಿಸ್ತಾನ ಹೊರಬಿದ್ದ ನಂತರ ನಾಯಕ ಮೊಹಮ್ಮದ್ ನಬಿ ನಾಯಕತ್ವದಿಂದ ಕೆಳಗಿಳಿದರು. ಹಶ್ಮತುಲ್ಲಾ ಶಾಹಿದಿ ಈ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗೆ ಕಾಣಬಹುದು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ 11:
ಪಥುಮ್ ನಿಸ್ಸಾಂಕಾ, ಕುಸಾಲ್ ಮೆಂಡೀಸ್ (ವಿಕೆಟ್ ಕೀಪರ್), ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವಹಿಂದು ಹಸರಂಗ, ಧನಂಜಯ ಲಕ್ಷನ್, ಮಹೀಶ್ ತೀಕ್ಷನ, ಲಹಿರು ಕುಮಾರ, ಕಸುನ್ ರಂಜಿತ

ಬೆಂಚ್‌: ಅಶೆನ್ ಬಂಡಾರ, ಅಸಿಥಾ ಫರ್ನಾಂಡೊ, ಪ್ರಮೋದ್ ಮಧುಸೂದನ್, ದುನಿತ್ ವೆಲ್ಲಂಘೆ

ಅಫ್ಘಾನಿಸ್ತಾನ ಪ್ಲೇಯಿಂಗ್ 11:
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಿಯಾಜ್ ಹಸನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ರಹಮತ್ ಶಾ, ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರಹಮಾನ್, ರಶೀದ್ ಖಾನ್, ಯಾಮಿನ್ ಅಹ್ಮದ್ಝಾಯ್

ಬೆಂಚ್: ಗುಲ್ಬದೀನ್ ನೈಬ್, ಫರೀದ್ ಅಹ್ಮದ್ ಖಾನ್, ಶಾಯಿದುಲ್ಲಾ ಕಮಲ್, ಜಿಯಾ ಉರ್ ರಹಮಾನ್, ಇಕ್ರಾಮ್ ಅಲಿಖಿಲ್, ಅಜ್ಮತುಲ್ಲಾ ಒಮಜ್ರಾಯ್, ನೂರ್ ಅಹಮದ್

Story first published: Friday, November 25, 2022, 14:28 [IST]
Other articles published on Nov 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+