Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮರ್ಯಾದೆ ಉಳಿಸಿದ್ದಕ್ಕೆ ಅಶ್ವಿನ್‌ಗೆ ಧನ್ಯವಾದ ತಿಳಿಸಿದ ದಿನೇಶ್ ಕಾರ್ತಿಕ್: ಅಶ್ವಿನ್ ನೋಡಿ ಕಲಿಯಿರಿ ಎಂದ ಫ್ಯಾನ್ಸ್

Dinesh karthik and Ashwin

ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ರೋಚಕ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ. ಮೆಲ್ಬರ್ನ್‌ನಿಂದ ಸಿಡ್ನಿಗೆ ಬಂದಿಳಿದಿರುವ ಟೀಂ ಇಂಡಿಯಾ ಅಭಿಮಾನಿಗಳು ಮಂಗಳವಾರದಿಂದಲೇ (ಅ.25) ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಏರ್‌ಪೋರ್ಟ್‌ನಿಂದ ನೇರವಾಗಿ ಹೋಟೆಲ್‌ಗೆ ತೆರಳಿರುವ ಟೀಂ ಇಂಡಿಯಾ ಸ್ಕ್ವಾಡ್‌, ಸಿಡ್ನಿ ಗ್ರೌಂಡ್‌ನಲ್ಲಿ ಅಭ್ಯಾಸಕ್ಕಿಳಿದಿದೆ. ಈ ಕುರಿತಾಗಿ ಟೀಂ ಇಂಡಿಯಾ ಕ್ರಿಕೆಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ನನ್ನನ್ನು ಸೇವ್ ಮಾಡಿದ್ದಕ್ಕಾಗಿ ಧನ್ಯವಾದ ಎಂದ ದಿನೇಶ್ ಕಾರ್ತಿಕ್

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ಗಳು ಬೇಕಿತ್ತು. ಹಾರ್ದಿಕ್ ಮೊದಲ ಎಸೆತದಲ್ಲೇ ಔಟಾದಾಗ ಟೀಂ ಇಂಡಿಯಾ ಕಥೆ ಇಲ್ಲಿಗೆ ಮುಗೀತಾ? ಎಂಬೆಲ್ಲಾ ಪ್ರಶ್ನೆಗಳು ಎದುರಾಗಿದ್ದವು.

ಆದ್ರೆ ವಿರಾಟ್ 2 , 6, 3 ರನ್‌ ಕಲೆಹಾಕುವ ಮೂಲಕ ಭಾರತವನ್ನ ಗೆಲುವಿನ ದಡ ಸಮೀಪಿಸಿದ್ರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಔಟಾದ ಬಳಿಕ ಅಶ್ವಿನ್‌ ಸಿಂಗಲ್ಸ್‌ ತೆಗೆದುಕೊಂಡು ಭಾರತವನ್ನ ಗೆಲ್ಲಿಸಿದ್ರು. ಆದ್ರೆ ಇಲ್ಲಿ ಕೊಹ್ಲಿಯ 82ರನ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಆದ್ರೆ ಕೊನೆಯ ಎಸೆತದಲ್ಲಿ ಅಶ್ವಿನ್ ಸಿಂಗಲ್ಸ್ ತೆಗೆಯದಿದ್ರೆ, ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಿದ್ದು ಫಿನಿಷರ್ ಆಗಿ ಕಾಣಿಸಿಕೊಂಡಿರು ದಿನೇಶ್ ಕಾರ್ತಿಕ್.

2 ಎಸೆತಗಳನ್ನ ಎದುರಿಸಿದ್ದ ದಿನೇಶ್‌ ಕಾರ್ತಿಕ್ 1 ರನ್‌ಗಳಿಸಿ ಸ್ಟಂಪ್ ಔಟ್‌ ಆದ್ರು. ನಂತರದಲ್ಲಿ ಅಶ್ವಿನ್ ತಾಳ್ಮೆಯಿಂದ ವೈಡ್ ಬಾಲ್ ಬಿಟ್ಟು, ನಂತರದ ಎಸೆತದಲ್ಲಿ ಸಿಂಗಲ್ಸ್‌ ಕಲೆಹಾಕಿ ಪಂದ್ಯ ಗೆಲ್ಲಿಸಿದ್ರು. ಹೀಗಾಗಿಯೇ ದಿನೇಶ್ ಕಾರ್ತಿಕ್‌ ನಿನ್ನೆ ನನ್ನನ್ನು ಕಾಪಾಡಿದಕ್ಕಾಗಿ ಧನ್ಯವಾದಗಳು ಎಂದು ಅಶ್ವಿನ್‌ಗೆ ತಿಳಿಸಿದ್ದಾರೆ. ಈ ಮಾತು ಕೇಳಿ ಅಶ್ವಿನ್ ನಕ್ಕು ಸುಮ್ಮನಾದ್ರು.

