For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಅಂತಿಮ ಓವರ್‌ನಲ್ಲಿ ಶಮಿ ಇದ್ದರೂ, ಅರ್ಷ್‌ದೀಪ್‌ಗೆ ಬೌಲಿಂಗ್ ನೀಡಿದ ಕಾರಣ ತಿಳಿಸಿದ ರೋಹಿತ್

arshdeep singh

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 12 ಹಣಾಹಣಿಯಲ್ಲಿ ಟೀಂ ಇಂಡಿಯಾ ಅಂತಿಮ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಐದು ರನ್‌ಗಳ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶಕ್ಕೆ ಮತ್ತಷ್ಟು ಹತ್ತಿರವಾಗಿದೆ.

ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಐದು ರನ್‌ಗಳಲ್ಲಿ ಪಂದ್ಯವನ್ನು ಜಯಿಸಿದ ಭಾರತ, ಗ್ರೂಪ್ 2 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಯಾರು ಬೌಲಿಂಗ್ ಮಾಡಲಿದ್ದಾರೆ ಎಂಬು ಕುತೂಹಲ ಎದುರಾಗಿತ್ತು. ಒಂದೆಡೆ ಅನುಭವಿ ಮೊಹಮ್ಮದ್ ಶಮಿ ಆದ್ರೆ, ಯುವ ವೇಗಿ ಅರ್ಷ್‌ದೀಪ್‌ರನ್ನ ಕೂಡ ಕಾಣಬಹುದಿತ್ತು. ಆದ್ರೆ ನಾಯಕ ರೋಹಿತ್ ಶರ್ಮಾ ಅಂತಿಮ ಆಯ್ಕೆಯಂತೆ ಅರ್ಷ್‌ದೀಪ್ ಬೌಲಿಂಗ್ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.

151ರನ್‌ಗೆ ಕಡಿತಗೊಂಡಿದ್ದ ಟಾರ್ಗೆಟ್

151ರನ್‌ಗೆ ಕಡಿತಗೊಂಡಿದ್ದ ಟಾರ್ಗೆಟ್

ಮಳೆಯ ಕಾರಣದಿಂದಾಗಿ ಅದಾಗಲೇ 7 ಒವರ್‌ಗೆ 66ರನ್ ಕಲೆಹಾಕಿದ್ದ ಬಾಂಗ್ಲಾ ತಂಡಕ್ಕೆ ಓವರ್ ಕಡಿತಗೊಂಡು 16 ಓವರ್‌ಗೆ 151 ರನ್ ಗುರಿ ನೀಡಲಾಯಿತು. ಪರಿಣಾಮ ಉಳಿದಿದ್ದ 9 ಓವರ್‌ಗಳಲ್ಲಿ ಬಾಂಗ್ಲಾಕ್ಕೆ 84ರನ್ ಬೇಕಿತ್ತು. 10 ವಿಕೆಟ್‌ಗಳು ತಂಡದ ಕೈನಲ್ಲಿತ್ತು.

ಆದ್ರೆ 27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್, ಕೆ.ಎಲ್ ರಾಹುಲ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆಗುತ್ತಿದ್ದಂತೆ, ಗೆಲುವಿನ ಟ್ರೆಂಡ್ ಬಾಂಗ್ಲಾ ಕಡೆಯಿಂದ ಭಾರತದ ಕಡೆಗೆ ಶಿಫ್ಟ್ ಆಯಿತು. ನಂತರ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ತಂಡಕ್ಕೆ ನುರುಲ್ ಹಸನ್ 25, ಟಸ್ಕಿನ್ ಅಹಮದ್ 12 ರನ್ ಆಧಾರವಾದ್ರೆ ಹೊರತು ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡರು.

ಅದ್ರಲ್ಲೂ ಅಂತಿಮ ಓವರ್‌ನಲ್ಲಿ ಬಾಂಗ್ಲಾಗೆ 20ರನ್‌ ಬೇಕಿದ್ದ ವೇಳೆಯಲ್ಲಿ ನಾಯಕ ರೋಹಿತ್ ಶರ್ಮಾ, ಶಮಿ ಬದಲು ಅರ್ಷ್‌ದೀಪ್‌ ಕೈಗೆ ಚೆಂಡು ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ರು.

ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನ

ಮೊಹಮ್ಮದ್ ಶಮಿಗಿಂತ ಅರ್ಷ್‌ದೀಪ್ ಆಯ್ಕೆ ಏಕೆ?

ಮೊಹಮ್ಮದ್ ಶಮಿಗಿಂತ ಅರ್ಷ್‌ದೀಪ್ ಆಯ್ಕೆ ಏಕೆ?

ಅರ್ಷ್‌ದೀಪ್ ಅಂತಿಮ ಓವರ್ ಬೌಲಿಂಗ್ ಮಾಡಲು ಮುಂದಾದ ವೇಳೆಯಲ್ಲಿ ಅನೇಕರಿಗೆ ಅಚ್ಚರಿಯ ಜೊತೆಗೆ ನಾಯಕ ನಿರ್ಧಾರದ ಕುರಿತಾಗಿ ಅನುಮಾನಗಳು ಎಡೆಮಾಡಿಕೊಟ್ಟಿದ್ದವು. ಅತ್ಯಂತ ಅನುಭವಿ ಬೌಲರ್ ಆಗಿರುವ ಮೊಹಮ್ಮದ್ ಶಮಿಗೆ ಬೌಲಿಂಗ್ ಕೊಡದೇ ಕೆಲವೇ ಅಂತರಾಷ್ಟ್ರೀಯ ಪಂದ್ಯವನ್ನಾಡಿರುವ ಅರ್ಷ್‌ದೀಪ್‌ಗೆ ಬೌಲಿಂಗ್ ಏಕೆ ಎಂಬ ಪ್ರಶ್ನೆಗಳು ಎದುರಾದವು.

ಮೊದಲ ಎಸೆತದಲ್ಲಿ ಸಿಂಗಲ್ ನೀಡಿದ್ದ ಈ ಪಂಜಾಬಿ ಬೌಲರ್‌, ಎರಡನೇ ಎಸೆತದಲ್ಲಿ ಸಿಕ್ಸರ್ ನೀಡುತ್ತಿದ್ದಂತೆ ನಾಯಕನ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆದವು ಎನಿಸಿಬಿಟ್ಟಿತು. ಮೂರನೇ ಎಸೆತದಲ್ಲಿ ಡಾಟ್ ಮಾಡಿದ್ದು ಸ್ವಲ್ಪ ಸಮಾಧಾನ ತಂದಿತು. ನಾಲ್ಕನೇ ಎಸೆತದಲ್ಲಿ 2ರನ್ ಒಕೆ ಆಗಿತ್ತು. ಆದ್ರೆ ಐದನೇ ಎಸೆತದಲ್ಲಿ ನುರುಲ್ ಹಸನ್ ಬೌಂಡರಿ ಸಿಡಿಸುತ್ತಿದ್ದಂತೆ ಭಾರತದ ಡಗೌಟ್‌ನಲ್ಲಿ ಸಂಪೂರ್ಣ ನೀರವ ಮೌನದ ಜೊತೆಗೆ ಟೆನ್ಷನ್ ಹೆಚ್ಚಿತು.

ಅಂತಿಮ ಎಸೆತದಲ್ಲಿ ಬಾಂಗ್ಲಾದೇಶ ಸಿಕ್ಸರ್ ಸಿಡಿಸಿದ್ರೆ, ಪಂದ್ಯ ಟೈ ಆಗಿ ಸೂಪರ್ ಓವರ್ ಆಗುತ್ತಿತ್ತು. ಆದ್ರೆ ಅರ್ಷ್‌ದೀಪ್ ಯಶಸ್ವಿಯಾಗಿ ಬೌಲಿಂಗ್ ಮಾಡಿ ಕೇವಲ 1 ರನ್‌ ನೀಡುವ ಮೂಲಕ ಭಾರತಕ್ಕೆ ಐದು ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಮಾಡಿದ ಕೊಹ್ಲಿ, ಅತಿ ಹೆಚ್ಚು ರನ್ ಕಲೆಹಾಕಿದ ವಿರಾಟ್ !

