
ವಿದರ್ಭ ವಿರುದ್ಧ ಭರ್ಜರಿಯಾಗಿ ಗೆದ್ದು ಫೈನಲ್ ಪ್ರವೇಶಿಸಿರುವ ಮುಂಬೈ
ಈಡನ್ ಗಾರ್ಡನ್ ಮೈದಾನದಲ್ಲೇ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಮುಂಬೈ ಗೆದ್ದು ಬೀಗಿದ್ದು, ಫೈನಲ್ ಪ್ರವೇಶಿಸಿದೆ. ವಿದರ್ಭ ನೀಡಿದ್ದ 165ರನ್ ಗುರಿ ಬೆನ್ನತ್ತಿದ ಮುಂಬೈ ಬಹುಬೇಗನೆ ಎರಡು ವಿಕೆಟ್ ಕಳೆದುಕೊಂಡಿತು. ನಾಯಕ ರಹಾನೆ 5, ಯಶಸ್ವಿ ಜೈಸ್ವಾಲ್ 12ರನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಆಘಾತ ಮೂಡಿಸಿದ್ರು. ಆದ್ರೆ ಪೃಥ್ವಿ ಶಾ 21 ಎಸೆತಗಳಲ್ಲಿ 35ರನ್ ಸಿಡಿಸಿದ್ರೆ, ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 73ರನ್ ಸಿಡಿಸುವ ಮೂಲಕ ಮಿಂಚಿದರು.
ಟಿ20 ವಿಶ್ವಕಪ್: ಭಾರತ-ಜಿಂಬಾಬ್ವೆ ಅಂತಿಮ ಪಂದ್ಯಕ್ಕೆ ಮಳೆ ಕಾಟವೇ? ಹವಾಮಾನ ವರದಿಯಲ್ಲಿ ಏನಿದೆ?

ಬಲಿಷ್ಟ ಬ್ಯಾಟಿಂಗ್ ಲೈನಪ್ ಹೊಂದಿರುವ ರಹಾನೆ ಟೀಂ
ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನಪ್ ಜೊತೆಗೆ ಉತ್ತಮ ಬೌಲರ್‌ಗಳನ್ನು ಸಹ ಕಾಣಬಹುದಾಗಿದೆ. ಆದ್ರೆ ಆಟದ ಅನುಭವ ಹಾಗೂ ಬ್ಯಾಟಿಂಗ್ ಆಳತೆಯನ್ನು ನೋಡಿದ್ರೆ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ಇಂಡಿಯನ್ಸ್ ಹೆಚ್ಚು ಬಲಿಷ್ಟವಾಗಿ ಕಾಣಿಸುತ್ತದೆ. ಪೃಥ್ವಿ ಶಾ, ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಹಾಗೂ ಸರ್ಫರಾಜ್ ಖಾನ್ , ಶಿವಂ ದುಬೆರಂತಹ ಪಕ್ಕಾ ಟಿ20 ಸ್ಟಾರ್ ಬ್ಯಾಟರ್‌ಗಳನ್ನು ತಂಡದಲ್ಲಿ ಕಾಣಬಹುದಾಗಿದೆ.
ಜೊತೆಗೆ ಮುಂಬೈ ತಂಡದ ಬೌಲಿಂಗ್‌ನಲ್ಲೂ ತುಷಾರ್ ದೇಶಪಾಂಡೆ, ಶಾಮ್ಸ್ ಮುಲಾನಿ, ಶಿವಂ ದುಬೆರಂತಹ ಆಟಗಾರರನ್ನ ನೋಡಬಹುದು.
ಅಂದ ಮಾತ್ರಕ್ಕೆ ರಿಷಿ ಧವನ್ ನಾಯಕತ್ವದ ಹಿಮಾಚಲ ಪ್ರದೇಶ ತಂಡವನ್ನು ಅಲ್ಲಗೆಳೆಯುವಂತಿಲ್ಲ. ಪ್ರಶಾಂತ್ ಚೋಪ್ರಾ, ಅಂಕುಶ್ ಬೈನ್ಸ್ ಅಭಿಮನ್ಯು ರಾಣಾ ಹಾಗೂ ಸೆಮಿಫೈನಲ್‌ನಲ್ಲಿ 25 ಎಸೆತಗಳಲ್ಲಿ 51 ರನ್ ಸಿಡಿಸಿದ ಸುಮೀತ್ ವರ್ಮಾರನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಬಹುದು. ರಿಷಿ ಧವನ್, ಮಯಾಂಕ್ ಡಗಾರ್ ಪ್ರಮುಖ ಬೌಲರ್ ಆಗಿದ್ದಾರೆ.
ಶಾಹಿನ್ ಅಫ್ರಿದಿ ಕಂಬ್ಯಾಕ್ ಮಾಡಲು ಶಾಹಿದ್ ಅಫ್ರಿದಿ ಟಿಪ್ಸ್ ಹೇಗೆ ನೆರವಾಯ್ತು?

ಮುಂಬೈ ಮತ್ತು ಹಿಮಾಚಲ ಪ್ರದೇಶ ಸ್ಕ್ವಾಡ್
ಹಿಮಾಚಲ ಪ್ರದೇಶ: ಪ್ರಶಾಂತ್ ಚೋಪ್ರಾ, ಅಂಕುಶ್ ಬೇನ್ಸ್ (ವಿಕೆಟ್ ಕೀಪರ್ ), ಅಭಿಮನ್ಯು ರಾಣಾ, ಸುಮೀತ್ ವರ್ಮಾ, ಆಕಾಶ್ ವಸಿಷ್ತ್, ನಿಖಿಲ್ ಗಂಗ್ತಾ, ಪಂಕಜ್ ಜೈಸ್ವಾಲ್, ರಿಷಿ ಧವನ್(ನಾಯಕ), ಏಕಾಂತ್ ಸೇನ್, ಮಯಾಂಕ್ ದಾಗರ್, ಕನ್ವರ್ ಅಭಿನಯ್ ಸಿಂಗ್, ವೈಭವ್ ಅರೋರಾ, ಗುರ್ವಿಂದರ್ ಸಿಂಗ್, ರಾಘವ್ ಧವನ್, ಅಂಕುಶ್ ಧವನ್ ಬೇಡಿ, ವಿನಯ್ ಗಲೇಟಿಯಾ, ಆಯುಷ್ ಜಮ್ವಾಲ್, ಶುಭಂ ಅರೋರಾ
ಮುಂಬೈ: ಪೃಥ್ವಿ ಶಾ, ಅಜಿಂಕ್ಯ ರಹಾನೆ(ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್(ವಿಕೆಟ್ ಕೀಪರ್), ಶಿವಂ ದುಬೆ, ಶಮ್ಸ್ ಮುಲಾನಿ, ಅಮನ್ ಹಕೀಂ ಖಾನ್, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಪರೀಕ್ಷಿತ್ ವಲ್ಸಂಗಕರ್, ಧಾವಲ್ ಕುಲಕರ್ಣಿ, ಶರ್ದ್ ಕುಲಕರ್ಣಿ ಸೋಲಂಕಿ, ಸಾಯಿರಾಜ್ ಪಾಟೀಲ್, ಸೂರ್ಯಾಂಶ್ ಶೆಡ್ಗೆ, ಹಾರ್ದಿಕ್ ತಮೋರ್


Click it and Unblock the Notifications