ಅಶ್ವಿನ್ ನೋಡಿ ಕಲೀರಿ ಎಂದು ದಿನೇಶ್ ಕಾರ್ತಿಕ್‌ಗೆ ನೆಟ್ಟಿಗರ ಪಾಠ

ಇನ್ನು ಅಶ್ವಿನ್‌ಗೆ DK ಧನ್ಯವಾದ ತಿಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಅಶ್ವಿನ್ ನೋಡಿ ಹೇಗೆ ಸ್ಮಾಟ್ ಆಗಿ ಕ್ರಿಕೆಟ್ ಆಡಬೇಕು ಎಂಬುದನ್ನ ದಿನೇಶ್ ಕಾರ್ತಿಕ್‌ ಕಲಿಯಲಿ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಜೊತೆಗೆ #Stupid ಎಂಬ ಹ್ಯಾಶ್‌ಟ್ಯಾಗ್ ಕೂಡ ಸೇರಿಸಿ ದಿನೇಶ್ ಕಾರ್ತಿಕ್‌ಗೆ ಪಾಠ ಹೇಳಿದ್ದಾರೆ.

India Vs Netherlands: ಪಾಕ್ ವಿರುದ್ಧದ ಜಯದ ನಂತರ ಮತ್ತೊಂದು ಗೆಲುವಿಗೆ ಟೀಂ ಇಂಡಿಯಾ ಸಿದ್ಧತೆ

ಫಿನಿಷರ್ ನಮ್ಮ ಇಂಡಿಯಾವನ್ನೇ ಫಿನಿಷರ್ ಮಾಡಿ ಬಿಡುತ್ತಿದ್ರು!

ದಿನೇಶ್ ಕಾರ್ತಿಕ್‌ ಹೇಳಿಕೆಯು ಮತ್ತಷ್ಟು ಟ್ರೋಲ್‌ಗೆ ಕಾರಣವಾಗಿದ್ದು, ಸತ್ಯವಾಗಿಯು ಅಶ್ವಿನ್ ದಿನೇಶ್ ಕಾರ್ತಿಕ್‌ರನ್ನ ಸೇವ್ ಮಾಡಿದ್ದಾರೆ. ಇಲ್ಲದಿದ್ರೆ ಫಿನಿಷರ್ ಖ್ಯಾತಿಯ ದಿನೇಶ್ ಕಾರ್ತಿಕ್‌ ಭಾರತದ ಆಟವನ್ನೇ ಫಿನಿಷ್ ಮಾಡಿಬಿಡುತ್ತಿದ್ರು ಎಂದು ಕಾರ್ತಿಕ್ ಕಾಲೆಳೆದಿದ್ದಾರೆ.

ಇನ್ನು ಅಶ್ವಿನ್ ತಾಳ್ಮೆ ಹಾಗೂ ಸಮಯೋಚಿತ ಆಟಕ್ಕೆ ಮೆಚ್ಚಿ ಅಭಿಮಾನಿಗಳು ಟ್ವೀಟ್ ಮಾಡಿದ್ದು, ಅಶ್ವಿನ್‌ ಸೂಪರ್ ಕೂಲ್ ಎಂದೆಲ್ಲಾ ಹೊಗಳಿ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ ಕೂಡ ಅಶ್ವಿನ್‌ನ ಸ್ಮಾರ್ಟ್‌ ಆಟವನ್ನ್ ಹೊಗಳಿ ಟ್ವೀಟ್ ಮಾಡಿದ್ದರು.

Story first published: Tuesday, October 25, 2022, 14:40 [IST]
Other articles published on Oct 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+