For Quick Alerts
ALLOW NOTIFICATIONS  
For Daily Alerts
 

Afg vs SL 1st ODI: ಶ್ರೀಲಂಕಾ ವಿರುದ್ಧ 60ರನ್‌ಗಳಿಂದ ಗೆದ್ದು ಬೀಗಿದ ಅಫ್ಘಾನಿಸ್ತಾನ

Srilanka vs Afghanistan

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ ಅಫ್ಘಾನಿಸ್ತಾನ ಶಾಕ್ ನೀಡಿದೆ. ಮೊದಲ ಏಕದಿನ ಪಂದ್ಯವನ್ನ 60 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅಫ್ಘಾನಿಸ್ತಾನ ನೀಡಿದ್ದ 295 ರನ್‌ಗಳ ಗುರಿಯನ್ನ ಬೆನ್ನತ್ತಿದ ಶ್ರೀಲಂಕಾ ತಂಡವು 38 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಗುವ ಮೂಲಕ 60 ರನ್‌ಗಳಿಂದ ಸೋಲನ್ನಪ್ಪಿತು. ಶ್ರೀಲಂಕಾ ಪರ ಓಪನರ್ ಪಾತುಮ್ ನಿಸ್ಸಾಂಕ 85, ವಹಿಂದು ಹಸರಂಗ 66 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಪರಿಣಾಮ 12 ಓವರ್‌ಗಳಿರುವಂತೆಯೇ ಶ್ರೀಲಂಕಾ ಆಲೌಟ್ ಆಗಿದೆ.

ಅಫ್ಘಾನಿಸ್ತಾನ ಪರ ಬೊಂಬಾಟ್ ಬೌಲಿಂಗ್ ಮಾಡಿದ ಫಜ್ರಲಕ್ ಫಾರೂಕಿ 9 ಓವರ್‌ಗಳಲ್ಲಿ 49 ರನ್ ನೀಡಿ 4 ವಿಕೆಟ್ ಕಬಳಿಸಿದರು. ಗುಲ್ಬದೀನ್ ನೈಬ್ 3, ಯಾಮಿನ್ ಅಹ್ಮದ್ಝಾಯ್ 2, ರಶೀದ್ ಖಾನ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಹಶ್ಮತುಲ್ಲಾ ಶಾಹಿದಿ ನಾಯಕತ್ವದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನದ ಟಾಪ್ ಆರ್ಡರ್ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ರು. ಓಪನರ್‌ಗಳಾದ ರಹಮಾನುಲ್ಲಾ ಗುರ್ಬಾಜ್ ಅರ್ಧಶತಕ ದಾಖಲಿಸಿದ್ರೆ(53), ಇಬ್ರಾಹಿಂ ಝರ್ದಾನ್ 120 ಎಸೆತಗಳಲ್ಲಿ 106 ರನ್ ಸಿಡಿಸಿ ಉತ್ತಮ ಆರಂಭ ನೀಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಒಳಗೊಂಡಿದ್ದವು.

ರಹಮತ್ ಶಾ 64 ಎಸೆತಗಳಲ್ಲಿ 52 ರನ್, ನಜೀಬುಲ್ಲಾ ಝದ್ರಾನ್ 42 ರನ್‌ ಕಲೆಹಾಕುವ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು. ಪರಿಣಾಮ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 294 ರನ್ ಕಲೆಹಾಕಿತು. ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ರಾಹಿಂ ಜರ್ದಾನ್‌ಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಒಲಿದುಬಂದಿತು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ 11:
ಪಥುಮ್ ನಿಸ್ಸಾಂಕಾ, ಕುಸಾಲ್ ಮೆಂಡೀಸ್ (ವಿಕೆಟ್ ಕೀಪರ್), ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವಹಿಂದು ಹಸರಂಗ, ಧನಂಜಯ ಲಕ್ಷನ್, ಮಹೀಶ್ ತೀಕ್ಷನ, ಲಹಿರು ಕುಮಾರ, ಕಸುನ್ ರಂಜಿತ

ಬೆಂಚ್‌: ಅಶೆನ್ ಬಂಡಾರ, ಅಸಿಥಾ ಫರ್ನಾಂಡೊ, ಪ್ರಮೋದ್ ಮಧುಸೂದನ್, ದುನಿತ್ ವೆಲ್ಲಂಘೆ

ಅಫ್ಘಾನಿಸ್ತಾನ ಪ್ಲೇಯಿಂಗ್ 11:
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಿಯಾಜ್ ಹಸನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ರಹಮತ್ ಶಾ, ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರಹಮಾನ್, ರಶೀದ್ ಖಾನ್, ಯಾಮಿನ್ ಅಹ್ಮದ್ಝಾಯ್

ಬೆಂಚ್: ಗುಲ್ಬದೀನ್ ನೈಬ್, ಫರೀದ್ ಅಹ್ಮದ್ ಖಾನ್, ಶಾಯಿದುಲ್ಲಾ ಕಮಲ್, ಜಿಯಾ ಉರ್ ರಹಮಾನ್, ಇಕ್ರಾಮ್ ಅಲಿಖಿಲ್, ಅಜ್ಮತುಲ್ಲಾ ಒಮಜ್ರಾಯ್, ನೂರ್ ಅಹಮದ್

Story first published: Friday, November 25, 2022, 23:15 [IST]
Other articles published on Nov 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+