SL vs PAK 1st Test: ಟಾಸ್ ವರದಿ, ಪ್ಲೇಯಿಂಗ್ 11 Live Score

ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಲಂಕಾ ತಂಡವು ಪ್ರವಾಸಿ ಪಾಕಿಸ್ತಾನ ವಿರುದ್ಧವೂ ಅಂತಹದ್ದೇ ಪ್ರದರ್ಶನ ನೀಡಲು ಸಜ್ಜಾಗಿದೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಶ್ರೀಲಂಕಾ ತಂಡವು ದೊಡ್ಡ ಮೊತ್ತವನ್ನ ಕಲೆಹಾಕಿ ಪಾಕ್ ತಂಡಕ್ಕೆ ಸವಾಲೊಡ್ಡಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಂಕಾ ತಂಡವು ಇನ್ನಿಂಗ್ಸ್ ಸೇರಿದಂತೆ ಇನ್ನಿಂಗ್ಸ್ ಸೇರಿದಂತೆ 39 ರನ್‌ಗಳ ಬೃಹತ್ ಗೆಲುವು ದಾಖಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 554 ರನ್‌ಗಳ ಬೃಹತ್ ರನ್ ಕಲೆಹಾಕಿದ್ದ ಲಂಕಾಗೆ ಉತ್ತರವಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಕೇವಲ 154ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು.
ಪಾತುಮ್ ನಿಸ್ಸಾಂಕಗೆ ಕೋವಿಡ್, ತಂಡದಲ್ಲಿ ಕೆಲವು ಬದಲಾವಣೆ
ಶ್ರೀಲಂಕಾ ತಂಡದಲ್ಲಿ ಕೆಲವು ಬದಲಾವಣೆ ಕಂಡು ಬಂದಿದೆ. ಕೋವಿಡ್-19 ಕಾರಣದಿಂದಾಗಿ ಪಾತುಮ್ ಸಿಸ್ಸಾಂಕ ತಂಡದಲ್ಲಿ ಅವಕಾಶ ಪಡೆದಿಲ್ಲ. ಆತನ ಬದಲು ಕಳೆದ ಪಂದ್ಯದ ಮಧ್ಯದಲ್ಲಿ ಅವಕಾಶ ಪಡೆದಿದ್ದ ಒಶಾದ ಫರ್ನಾಂಡೊ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿದ್ದು, ಕಮಿಂದು ಮೆಂಡೀಸ್ ಬದಲು ಧನಂಜಯ ಡಿ ಸಿಲ್ವಾ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ODI, T20 ಸರಣಿಗೆ ತಂಡವನ್ನ ಘೋಷಿಸಿದ ಇಂಗ್ಲೆಂಡ್: ಆದಿಲ್ ರಶೀದ್ ಕಂಬ್ಯಾಕ್
ಶ್ರೀಲಂಕಾ ತಂಡದ ಪ್ಲೇಯಿಂಗ್ ಇಲೆವೆನ್
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ
361 ರನ್ ಟಾರ್ಗೆಟ್: ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್‌ಗೆ 1ರನ್‌ಗಳ ವೀರೋಚಿತ ಸೋಲು

ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications