
ಇಂಗ್ಲೆಂಡ್ ತಂಡಕ್ಕೆ ಆಧಾರವಾದ ಟಾಪ್ ಆರ್ಡರ್
142ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಟಾಪ್ ಆರ್ಡರ್ ಬ್ಯಾಟರ್‌ಗಳು ನೆರವಾದರು. ಪವರ್‌ಪ್ಲೇ ಓವರ್‌ಗಳಲ್ಲಿ ಸ್ಫೋಟಕ ಆರಂಭ ನೀಡಿದ ಅಲೆಕ್ಸ್ ಹೇಲ್ಸ್ ಮತ್ತು ಜಾಸ್ ಬಟ್ಲರ್ ಲಂಕಾ ಬೌಲರ್‌ಗಳನ್ನ ಕಾಡಿದ್ರು. ಜಾಸ್ ಬಟ್ಲರ್ 28 ರನ್ ಕಲೆಹಾಕಿ ಹಸರಂಗಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಇಂಗ್ಲೆಂಡ್ 7.2 ಓವರ್‌ನಲ್ಲಿ 75ರನ್ ಕಲೆಹಾಕಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.
ಬಟ್ಲರ್ ಔಟಾದ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ಅಲೆಕ್ಸ್ ಹೇಲ್ಸ್ 30 ಎಸೆತಗಳಲ್ಲಿ 47ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡ ಆಂಗ್ಲರು ಗೆಲುವನ್ನ ಪಡೆಯಲು ಕೊನೆಯ ಓವರ್‌ಗಳವರೆಗೆ ಕಾಯಬೇಕಾಯಿತು.
ಹ್ಯಾರಿ ಬ್ರೂಕ್ 4, ಲಿವಿಂಗ್‌ಸ್ಟೋನ್ 4, ಮೋಯಿನ್ ಅಲಿ 1, ಸ್ಯಾಮ್ ಕರನ್ 6 ರನ್‌ಗಳಿಸಿ ಔಟಾದರು. ಆದ್ರೆ ಸೂಪರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಜೇಯ 42 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ವೋಕ್ಸ್ 6ರನ್‌ಗಳಿಸಿದರು.

ಉತ್ತಮ ಆರಂಭ ಪಡೆದು ಕಡಿಮೆ ಮೊತ್ತಕ್ಕೆ ಕುಸಿದ ಶ್ರೀಲಂಕಾ
ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಶ್ರೀಲಂಕಾ ಉತ್ತಮ ಆರಂಭ ಪಡೆದರೂ ಕಡಿಮೆ ಮೊತ್ತಕ್ಕೆ ಕುಸಿತಗೊಂಡಿತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141ರನ್ ಕಲೆಹಾಕಿದ್ದು, ಇಂಗ್ಲೆಂಡ್‌ಗೆ 142ರನ್ ಟಾರ್ಗೆಟ್ ನೀಡಿತು.
ಲಂಕಾ ಪರ ಭರ್ಜರಿ ಆರಂಭ ನೀಡಿದ ಪಾಥುಮ್ ನಿಸ್ಸಾಂಕ ಬೃಹತ್ ಮೊತ್ತ ಕಲೆಹಾಕುವ ಭರವಸೆ ಮೂಡಿಸಿದ್ರು. ಇಂಗ್ಲೆಂಡ್ ಬೌಲರ್‌ಗಳನ್ನ ದಂಡಿಸಿದ ನಿಸ್ಸಾಂಕ ಇನ್ನಿಂಗ್ಸ್‌ನಿಂದಾಗಿ ಶ್ರೀಲಂಕಾ ಪವರ್ ಪ್ಲೇ ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿದ್ದು, ಮೇಲುಗೈ ಸಾಧಿಸಿತು. ಆದ್ರೆ ಪವರ್ ಪ್ಲೇ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು. ಆದ್ರೆ 45 ಎಸೆತಗಳಲ್ಲಿ 67 ರನ್ ಕಲೆಹಾಕಿದ ಪಥುಮ್ ನಿಸ್ಸಾಂಕ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಒಳಗೊಂಡಿದ್ದವು. ನಿಸ್ಸಾಂಕ ಉತ್ತಮ ಆಟವಾಡಿ ಔಟಾಗುವ ಮುನ್ನ, ಔಟಾದ ಬಳಿಕವೂ ಯಾವೊಬ್ಬ ಬ್ಯಾಟರ್ ಕೂಡ ಲಂಕಾಗೆ ಆಧಾರವಾಗಲಿಲ್ಲ.
ಕುಸಾಲ್ ಮೆಂಡೀಸ್ 18, ಧನಂಜಯ ಡಿ ಸಿಲ್ವಾ 9, ಚರಿತಾ ಅಸಲಂಕಾ 8, ಭಾನುಕಾ ರಾಜಪಕ್ಷೆ 22, ದಸುನ್ ಶನಕ 3, ವಹಿಂದು ಹಸರಂಗ 9ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯ 5 ಓವರ್‌ಗಳಲ್ಲಿ ಕೇವಲ 25ರನ್ ಕಲೆಹಾಕಿದ ಶ್ರೀಲಂಕಾಗೆ 150ರ ಗಡಿ ಮುಟ್ಟಲು ಸಹ ಸಾಧ್ಯವಾಗಲಿಲ್ಲ. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಇಂಗ್ಲೆಂಡ್ ಪರ ಮಾರ್ಕ್ ವುಡ್ ಅದ್ಭುತ ಕಂಬ್ಯಾಕ್ ಮಾಡಿ 3 ಓವರ್‌ಗಳಲ್ಲಿ 26ರನ್ ನೀಡಿ 3 ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಯಾಮ್ ಕರನ್ ತಲಾ 1 ವಿಕೆಟ್ ಪಡೆದರು.
IPL 2023: ಆಟಗಾರರ ಹರಾಜಿಗೂ ಮುನ್ನ RCB ಕೈ ಬಿಡಲಿರುವ 3 ಆಟಗಾರರು!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್ ಪ್ಲೇಯಿಂಗ್ 11
ಜೋಸ್ ಬಟ್ಲರ್(ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಸ್ಯಾಮ್ ಕುರಾನ್, ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್
ಶ್ರೀಲಂಕಾ ಪ್ಲೇಯಿಂಗ್ 11
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ
ಬೆಂಚ್: ಅಸಿತ ಫೆರ್ನಾಂಡೋ, ಅಶೆನ್ ಬಂಡಾರ, ಜೆಫ್ರಿ ವಾಂಡರ್ಸೆ, ಪ್ರಮೋದ್ ಮದುಶನ್


Click it and Unblock the Notifications












