Aus vsSL: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಪ್ಲೇಯಿಂಗ್ 11 LIVE SCORE

ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದಂತಹ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ.
ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದ್ರೆ ದುರಾದೃಷ್ಟವಶಾತ್ ತಂಡದ ಪ್ರಮುಖ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್-19 ಸೋಂಕು ತಗುಲಿದ್ದು, ಜಂಪಾ ಬದಲು ಆಷ್ಟನ್ ಅಗರ್ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ.
ಆಸ್ಟ್ರೇಲಿಯಾ ತಂಡದ ರೀತಿಯಲ್ಲಿ ಶ್ರೀಲಂಕಾ ತಂಡದಲ್ಲಿ ಓರ್ವ ಆಟಗಾರ ಬದಲಾಗಿದ್ದು, ಪತುಮ್ ನಿಸ್ಸಾಂಕ ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಗೆಲುವನ್ನ ಸಾಧಿಸಿದ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್ ಜೊತೆಗೆ ಲೈವ್ ಸ್ಕೋರ್ ಈ ಕೆಳಗೆ ಕಾಣಬಹುದು

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೋ, ಲಹಿರು ಕುಮಾರ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್
ಮರ್ಯಾದೆ ಉಳಿಸಿದ್ದಕ್ಕೆ ಅಶ್ವಿನ್‌ಗೆ ಧನ್ಯವಾದ ತಿಳಿಸಿದ ದಿನೇಶ್ ಕಾರ್ತಿಕ್: ಅಶ್ವಿನ್ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಆ್ಯಡಂ ಜಂಪಾಗೆ ಕೋವಿಡ್ ಸೋಂಕು
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿದ್ದ ಆ್ಯಡಂ ಜಂಪಾ ಕೋವಿಡ್-19 ಸಂಬಂಧಿತ ಕೆಲವು ಲಕ್ಷಣಗಳನ್ನು ಹೊಂದಿರುವ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವನ್ನ ಕಳೆದುಕೊಂಡಿದ್ದಾರೆ. ಸದ್ಯ ದೊಡ್ಡ ಮಟ್ಟಿನ ಲಕ್ಷಣಗಳು ಕಂಡು ಬರದಿದ್ದರೂ, ಜಂಪಾ ತಂಡದಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಿಸಿದ್ದಾರೆ. ಇವರ ಬದಲು ಎಡಗೈ ಬ್ಯಾಟರ್ ಮತ್ತು ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಷ್ಟನ್ ಅಗರ್ ಸ್ಥಾನ ಪಡೆದಿದ್ದಾರೆ.
ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಈತನೇ ಸೂಕ್ತ ಎಂದ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ

ಪಿಚ್ ರಿಪೋರ್ಟ್
ಪರ್ತ್‌ನ ಆಪ್ಟಸ್ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು ದೊಡ್ಡ ಮೊತ್ತದ ರನ್ ಹರಿದು ಬರುವ ಸಾಧ್ಯತೆಯಿದೆ. ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಕಂಡುಬರಲಿದ್ದು, ಪೇಸರ್ಸ್ ಬೌನ್ಸರ್ ಹಾಗೂ ಶಾರ್ಟ್ ಬಾಲ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನ ಕಾಡಬಹುದು. ಈ ಪಿಚ್‌ನಲ್ಲಿ ಸರಾಸರಿ ಮೊತ್ತ 162 ರನ್‌ನಷ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications