Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತ್ರಿಕೋನ ಟಿ20 ಸರಣಿ: ಬಾಬರ್ ಅಬ್ಬರ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ ಪಾಕಿಸ್ತಾನ

Babar azam

ತ್ರಿಕೋನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡವು ಆರು ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಟಿ20 ವಿಶ್ವಕಪ್‌ಗೂ ಮುನ್ನ ಆತಿಥೇಯ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕಿವೀಸ್ ನಾಡಿನಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಭಾಗಿಯಾಗಿವೆ.

ಶನಿವಾರ (ಅ.08) ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ ಆಯ್ದುಕೊಂಡಿತ್ತು. ಪಾಕಿಸ್ತಾನದ ಬಿಗು ಬೌಲಿಂಗ್ ದಾಳಿಗೆ 8 ವಿಕೆಟ್ ನಷ್ಟಕ್ಕೆ 147ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಬಾಬರ್ ಅಜಮ್ ಅಬ್ಬರದ ಆಟಕ್ಕೆ ನಲುಗಿ ಹೋದ ನ್ಯೂಜಿಲೆಂಡ್

ಬಾಬರ್ ಅಜಮ್ ಅಬ್ಬರದ ಆಟಕ್ಕೆ ನಲುಗಿ ಹೋದ ನ್ಯೂಜಿಲೆಂಡ್

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವದ ಜೊತೆಗೆ ಅತ್ಯಂತ ಜವಾಬ್ದಾರಿಯುತ ಆಟವಾಡುವ ಮೂಲಕ ಅಜೇಯರಾಗಿ ಉಳಿದು ತಂಡವನ್ನ ಗೆಲುವಿನ ದಡ ತಲುಪಿಸಿದ್ರು. 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆದ್ರೆ ಪಾಕ್ ನಾಯಕ ಬಾಬರ್ 53 ಎಸೆತಗಳಲ್ಲಿ ಅಜೇಯ 79 ರನ್ ಕಲೆಹಾಕುವ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ಇದಕ್ಕೂ ಮುನ್ನ ಅಮೋಘ ಫಾರ್ಮ್‌ನಲ್ಲಿರುವ ಮೊಹಮ್ಮದ್ ರಿಜ್ವಾನ್ 4ರನ್‌ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರೆ, ಶಾನ್ ಮಸೂದ್ ಶೂನ್ಯಕ್ಕೆ ಬ್ಲೇರ್ ಟಿಕ್ನರ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಈ ವೇಳೆಯಲ್ಲಿ ಸ್ಫೋಟಕ ಆಟವಾಡಿದ ಶದಾಬ್ ಖಾನ್ 22 ಎಸೆತಗಳಲ್ಲಿ 34ರನ್ ಸಿಡಿಸಿ ಔಟಾದ್ರು. ಮೊಹಮ್ಮದ್ ನವಾಜ್ ಆಟ 16ರನ್‌ಗೆ ಕೊನೆಗೊಂಡಿತು.

ಆದ್ರೆ ಕೊನೆಯವರೆಗೂ ತಂಡಕ್ಕೆ ಆಧಾರವಾದ ಬಾಬರ್ ಅಜಮ್ ಅಜೇಯ 79ರನ್‌ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಅದ್ರಲ್ಲೂ ಬ್ಲೇರ್ ಟಿಕ್ನರ್ 18 ಓವರ್‌ನಲ್ಲಿ 21ರನ್ ಕಲೆಹಾಕುವ ಮೂಲಕ ಜಯವನ್ನ ಸುಲಭವಾಗಿಸಿದ್ರು. ಅಂತಿಮವಾಗಿ ಬಾಬರ್ ಬೌಂಡರಿ ಸಿಡಿಸುವ ಮೂಲಕ ತಂಡವನ್ನ ಜಯ ಹಾದಿಗೆ ತಂದರು. ಇವರ ಇನ್ನಿಂಗ್ಸ್‌ನಲ್ಲಿ 11 ಅಮೋಘ ಬೌಂಡರಿಗಳಿದ್ದವು. ಈ ಗೆಲುವಿನ ಮೂಲಕ ಪಾಕಿಸ್ತಾನ ತ್ರಿಕೋನ ಸರಣಿಯಲ್ಲಿ ಸತತ ಎರಡನೇ ಜಯ ಸಾಧಿಸಿದೆ.

ನ್ಯೂಜಿಲೆಂಡ್ ಪರ ಬ್ಲೇರ್ ಟಿಕ್ನರ್ 2 ವಿಕೆಟ್ ಪಡದರೂ ಸಹ 42 ರನ್ ನೀಡಿ ದುಬಾರಿಯಾದ್ರು. ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ತಲಾ 1 ವಿಕೆಟ್ ಪಡೆದರು.

'ಈತನನ್ನು ದೇವರೇ ಕಳಿಸಿದ್ದಾನೆ': ಟಿಮ್ ಡೇವಿಡ್ ಕುರಿತು ಡೇವಿಡ್ ವಾರ್ನರ್ ಶಾಕಿಂಗ್ ಹೇಳಿಕೆ!

ನ್ಯೂಜಿಲೆಂಡ್ ಟಾಪ್ ಆರ್ಡರ್ ವೈಫಲ್ಯ, ರನ್‌ಗಾಗಿ ಪರದಾಟ

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಫಿನ್ ಅಲೆನ್ 13ರನ್‌ಗಳಿಸಿ ಮೊಹಮ್ಮದ್ ವಾಸಿಮ್‌ಗೆ ವಿಕೆಟ್ ಒಪ್ಪಿಸಿದ್ರೆ, ಉತ್ತಮವಾಗೇ ಆಡ್ತಿದ್ದ ಕಾನ್ವೆ 36ರನ್‌ಗಳಿಸಿದ್ದಾಗ ನವಾಜ್‌ ಬೌಲಿಂಗ್‌ನಲ್ಲಿ ಔಟಾದ್ರು. ನಾಯಕ ವಿಲಿಯಮ್ಸನ್ ಆಟಕ್ಕೂ ನವಾಜ್ ತೆರೆ ಎಳೆದರು. ಕೇನ್ 30 ಎಸೆತಗಳಲ್ಲಿ 31ರನ್‌ಗಳಿಸಿ ಸಾಧಾರಣ ಇನ್ನಿಂಗ್ಸ್ ಆಡಿದರು.

ಗ್ಲೆನ್ ಫಿಲಿಪ್ಸ್ ಬಂದಷ್ಟೇ ವೇಗವಾಗಿ 18ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಸ್ಫೋಟಕ ಆಟವಾಡಿದ ಮಾರ್ಕ್ ಚಾಪ್ಮನ್ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 32ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಇನ್ನುಳಿದಂತೆ ನೀಶಮ್ 5, ಬ್ರೇಸ್‌ವೆಲ್ 0, ಇಶ್ ಸೋಧಿ 2, ಟಿಮ್ ಸೌಥಿ ಅಜೇಯ 1, ಟ್ರೆಂಟ್ ಬೋಲ್ಟ್‌ ಅಜೇಯ 2ರನ್‌ಗಳಿಸಿದ್ರು. 20 ಓವರ್‌ಗಳಲ್ಲಿ 147ರನ್‌ಗಳಿಸಲಷ್ಟೇ ಶಕ್ತಗೊಂಡಿತು.

ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 3, ಮೊಹಮ್ಮದ್ ವಾಸಿಂ ಮತ್ತು ನವಾಜ್ ತಲಾ 2 ವಿಕೆಟ್ ಪಡೆದ್ರೆ, ಶಾನವಾಜ್ ದಹಾನಿ ಒಂದು ವಿಕೆಟ್ ಪಡೆದರು.

ಯುಎಇ ವಿಶ್ವಕಪ್ ನಂತರ ಪಾಕ್ ತಂಡಕ್ಕೆ ಟೀಂ ಇಂಡಿಯಾ ಗೌರವ ನೀಡಲು ಪ್ರಾರಂಭಿಸಿದೆ; ರಮೀಜ್ ರಾಜಾ

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಪಾಕಿಸ್ತಾನ ತಂಡದ ಪ್ಲೇಯಿಂಗ್ 11
ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ

ಬೆಂಚ್: ಖುಶ್ದಿಲ್ ಶಾ, ನಸೀಮ್ ಶಾ, ಶಾಹೀನ್ ಅಫ್ರಿದಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೇನ್


ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ 11
ಡೆವೊನ್ ಕಾನ್ವೇ (ವಾರ), ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ಸಿ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್ವೆಲ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಬ್ಲೇರ್ ಟಿಕ್ನರ್

ಬೆಂಚ್: ಮಾರ್ಟಿನ್ ಗಪ್ಟಿಲ್, ಲ್ಯುಕಿ ಫರ್ಗುಸನ್, ಆಡಮ್ ಮಿಲ್ನೆ, ಡೇನ್ ಕ್ಲೀವರ್

Story first published: Saturday, October 8, 2022, 15:42 [IST]
Other articles published on Oct 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+