ಅಂತಿಮ ಓವರ್ ಅರ್ಷ್‌ದೀಪ್ ಆಯ್ಕೆ ಕುರಿತು ಕಾರಣ ತಿಳಿಸಿದ ರೋಹಿತ್

ಅಂತಿಮ ಓವರ್ ಅರ್ಷ್‌ದೀಪ್ ಆಯ್ಕೆ ಕುರಿತು ಕಾರಣ ತಿಳಿಸಿದ ರೋಹಿತ್

ಇನ್ನು ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಶಮಿ ಮತ್ತು ಅರ್ಷ್‌ದೀಪ್ ಆಯ್ಕೆಯಲ್ಲಿ ಯಾರು ಎಂಬುದು ಕೊಂಚ ಗೊಂದಲಕ್ಕೆ ಕಾರಣವಾಗಿದ್ದರೂ ಸಹ ನಮ್ಮ ಮೊದಲ ಆಯ್ಕೆ ಅರ್ಷ್‌ದೀಪ್ ಆಗಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

''ಅಂತಿಮ ಓವರ್‌ನಲ್ಲಿ ಅರ್ಷ್‌ದೀಪ್‌ಗೆ ನೀನು ಈ ಓವರ್ ಬೌಲಿಂಗ್ ಮಾಡಿ ತಂಡವನ್ನ ಗೆಲುವಿನ ದಡ ತಲುಪಿಸಲು ಕೇಳಿಕೊಂಡೆವು. ಜಸ್ಪ್ರೀತ್ ಬುಮ್ರಾ ಇಲ್ಲದ ವೇಳೆಯಲ್ಲಿ ಅದೇ ರೀತಿಯಲ್ಲಿ ತಂಡಕ್ಕೆ ನೆರವಾಗಬೇಕಾಗಿದ್ದು ಆತನೇ. ಆದ್ರೆ ಸತ್ಯವಾಗಿ ಹೇಳಬೇಕಾದ್ರೆ ಆತ ಇನ್ನೂ ಯುವ ಬೌಲರ್ ಆಗಿದ್ದು ಇಂತಹ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದ್ರೆ ನಾವು ಆತನನ್ನು ತಯಾರಿ ಮಾಡಿದ್ದೇವೆ. ಕಳೆದ 9 ತಿಂಗಳಿನಲ್ಲಿ ಆ ಕುರಿತಾಗಿ ಅಭ್ಯಾಸ ಮಾಡಿಸಿದ್ದೇವೆ. ಶಮಿ ಮತ್ತು ಅರ್ಷ್‌ದೀಪ್ ನಡುವೆ ಆಯ್ಕೆಯ ವಿಚಾರ ಬಂದಾಗ ನಮಗೆ ಈ ಹಿಂದೆ ನೆರವಾಗಿದ್ದ ಬೌಲರ್‌ಗೆ ನಾವು ಬೆಂಬಲ ನೀಡಿದೆವು'' ಎಂದು ರೋಹಿತ್ ಶರ್ಮಾ ಪಂದ್ಯದ ನಂತರದ ಹೇಳಿಕೆಯಲ್ಲಿ ಅರ್ಷ್‌ದೀಪ್ ಕುರಿತಾಗಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಗೆದ್ದ ಬಳಿಕ, ಸೂಪರ್ 12 ಗ್ರೂಪ್ 2 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನ ಮೂಲಕ 6 ಪಾಯಿಂಟ್ಸ್ ಕಲೆಹಾಕಿದ್ದು, +0.746 ನೆಟ್ ರನ್‌ರೇಟ್‌ ಹೊಂದಿದೆ.

Story first published: Wednesday, November 2, 2022, 23:58 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+