Aus vs SL: ಪಂದ್ಯದ ಪ್ರಿವ್ಯೂ, ಡ್ರೀಂ 11 ಟೀಂ, ಪ್ಲೇಯಿಂಗ್ 11 ಜೊತೆಗೆ ಪಿಚ್ ರಿಪೋರ್ಟ್

ಐಸಿಸಿ ಟಿ20 ವಿಶ್ವಕಪ್ 2022ರ ಆತಿಥೇಯ ರಾಷ್ಟ್ರ ಆಸ್ಟ್ರೇಲಿಯಾ ಅಕ್ಟೋಬರ್ 25ರಂದು (ಮಂಗಳವಾರ) ನಡೆಯಲಿರುವ ಸೂಪರ್ 12 ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿರುವ ಹಾಲಿ ಚಾಂಪಿಯನ್ ಕಾಂಗರೂಗಳು ಗೆಲುವಿನ ಟ್ರ್ಯಾಕ್‌ಗೆ ಮರಳಲು ಶತ ಪ್ರಯತ್ನ ನಡೆಸಲಿದ್ದಾರೆ.
ಮತ್ತೊಂದೆಡೆ ಐರ್ಲೆಂಡ್ ವಿರುದ್ಧ ಪಂದ್ಯವನ್ನ ಗೆದ್ದು ಈಗಾಗಲೇ ಪಾಯಿಂಟ್ಸ್ ಟೇಬಲ್‌ನಲ್ಲಿ 2 ಅಂಕ ಸಂಪಾದಿಸಿರುವ ಶ್ರೀಲಂಕಾ ತಂಡವು ಗೆಲುವಿನ ಓಟವನ್ನ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಆದ್ರೆ ಕಾಂಗರೂ ನಾಡಿನಲ್ಲಿ ಅವರನ್ನೇ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಅರಿವು ಲಂಕಾಗಿದೆ.
ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಪಂದ್ಯದಲ್ಲಿ 89ರನ್‌ಗಳ ಹೀನಾಯ ಸೋಲನ್ನ ಅನುಭವಿಸಿರುವ ಆ್ಯರೋನ್ ಫಿಂಚ್, ಲಂಕಾ ವಿರುದ್ಧ ಆಡಲು ಉತ್ತಮ ಯೋಜನೆಗಳೊಂದಿಗೆ ಕಣಕ್ಕಿಳಿಯಲಿದೆ. ಮತ್ತೊಂದೆಡೆ ಐರ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಗೆಲುವನ್ನ ಸಾಧಿಸಿದ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.

ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್
ಪರ್ತ್‌ನ ಪರ್ತ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಆಸಿಸ್ ಹಾಗೂ ಲಂಕಾ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಪ್ರಾರಂಭಗೊಳ್ಳಲಿದೆ. ಪರ್ತ್‌ನ ಆಪ್ಟಸ್ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು ದೊಡ್ಡ ಮೊತ್ತದ ರನ್ ಹರಿದು ಬರುವ ಸಾಧ್ಯತೆಯಿದೆ. ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಕಂಡುಬರಲಿದ್ದು, ಪೇಸರ್ಸ್ ಬೌನ್ಸರ್ ಹಾಗೂ ಶಾರ್ಟ್ ಬಾಲ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನ ಕಾಡಬಹುದು. ಈ ಪಿಚ್‌ನಲ್ಲಿ ಸರಾಸರಿ ಮೊತ್ತ 162 ರನ್‌ನಷ್ಟಿದೆ.
ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ / ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ
ಶ್ರೀಲಂಕಾ: ಅಶೆನ್ ಬಂಡಾರ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, 6. ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನ, ಬಿನೂರ ಫೆರ್ನಾಂಡೋ, ಮಹೇಶ್ ತೀಕ್ಷಣ, ಲಹಿರು ಕುಮಾರ
ಭಾರತ-ಪಾಕಿಸ್ತಾನ ರೋಚಕ ಪಂದ್ಯ ಮರುಪ್ರಸಾರ ಮಾಡಲಿರುವ ಸ್ಟಾರ್ ಸ್ಟೋರ್ಟ್ಸ್:ವರದಿ

ಡ್ರೀಂ ಇಲೆವೆನ್ ಟೀಂ
ವಿಕೆಟ್ ಕೀಪರ್: ಕುಸಾಲ್ ಮೆಂಡಿಸ್ (ನಾಯಕ)
ಬ್ಯಾಟರ್ಸ್: ಡೇವಿಡ್ ವಾರ್ನರ್, ಆರನ್ ಫಿಂಚ್, ಭಾನುಕಾ ರಾಜಪಕ್ಸೆ
ಆಲ್ ರೌಂಡರ್: ಮಾರ್ಕಸ್ ಸ್ಟೊಯಿನಿಸ್, ದಸುನ್ ಶನಕ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ (ಉಪ ನಾಯಕ)
ಬೌಲರ್‌ಗಳು: ಜೋಶ್ ಹೇಜಲ್‌ವುಡ್, ಮಹೇಶ್ ತೀಕ್ಷಣ, ಮಿಚೆಲ್ ಸ್ಟಾರ್ಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications