For Quick Alerts
ALLOW NOTIFICATIONS  
For Daily Alerts
 

ತ್ರಿಕೋನ ಟಿ20 ಸರಣಿ: ಪಾಕ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ ಆಯ್ಕೆ, ಪ್ಲೇಯಿಂಗ್ 11

NZ vs PAK T20 Match Toss

ಟಿ20 ವಿಶ್ವಕಪ್‌ಗೂ ಮುನ್ನ ಆತಿಥೇಯ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕಿವೀಸ್ ನಾಡಿನಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಭಾಗಿಯಾಗಿವೆ. ಶನಿವಾರ (ಅ.08) ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಕಿವೀಸ್ ಪಡೆ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆ ಹೊಂದಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಇತ್ತೀಚೆಗೆ ಇತರೆ ಫಾರ್ಮೆಟ್ ಆಡಿದ ಬಳಿಕ ಟಿ20 ಕ್ರಿಕೆಟ್ ಆಡುತ್ತಿದೆ. ಆದ್ರೆ ಅದೇ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಡಿರುವ ಫಾರ್ಮ್ ಜೊತೆಗೆ, ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿರುವ ಆತ್ಮವಿಶ್ವಾಸದಲ್ಲಿದೆ.

ಸ್ಕ್ವಾಡ್‌ಗೆ ಮರಳಿದ್ರೂ ಸತತ ಎರಡು ಪಂದ್ಯಗಳಿಗೆ ಶಾಹಿನ್ ಅಫ್ರಿದಿಗೆ ಸ್ಥಾನವಿಲ್ಲ!

ಸ್ಕ್ವಾಡ್‌ಗೆ ಮರಳಿದ್ರೂ ಸತತ ಎರಡು ಪಂದ್ಯಗಳಿಗೆ ಶಾಹಿನ್ ಅಫ್ರಿದಿಗೆ ಸ್ಥಾನವಿಲ್ಲ!

ಪಾಕಿಸ್ತಾನ ಬ್ಯಾಟಿಂಗ್ ವಿಭಾಗವು ಬಹುತೇಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ಬೌಲಿಂಗ್‌ ಬಲಿಷ್ಠ ಪಡೆಯನ್ನ ಹೊಂದಿದೆ. ಅದ್ರಲ್ಲೂ ಇಂಜ್ಯುರಿಯಿಂದಾಗಿ ಹಲವು ಸಮಯ ಹೊರಗುಳಿದಿದ್ದ ಸ್ಟಾರ್ ಬೌಲರ್‌ ಶಾಹಿನ್ ಅಫ್ರಿದಿ ಪಾಕ್ ತಂಡಕ್ಕೆ ಮರಳಿದ್ದರೂ ಸಹ ಇನ್ನೂ ಅವಕಾಶ ನೀಡಿಲ್ಲ.

ಬಾಂಗ್ಲಾ ವಿರುದ್ಧ ಆಡದ ಅಫ್ರಿದಿ ಈ ಪಂದ್ಯದಲ್ಲಾದ್ರೂ ಆಡಬಹುದೆಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಫ್ರಿದಿಗೆ ಟೀಂ ಮ್ಯಾನೇಜ್‌ಮೆಂಟ್ ಅವಕಾಶ ನೀಡದೆ ಮತ್ತಷ್ಟು ವಿಶ್ರಾಂತಿ ನೀಡಿದೆ. ಅಫ್ರಿದಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ ಪ್ರಮುಖ ಬೌಲರ್‌ಗಳಾಗಿ ಆಡಲಿದ್ದಾರೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ ಅನ್ನು ಈ ಕೆಳಗೆ ಕಾಣಬಹುದು.

'ಈತನನ್ನು ದೇವರೇ ಕಳಿಸಿದ್ದಾನೆ': ಟಿಮ್ ಡೇವಿಡ್ ಕುರಿತು ಡೇವಿಡ್ ವಾರ್ನರ್ ಶಾಕಿಂಗ್ ಹೇಳಿಕೆ!

ಪಾಕಿಸ್ತಾನ ತಂಡದ ಪ್ಲೇಯಿಂಗ್ 11

ಪಾಕಿಸ್ತಾನ ತಂಡದ ಪ್ಲೇಯಿಂಗ್ 11

ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ

ಬೆಂಚ್: ಖುಶ್ದಿಲ್ ಶಾ, ನಸೀಮ್ ಶಾ, ಶಾಹೀನ್ ಅಫ್ರಿದಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೇನ್

IND vs SA 2022: ಈ ವಿಚಾರಗಳಲ್ಲಿ ಸುಧಾರಣೆ ಕಾಣದಿದ್ದರೆ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಸೋಲು ಖಚಿತ

ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ 11

ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ 11

ಡೆವೊನ್ ಕಾನ್ವೇ (ವಾರ), ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ಸಿ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್ವೆಲ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಬ್ಲೇರ್ ಟಿಕ್ನರ್

ಬೆಂಚ್: ಮಾರ್ಟಿನ್ ಗಪ್ಟಿಲ್, ಲ್ಯುಕಿ ಫರ್ಗುಸನ್, ಆಡಮ್ ಮಿಲ್ನೆ, ಡೇನ್ ಕ್ಲೀವರ್

ತ್ರಿಕೋನ ಸರಣಿ: ಮೂರು ತಂಡಗಳು ತಲಾ ಎರಡು ಬಾರಿ ಮುಖಾಮುಖಿ

ತ್ರಿಕೋನ ಸರಣಿ: ಮೂರು ತಂಡಗಳು ತಲಾ ಎರಡು ಬಾರಿ ಮುಖಾಮುಖಿ

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯು ಅಕ್ಟೋಬರ್ 14ರವರೆಗೆ ನಡೆಯಲಿದೆ. ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಲೀಗ್‌ ಹಂತದಲ್ಲಿ ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ. ಅಂದ್ರೆ ಪ್ರತಿ ತಂಡವು ನಾಲ್ಕು ಟಿ20 ಪಂದ್ಯವನ್ನು ಆಡಲಿದೆ. ಈ ಹಂತದಲ್ಲಿ ಹೆಚ್ಚು ಅಂಕಗಳಿಸಿದ ಎರಡು ತಂಡಗಳು ಅಕ್ಟೋಬರ್ 14ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಒಂದೇ ಮೈದಾನ ಆತಿಥ್ಯ ವಹಿಸಿದೆ.

Story first published: Saturday, October 8, 2022, 11:54 [IST]
Other articles published on Oct 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+