T20 World Cup 2022 Points Table : ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಂಡಿದೆ. ಮಳೆಯಿಂದಾಗಿ ಡೆಕ್ವರ್ತ್ ನಿಯಮದಡಿಯಲ್ಲಿ ಕಡಿತಗೊಂಡಿದ್ದ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಗೆದ್ದು ಬೀಗಿದೆ.
ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿತು. ಬಾಂಗ್ಲಾಗೆ 185ರನ್‌ಗಳ ಗುರಿ ನೀಡಿತು.
185 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಪ್ರಸಕ್ತ ವಿಶ್ವಕಪ್‌ನಲ್ಲಿ ಯಾವ ತಂಡದ ವಿರುದ್ಧವೂ ತೋರದ ಅಬ್ಬರದ ಪ್ರದರ್ಶನ ನೀಡಿತು. ಬಾಂಗ್ಲಾದೇಶ ತಂಡದ ಆರಂಭಿಕ ಬ್ಯಾಟರ್ ಲಿಟ್ಟನ್ ದಾಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು. ಪವರ್‌ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದ ಲಿಟ್ಟನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ರು.

6 ಓವರ್‌ಗಳಲ್ಲಿ 66ರನ್ ಚಚ್ಚಿದ ಬಾಂಗ್ಲಾದೇಶ
ಪವರ್ ಪ್ಲೇ ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಅಬ್ಬರಿಸಿದ ಬಾಂಗ್ಲಾದೇ ತಂಡುವ 6 ಓವರ್‌ಗಳ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ 60ರನ್ ಕಲೆಹಾಕಿತು. ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 7 ಓವರ್‌ಗೆ 66ರನ್ ಕಲೆಹಾಕಿದ್ದು, ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 17 ರನ್ ಮುನ್ನಡೆ ಸಾಧಿಸಿತ್ತು.
26 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದ್ದ ಲಿಟ್ಟನ್ ದಾಸ್ ಜೊತೆಗೆ ನಜ್ಮುಲ್ ಶಾಂಟೊ 16 ಎಸೆತಗಳಲ್ಲಿ 7ರನ್ ಕಲೆಹಾಕಿದ್ದರು. ಮಳೆಯಿಲ್ಲದೇ ಹೋಗಿದ್ದಲ್ಲಿ ಬಾಂಗ್ಲಾದೇಶ ಅದೆಷ್ಟು ರನ್ ಕಲೆಹಾಕಿ ಬಿಡುತ್ತಿತ್ತೂ ಎಂಬುದು ಅರಿವಿಗೆ ಬರದಂತಿತ್ತು.
ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಮಾಡಿದ ಕೊಹ್ಲಿ, ಅತಿ ಹೆಚ್ಚು ರನ್ ಕಲೆಹಾಕಿದ ವಿರಾಟ್ !

ಬಾಂಗ್ಲಾಗೆ 16 ಓವರ್‌ಗೆ 151 ರನ್ ಗುರಿ, ಗಳಿಸಬೇಕಾಗಿದ್ದು 9 ಓವರ್‌ಗೆ 84 ರನ್
ಅದಾಗಲೇ 7 ಒವರ್‌ಗೆ 66ರನ್ ಕಲೆಹಾಕಿದ್ದ ಬಾಂಗ್ಲಾ ತಂಡಕ್ಕೆ ಮಳೆಯಿಂದಾಗಿ ಓವರ್ ಕಡಿತಗೊಂಡು 16 ಓವರ್‌ಗೆ 151 ರನ್ ಗುರಿ ನೀಡಲಾಯಿತು. ಪರಿಣಾಮ ಉಳಿದಿದ್ದ 9 ಓವರ್‌ಗಳಲ್ಲಿ ಬಾಂಗ್ಲಾಕ್ಕೆ 84ರನ್ ಬೇಕಿತ್ತು. 10 ವಿಕೆಟ್‌ಗಳು ತಂಡದ ಕೈನಲ್ಲಿತ್ತು.
ಆದ್ರೆ 27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್, ಕೆ.ಎಲ್ ರಾಹುಲ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆಗುತ್ತಿದ್ದಂತೆ, ಗೆಲುವಿನ ಟ್ರೆಂಡ್ ಬಾಂಗ್ಲಾ ಕಡೆಯಿಂದ ಭಾರತದ ಕಡೆಗೆ ಶಿಫ್ಟ್ ಆಯಿತು.
ನಂತರ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ತಂಡಕ್ಕೆ ನುರುಲ್ ಹಸನ್ 25, ಟಸ್ಕಿನ್ ಅಹಮದ್ 12 ರನ್ ಆಧಾರವಾದ್ರೆ ಹೊರತು ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡರು.
ಅಂತಿಮ ಓವರ್‌ನಲ್ಲಿ 20 ರನ್‌ಗಳಿಸಲಾಗದೆ ಬಾಂಗ್ಲಾದೇಶ ತಂಡವು 6 ವಿಕೆಟ್ ನಷ್ಟಕ್ಕೆ 145ರನ್ ಕಲೆಹಾಕಿತು. ಭಾರತ 5ರನ್‌ಗಳ ಗೆಲುವು ಸಾಧಿಸುವ ಮೂಲಕ 2 ಅಮೂಲ್ಯ ಪಾಯಿಂಟ್ಸ್ ಪಡೆದು ಸೆಮಿಫೈನಲ್ ಜೀವಂತವಾಗಿರಿಸಿದೆ.
India Vs Bangladesh : ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ

ಗ್ರೂಪ್ 2 ಪಾಯಿಂಟ್ಸ್ ಟೇಬಲ್ ಅಪ್‌ಡೇಟ್
ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಗೆದ್ದ ಬಳಿಕ, ಸೂಪರ್ 12 ಗ್ರೂಪ್ 2 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನ ಮೂಲಕ 6 ಪಾಯಿಂಟ್ಸ್ ಕಲೆಹಾಕಿದ್ದು, +0.746 ನೆಟ್ ರನ್‌ರೇಟ್ ಹೊಂದಿದೆ.
ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ 3 ಪಂದ್ಯಗಳಲ್ಲಿ 2 ಗೆಲುವು, 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್ ಜೊತೆಗೆ +2.772 ನೆಟ್ ರನ್‌ರೇಟ್‌ನಲ್ಲಿ ಮುಂದಿದೆ.
ಭಾರತ ವಿರುದ್ಧ ಸೋತ ಬಾಂಗ್ಲಾದೇಶ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲಿನ ಮೂಲಕ 4 ಪಾಯಿಂಟ್ಸ್ ಜೊತೆಗೆ -1.282 ನೆಟ್ ರನ್‌ರೇಟ್ ಹೊಂದಿದೆ. ಕೊನೆಯ ಮೂರು ಸ್ಥಾನದಲ್ಲಿ ಜಿಂಬಾಬ್ವೆ 3 ಪಾಯಿಂಟ್ಸ್, ಪಾಕಿಸ್ತಾನ 2 ಪಾಯಿಂಟ್ಸ್ ಮತ್ತು ನೆದರ್ಲ್ಯಾಂಡ್ಸ್ 2 ಪಾಯಿಂಟ್ಸ್ ಮೂಲಕ ಕೊನೆಯ ಸ್ಥಾನದಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications