Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತನ ಕೆಲವೊಂದು ಶಾಟ್‌ಗಳನ್ನ ನಾನು ಇದುವರೆಗೆ ನೋಡಿಯೇ ಇರ್ಲಿಲ್ಲ: ಕೇನ್‌ ವಿಲಿಯಮ್ಸನ್

Suryakumar yadav

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಟೀಂ ಇಂಡಿಯಾ ಮಿಸ್ಟರ್ 360 ಸೂರ್ಯಕುಮಾರ್ ಯಾದವ್, ಕಿವೀಸ್ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ್ದಾರೆ. ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿದ ಸೂರ್ಯ, ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಕಂಡಂತಹ ಅತ್ಯಂತ ಬೆಸ್ಟ್ ಇನ್ನಿಂಗ್ಸ್‌ವೊಂದನ್ನು ಆಡಿದ್ದಾರೆ.

49 ಎಸೆತಗಳಲ್ಲಿ ಶತಕ, 51 ಎಸೆತಗಳಲ್ಲಿ ಅಜೇಯ 111ರನ್ ಕಲೆಹಾಕಿದ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅಮೋಘ ಶತಕ ದಾಖಲಿಸಿದರು. ಅದ್ರಲ್ಲೂ ಪ್ರಸ್ತುತ ವರ್ಷದಲ್ಲಿಯೇ ಎರಡನೇ ಶತಕ ದಾಖಲಿಸಿದ್ದಾರೆ ಈ ನಂಬರ್ 1 ಟಿ20 ಬ್ಯಾಟರ್.

ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಕಂಡಂತಹ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಹಾಡಿ ಹೊಗಳಿದ್ದಾರೆ. 'ಆತ ವಿಶ್ವಕ್ರಿಕೆಟ್‌ನ ಬೆಸ್ಟ್ ಪ್ಲೇಯರ್ ಆಗಿದ್ದು, ಲೈವ್ ನೋಡಲು ಸಾಧ್ಯವಾಗಲಿಲ್ಲ. ಆದ್ರೆ ಆತ ಮತ್ತೊಮ್ಮೆ ವೀಡಿಯೋ ಗೇಮ್ ಇನ್ನಿಂಗ್ಸ್‌ ಆಡಿದ್ದಾರೆ ಎಂದು ನಂಬುತ್ತೇನೆ'' ಎಂದು ವಿರಾಟ್ ಕೊಹ್ಲಿ ನಗುವ ಎಮೋಜಿಯನ್ನು ಪೋಸ್ಟ್‌ ಮಾಡಿ ಸೂರ್ಯಕುಮಾರ್‌ ಯಾದವ್‌ಗೆ ಟ್ಯಾಗ್ ಮಾಡಿದ್ದಾರೆ.

ಕೇವಲ ಟೀಂ ಇಂಡಿಯಾ ಆಟಗಾರರಷ್ಟೇ ಸೂರ್ಯನ ಇನ್ನಿಂಗ್ಸ್ ಕುರಿತು ಹೊಗಳಿಲ್ಲ. ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಸೂರ್ಯನ ಇನ್ನಿಂಗ್ಸ್ ಕಂಡು ಆಶ್ಚರ್ಯಗೊಂಡಿದ್ದಾರೆ. ಸೂರ್ಯನ ಇನ್ನಿಂಗ್ಸ್ ತಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಒಂದಾಗಿದೆ ಎಂದು ಹೊಗಳಿದ್ದಾರೆ.

''ಅದು ನಮ್ಮ ಉತ್ತಮ ಪ್ರಯತ್ನವಾಗಿರಲಿಲ್ಲ. ಸೂರ್ಯನ ಇನ್ನಿಂಗ್ಸ್ ಈ ಪ್ರಪಂಚದಿಂದಲೇ ಹೊರತಾಗಿದೆ. ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್‌ನಲ್ಲಿ ಒಂದಾಗಿದೆ. ಆತನ ಕೆಲವೊಂದು ಶಾಟ್‌ಗಳನ್ನು ನಾನು ಇದುವರೆಗೂ ನೋಡಿಯೇ ಇರಲಿಲ್ಲ. ಆ ಶಾಟ್‌ಗಳು ಅದ್ಭುತವಾಗಿದ್ದವು. ಸೂರ್ಯ ವಿಶ್ವದ ಬೆಸ್ಟ್ ಕ್ರಿಕೆಟರ್‌ಗಳಲ್ಲಿ ಒಬ್ಬರು'' ಎಂದು ಕೇನ್‌ ವಿಲಿಯಮ್ಸನ್ ಪಂದ್ಯದ ಬಳಿಕ ಆತನ ಇನ್ನಿಂಗ್ಸ್ ಕುರಿತಾಗಿ ಮಾತನಾಡಿದ್ದಾರೆ.

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಶತಕ ದಾಖಲಿಸಿದ ಸೂರ್ಯ ಈ ವರ್ಷದಲ್ಲಿ ಎರಡನೇ ಶತಕ ದಾಖಲಿಸುವ ಮೂಲಕ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬಳಿಕ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ಶತಕ ದಾಖಲಿಸಿದ 2ನೇ ಭಾರತೀಯ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 2018ರಲ್ಲಿ ಎರಡು ಶತಕ ದಾಖಲಿಸಿದ್ದರು.

ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಸೂರ್ಯ 55 ಎಸೆತಗಳಲ್ಲಿ 117ರನ್ ಸಿಡಿಸಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಇದೀಗ ಅಜೇಯ 111ರನ್ ಕಲೆಹಾಕಿದ ಸೂರ್ಯ, ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್ ಸಿಡಿಸಿದವರ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 5 ವೈಯಕ್ತಿಕ ಬೆಸ್ಟ್ ಇನ್ನಿಂಗ್ಸ್
122* (61): ವಿರಾಟ್ ಕೊಹ್ಲಿ vs ಅಫ್ಘಾನಿಸ್ತಾನ 2022
118 (43): ರೋಹಿತ್ ಶರ್ಮಾ vs ಶ್ರೀಲಂಕಾ 2017
117 (55): ಸೂರ್ಯಕುಮಾರ್ ಯಾದವ್ vs ಇಂಗ್ಲೆಂಡ್ 2022
111*(51): ಸೂರ್ಯಕುಮಾರ್ ಯಾದವ್ vs ನ್ಯೂಜಿಲೆಂಡ್ 2022
111* (61): ರೋಹಿತ್ ಶರ್ಮಾ vs ವೆಸ್ಟ್ ಇಂಡೀಸ್ 2018

Story first published: Monday, November 21, 2022, 5:30 [IST]
Other articles published on Nov 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+