IND vs NED: ಭಾರತದ ಆಲ್‌ರೌಂಡ್ ಪ್ರದರ್ಶನ; ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ

ಗುರುವಾರ (ಅಕ್ಟೋಬರ್ 27) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರ ತಮ್ಮ ಎರಡನೇ ಸೂಪರ್ 12 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದೆ.
ಭಾರತ ನೀಡಿದ್ದ 180 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 123 ರನ್ ಗಳಿಸಿ ಬಲಿಷ್ಠ ಭಾರತದೆದುರು 56 ರನ್‌ಗಳಿಂದ ಮಂಡಿಯೂರಿತು.
ಟಿ20 ವಿಶ್ವಕಪ್: ಭಾರತ ವಿರುದ್ಧದ ಸೋಲಿನಿಂದ ಹೃದಯ ಭಗ್ನಗೊಂಡಿದೆ ಎಂದ ಪಾಕ್ ಕ್ರಿಕೆಟಿಗ ಇಫ್ತಿಕರ್ ಅಹ್ಮದ್
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಅರ್ಧಶತಕದ ಸಹಾಯದಿಂದ ಭಾರತ ತಂಡವು 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಬೃಹತ್ ಗುರಿ ನೀಡಿತ್ತು. ನಂತರ ಭಾರತದ ಬೌಲರ್‌ಗಳು ಪರಿಪೂರ್ಣ ಪ್ರದರ್ಶನವನ್ನು ನೀಡಿದ ಕಾರಣ ನೆದರ್ಲೆಂಡ್ಸ್ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್‌ಗಳಿಗೆ ನಿರ್ಬಂಧಿಸಿದರು.
ಭಾರತ ತಂಡವು ಸೂಪರ್ 12 ರಲ್ಲಿ ಗ್ರೂಪ್ 2 ಪಾಯಿಂಟ್‌ಗಳ ಪಡೆಯುವ ಮೂಲಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿತು. ಸಿಡ್ನಿಯಲ್ಲಿ ಹಿಂದಿನ ದಿನದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ದಕ್ಷಿಣ ಆಫ್ರಿಕಾಕ್ಕಿಂತ ಮೇಲಕ್ಕೆ ಏರಿತು. ಭಾರತವು ಈಗ 4 ಅಂಕಗಳನ್ನು ಹೊಂದಿದೆ ಮತ್ತು ಉತ್ತಮ ನೆಟ್ ರನ್ ರೇಟ್ +1.425 ಅನ್ನು ಹೊಂದಿದೆ. ಕಳೆದ ವರ್ಷದ ಆರಂಭಿಕ ನಿರ್ಗಮನದ ನಿರಾಶೆಯನ್ನು ಹಿಂದೆ ಹಾಕಲು ಮತ್ತು ಟಿ20 ವಿಶ್ವಕಪ್ 2022ರ ಸೆಮಿಫೈನಲ್ ತಲುಪಲು ಎದುರು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಔಟಾಗದೆ 62 ರನ್
ಭಾರತದ ನಾಯಕ ರೋಹಿತ್ ಶರ್ಮಾ ಅವರು ಒತ್ತಡದ ಸಂದರ್ಭದಲ್ಲಿ ಉಪಯುಕ್ತ ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳುವ ಲಕ್ಷಣಗಳನ್ನು ಪ್ರದರ್ಶಿಸಿದರು. ನಂತರ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಔಟಾಗದೆ 62 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಔಟಾಗದೆ 51 ರನ್ ಗಳಿಸಿದರು. ಚೆಂಡಿನೊಂದಿಗೆ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ನಡುವೆ 4 ವಿಕೆಟ್ ಪಡೆದರೆ, ಅರ್ಷ್‌ದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್‌ಗಳೊಂದಿಗೆ ಮಿಂಚಿದರು.
ಭಾರತದ ಸವಾಲಿನ ಮೊತ್ತ ಬೆನ್ನತ್ತಿದ ನೆದರ್ಲ್ಯಾಂಡ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. 2.2 ಓವರ್‌ಗಳಾಗಿದ್ದಾಗ 11 ರನ್ ಗಳಿಸಿದ್ದ ವಿಕ್ರಮ್‌ಜಿತ್ ಸಿಂಗ್ (1) ಅವರನ್ನು ಭುವನೇಶ್ವರ್ ಕುಮಾರ್ ಬೌಲ್ಡ್ ಮಾಡಿದರು.

ಭಾರತದ ಬೌಲಿಂಗ್ ವಿರುದ್ಧ ಪ್ರತಿರೋಧ ಒಡ್ಡಲಿಲ್ಲ
ನಂತರ ಕ್ರೀಸ್‌ಗೆ ಬಂದ ಬಾಸ್ ಡಿ ಲೀಡ್ (16) ರನ್ ಗಳಿಸಿ ಔಟಾದರೆ, ಮ್ಯಾಕ್ಸ್ ಓಡೌಡ್ (16) ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಕಾಲಿನ್ ಅಕರ್ಮನ್ (17) ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಅಶ್ವಿನ್ ಬೌಲಿಂಗ್‌ನಲ್ಲಿ ಅಕ್ಷರ್‌ಗೆ ಕ್ಯಾಚ್ ನೀಡಿದರು.
ನಂತರ, ಟಿಮ್ ಪ್ರಿಂಗಲ್ (20), ಶರಿಜ್ ಅಹ್ಮದ್ (16) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಾರು ಭಾರತದ ಬೌಲಿಂಗ್ ವಿರುದ್ಧ ಪ್ರತಿರೋಧ ಒಡ್ಡಲಿಲ್ಲ.

ಭಾರತದ ಬ್ಯಾಟಿಂಗ್ ಇನ್ನಿಂಗ್ಸ್
ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಅರ್ಧಶರತಕ ಗಳಿಸುವ ಮೂಲಕ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 48 ಎಸೆತಗಳಲ್ಲಿ 95 ರನ್ ಚಚ್ಚಿದರು. ಇದರಿಂದಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ 180 ರನ್‌ಗಳ ದೊಡ್ಡ ಮೊತ್ತದ ಗುರಿ ನೀಡಲು ಸಹಾಯವಾಗಿತ್ತು.
ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದ ನಂತರ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಭಾರತವನ್ನು ದೊಡ್ಡ ಮೊತ್ತದ ಮುನ್ನಡೆಸಿದರು.
ಇದಕ್ಕೂ ಮುನ್ನ, ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಕೆಎಲ್ ರಾಹುಲ್ ಅವರ ವಿಕೆಟ್ ಕಳೆದುಕೊಂಡ ನಂತರ ವಿರಾಟ್ ಕೊಹ್ಲಿ ಜೊತೆಗೆ ಸೇರಿ ರೋಹಿತ್ ಶರ್ಮಾ ಭಾರತದ ಇನ್ನಿಂಗ್ಸ್ ಅನ್ನು ವೇಗಗೊಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications