ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!
ಸಿಡ್ನಿ, ಮಾ.26: ವಿರಾಟ್ ಕೊಹ್ಲಿ 1 ರನ್ ಹೊಡೆದಿದ್ದು ನೋಡಲು ಭಾರತದಿಂದ ಸಿಡ್ನಿಗೆ ಅನುಷ್ಕಾ ಬಂದಿದ್ದಳು ಎಂದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಬ್ಬರದ್ದು ಎಂಥಾ ಪ್ರೇಮ..ಎಂಬ ಸಿಂಪಲ್ ಕೀಟಲೆ ಸಂದೇಶದಿಂದ ಹಿಡಿದು ಇಬ್ಬರ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಾಜು ಹಾಕುವ ಮೂಲಕ ದೇಶವೇ ತಲೆ ತಗ್ಗಿಸುವಂಥ ಕೃತ್ಯ ನಡೆದಿದೆ.
ಕ್ರಿಕೆಟ್ ಒಬ್ಬ ಆಟಗಾರನ ಆಟವಲ್ಲ. ಇದು ಟೀಂ ಗೇಮ್. ಕೊಹ್ಲಿ ಒಂದು ಪಂದ್ಯದಲ್ಲಿ ಸೋತಿದ್ದಕ್ಕೂ ಅನುಷ್ಕಾ ಶರ್ಮ ಪಂದ್ಯ ವೀಕ್ಷಣೆಗೆ ಸಿಡ್ನಿಗೆ ಬಂದಿದ್ದಕ್ಕೂ ಎಲ್ಲಿಯ ಸಂಬಂಧ. ಹಾಗಾದರೆ, ಈ ಹಿಂದೆ ಅನುಷ್ಕಾ ಶರ್ಮ ಗ್ಯಾಲರಿಯಲ್ಲಿ ಕುಳಿತಾಗ ಕೊಹ್ಲಿ ಶತಕಗಳನ್ನು ಸಿಡಿಸಿರಲಿಲ್ಲವೇ ಎಂದು ಕೊಹ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಸೆಮಿಫೈನಲ್ ನಂಥ ಮಹತ್ವದ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರನಾಗಿದ್ದು, ಕಳಪೆ ಪ್ರದರ್ಶನ ನೀಡಿದ್ದು ಯಾರಿಗಾದರೂ ಬೇಸರ ತರಿಸುತ್ತದೆ ನಿಜ. ಅದಕ್ಕಾಗಿ ಪಕ್ಕದ ಬಾಂಗ್ಲಾದೇಶ, ಪಾಕಿಸ್ತಾನದ ಹುಚ್ಚು ಅಭಿಮಾನಿಗಳ ರೀತಿ ಭಾರತೀಯರು ವರ್ತಿಸಿದರೆ ಹೇಗೆ? [ಟೀಕೆ ಮಾಡೋದು ಬಿಡಿ, ಧೋನಿ ಪಡೆ ಬೆನ್ನು ತಟ್ಟಿ]
ಸಿಡ್ನಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲು ಬಂದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮ ಮೇಲೆ ಕೆಮರಾ ಹೆಚ್ಚು ಫೋಕಸ್ ಆಗಿದ್ದು ನಿಜ. ವಿರಾಟ್ ಕೊಹ್ಲಿ ವೈಫಲ್ಯ ಭಾರತಕ್ಕೆ ಮುಳುವಾಗಿದ್ದೂ ನಿಜ. [ಪ್ರತಿಭಟನೆ ಬಿಸಿ, ಧೋನಿ ಮನೆಗೆ ರಕ್ಷಣೆ]
ಅದರೆ, ಭಾರತ ಈ ಪಂದ್ಯದಲ್ಲಿ ಸೋಲಲು ಕೊಹ್ಲಿಯೇ ಕಾರಣ ಎನ್ನುವುದು ಮೂರ್ಖತನದ ಮಾತು. ಅದರಲ್ಲೂ ಅನುಷ್ಕಾ ಬಂದಿದ್ದು ಈ ಬಾರಿ ಕೊಹ್ಲಿಗೆ ಅದೃಷ್ಟದ ಬದಲಿಗೆ ದುರಾದೃಷ್ಟ ತಂದಿತು ಎಂದು ಹಳಿಯುವುದು ಸಕತ್ ಸಿಲ್ಲಿ.

ಟ್ವಿಟ್ಟರ್ ನಲ್ಲಿ ಅನುಷ್ಕಾ ತೆಗಳಿಕೆ
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲುತ್ತಿದ್ದಂತೆ ಭಾರತದಲ್ಲಿ ಪ್ರತಿಭಟನೆಗಳು ಮೊದಲಾಗಿವೆ. ಇದರ ಜೊತೆಗೆ ಸಾಮಾಜಿಕ ಜಾಲ ತಾಣಗ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಅನುಷ್ಕಾ ಶರ್ಮರನ್ನು ಹೀಯಾಳಿಸುತ್ತಿದ್ದಾರೆ. ಅತ್ಯಂತ ಕೆಟ್ಟ ಅಭಿರುಚಿಯ ಟ್ವೀಟ್ ಗಳು ಟೀಂ ಇಂಡಿಯಾದ ಈವರೆಗಿನ ಸಾಧನೆಯನ್ನು ಮರೆ ಮಾಚುವಂತೆ ಮಾಡುತ್ತಿದೆ.
ಬೇಕಾದಾಗ ಹೊಗಳುವುದು ಬೇಡವೆಂದರೆ
ಬೇಕಾದಾಗ ಹೊಗಳುವುದು ಬೇಡವೆಂದರೆ ತೆಗಳುವುದೇಕೆ?
ಅನುಷ್ಕಾ ಪ್ರತಿಕ್ರಿಯೆ ಚಿತ್ರ ಜನಪ್ರಿಯವಾಗಿದೆ
ಕೊಹ್ಲಿ 1 ರನ್ ಗಳಿಸಿ ಔಟಾದ ನಂತರ ಅನುಷ್ಕಾ ಪ್ರತಿಕ್ರಿಯೆ ನೀಡಿದ ಚಿತ್ರ ಸಕತ್ ಓಡಾಡುತ್ತಿದೆ.
ವಿರಾಟ್ ಕೊಹ್ಲಿ ತುರ್ತು ನಿರ್ಗಮನ ಕಾರಣ
ವಿರಾಟ್ ಕೊಹ್ಲಿ ತುರ್ತು ನಿರ್ಗಮನ ಕಾರಣ ಏನು? ರೈನಾ ಕೂಡಾ ಹಿಂಬಾಲಿಸಿದ್ರು.
ಅನುಷ್ಕಾರನ್ನು ಬ್ಯಾಡ್ ಲಕ್ ಎಂದ ಜನ
ಅನುಷ್ಕಾರನ್ನು ಬ್ಯಾಡ್ ಲಕ್ ಎಂದ ಜನ ಆಕೆಯನ್ನು ಬ್ಯಾನ್ ಮಾಡಬೇಕು ಎಂದಿದ್ದಾರೆ
ಜಾತಿವಾದವನ್ನು ಎಳೆದು ತಂದ ಸಾರ್ವಜನಿಕರು
ಅನುಷ್ಕಾ ಹಳಿಯುವ ಕಾರ್ಯಕ್ರಮದಲ್ಲಿ ಪ್ರೀತಿ ಪ್ರೇಮ ಜಾತಿವಾದ ಎಲ್ಲವೂ ಸೇರಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications