Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಡೆಯರ್ ಕೆಪಿಎಲ್ ಪಂದ್ಯ ಎಲ್ಲಿ ನೋಡೋದು?

ಬೆಂಗಳೂರು, ಆ.27: ಕರ್ನಾಟಕ ಪ್ರಿಮಿಯರ್ ಲೀಗ್ 2014(ಕೆಪಿಎಲ್) ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆ.28ರಿಂದ ಆರಂಭವಾಗಲಿರುವ ಈ ಟೂರ್ನಿಯ ಪಂದ್ಯಗಳ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಪಡೆದುಕೊಂಡಿದೆ. ಮೈಸೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮೊದಲೆರಡು ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಕೆಎಸ್ ಸಿಎ ಹೇಳಿದೆ.

ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮಾತನಾಡಿ, ಬುಧವಾರದಿಂದ ಆರಂಭವಾಗಲಿರುವ ಒಡೆಯರ್ ಕೆಪಿಎಲ್ 2014 ಟ್ವೆಂಟಿ20 ಪಂದ್ಯಾವಳಿಗೆ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನ ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳ ಟಿಕೆಟ್ ಮಾರಾಟವಾಗಿರುವುದು ಖುಷಿ ತಂದಿದೆ ಎಂದಿದ್ದಾರೆ.[ಕೆಪಿಎಲ್ ವೇಳಾಪಟ್ಟಿ ನೋಡಿ]

ಸೋನಿ ಸಿಕ್ಸ್ ಕೆಪಿಎಲ್ ನ ಅಧಿಕೃತ ಪ್ರಸಾರ ಸಂಸ್ಥೆಯಾಗಿದೆ. ಉಳಿದಂತೆ ಸ್ಥಳೀಯ ಖಾಸಗಿ ಚಾನೆಲ್ ಗಳು ಪಂದ್ಯಗಳನ್ನು ಸ್ವಲ್ಪ ವಿಳಂಬದೊಂದಿಗೆ ಪ್ರಸಾರ ಮಾಡಲಿವೆ. ಸೋನಿ ಸಿಕ್ಸ್ HD ಹಾಗೂ SD ಎರಡೂ ಮಾದರಿಯಲ್ಲೂ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. [ಸುದೀಪ್ ರಾಕ್ ಸ್ಟಾರ್ಸ್ ತಂಡ]

Sony SIX to telecast KPL matches; tickets sold out for opening 2 games

ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಸಾರ ಮಾಡಿದ ಅನುಭವವಿರುದ ಸೋನಿ ಸಿಕ್ಸ್ ಸಂಸ್ಥೆ ಈಗ ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಸಾರ ಮಾಡಲು ಸಜ್ಜಾಗಿದೆ. ಮೈಸೂರಿನಲ್ಲಿ ನಡೆಯಲಿರುವ ಒಡೆಯರ್ ಕೆಪಿಎಲ್ ನ ಆರಂಭಿಕ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ ಸುದೀಪ್ ಅವರ ರಾಕ್ ಸ್ಟಾಸ್ ಸೆಣೆಸಲಿದ್ದಾರೆ.

ಗುರುವಾರ(ಆ.28) ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ. ಹುಬ್ಬಳ್ಳಿಯಲ್ಲಿ ಸೆ.12ರಂದು ಫೈನಲ್ ನಡೆಯಲಿದೆ. ಒಟ್ಟು ಏಳು ತಂಡಗಳು ಕಣದಲ್ಲಿವೆ. [ಮಂಗಳೂರಿನ ಯುನೈಟೆಡ್ ತಂಡ]

ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟೈಗರ್ಸ್, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳ ಆಟಗಾರರು ಮೈದಾನದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿ ಸಜ್ಜಾಗಿವೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+