ಆತ ಚೆಂಡಿನ 2 ಕಡೆಗೂ ಸ್ವಿಂಗ್ ಮಾಡಬಲ್ಲ: ಅರ್ಷ್‌ದೀಪ್ ಕುರಿತು ವಾಸಿಂ ಅಕ್ರಂ ಮೆಚ್ಚುಗೆಯ ಮಾತು

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಡೆತ್ ಓವರ್ ಹಾಗೂ ಪವರ್‌ಪ್ಲೇ ಓವರ್ ಬೌಲರ್ ಅರ್ಷ್‌ದೀಪ್ ಸಿಂಗ್ ಕುರಿತು ಪಾಕಿಸ್ತಾನದ ದಿಗ್ಗಜ ಬೌಲರ್ ಸ್ವಿಂಗ್ ಕಿಂಗ್ ವಾಸಿಂ ಅಕ್ರಮ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
23 ವರ್ಷದ ಅರ್ಷ್‌ದೀಪ್ ಸಿಂಗ್ ಆಡಿರುವ 4 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದು, 14.67 ಸರಾಸರಿ ಮತ್ತು 8.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಅದ್ರಲ್ಲೂ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿಕೆಟ್ ಪಡೆಯುವ ಮೂಲಕ ಅದ್ಭುತ ಆರಂಭ ಪಡೆದಿದ್ದರು.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಅತ್ಯಂತ ಒತ್ತಡದ ಪಂದ್ಯದಲ್ಲೂ ಅರ್ಷ್‌ದೀಪ್ ಬೊಂಬಾಟ್ ಬೌಲಿಂಗ್ ಮಾಡಿದ್ದಲ್ಲದೆ, ಅಂತಿಮ ಓವರ್‌ನಲ್ಲಿ 20 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡಿದ್ದರು. ಅಡಿಲೇಡ್ ಓವಲ್‌ನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಭಾರತ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 5 ರನ್‌ಗಳಿಂದ ಪಂದ್ಯ ಗೆದ್ದಿತು.

ಅರ್ಷ್‌ದೀಪ್‌ಗೆ ಉಜ್ವಲ ಭವಿಷ್ಯವಿದೆ: ವಾಸಿಂ ಅಕ್ರಂ
''ಏಷ್ಯಾ ಕಪ್‌ನಲ್ಲಿ ನಾನು ಮತ್ತು ವಕಾರ್ ಯುನಿಸ್ ಅವರು ಅರ್ಷದೀಪ್ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿದ್ದೇವೆ. ಈ ಟೂರ್ನಿಯಲ್ಲಿ ಅರ್ಷದೀಪ್ ಒಟ್ಟು 9 ವಿಕೆಟ್ ಪಡೆದಿದ್ದು, ಸೂಪರ್ 12 ಹಂತದಲ್ಲಿ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಹೊಸ ಚೆಂಡಿನೊಂದಿಗೆ ಅವರು ಎರಡೂ ಕಡೆಯಲ್ಲಿ ಸ್ವಿಂಗ್ ಮಾಡಬಹುದು. ಐಪಿಎಲ್ 2022ರ ಸೀಸನ್ ನಲ್ಲೂ ಅವರು ಅಮೋಘ ಆಟವಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಯುವ ಬೌಲರ್‌ಗೆ ಉಜ್ವಲ ಭವಿಷ್ಯವಿದೆ. ಅವನು ಬಹಳ ಬುದ್ಧಿವಂತ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರ ಯಾರ್ಕರ್‌ಗಳು ಆಟದ ಅಲೆಯನ್ನು ತಿರುಗಿಸಿದವು'' ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆದರೂ ಆತ ತಲೆಕೆಡಿಸಿಕೊಳ್ಳಲಿಲ್ಲ!
''ಅರ್ಷ್‌ದೀಪ್ ಸಿಂಗ್ ಏಷ್ಯಾಕಪ್‌ನಲ್ಲಿ ಒಂದು ಕ್ಯಾಚ್ ಬಿಟ್ಟಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಆದರೆ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಇದು ಆಟಗಾರನಿಗೆ ಇರಬೇಕಾದ ಲಕ್ಷಣವಾಗಿದೆ'' ಎಂದು ವಾಸಿಂ ಹೇಳಿದರು.
ಬುಮ್ರಾ ಅವರ ಕೊರತೆಯನ್ನು ಬದಲಿಸಿ ತಂಡವನ್ನು ಪ್ರವೇಶಿಸಿದ ಈ ವೇಗದ ಬೌಲರ್ ವಿಶ್ವ ತಂಡದಲ್ಲಿ ಪ್ರಮುಖ ಆಟಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಕಠಿಣ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಆರಂಭಿಕ ಅಭ್ಯಾಸ ಮತ್ತು ಸಿದ್ಧತೆಯಿಂದಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇನೆ ಎಂದು ಅರ್ಷ್‌ದೀಪ್ ಹೇಳಿದರು.
ಶಾಹಿನ್ ಅಫ್ರಿದಿ ಕಂಬ್ಯಾಕ್ ಮಾಡಲು ಶಾಹಿದ್ ಅಫ್ರಿದಿ ಟಿಪ್ಸ್ ಹೇಗೆ ನೆರವಾಯ್ತು?

ಅರ್ಷ್‌ದೀಪ್ ಬೌಲಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶೋಯೆಬ್ ಮಲಿಕ್
ಇನ್ನು ವಾಸಿಂ ಅಕ್ರಂ ಜೊತೆಗೆ ಕ್ರೀಡಾ ಚಾನೆಲ್‌ವೊಂದರ ಚರ್ಚೆಯಲ್ಲಿ ಭಾಗಿಯಾಗಿದ್ದ ಶೋಯೆಬ್ ಮಲಿಕ್ ಕೂಡ ಯುವ ಬೌಲರ್ ಕುರಿತು ಸಾಕಷ್ಟು ಮೆಚ್ಚಿ ಮಾತನಾಡಿದ್ದಾರೆ.
''ಏಷ್ಯಾಕಪ್‌ನಲ್ಲಿ ಆತ ಪ್ರಮುಖ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು ಹಾಗೂ ಜೊತೆಗೆ ಕ್ಯಾಚ್ ಕೂಡ ಕೈ ಚೆಲ್ಲಿದರು. ಆದ್ರೆ ಆತ ತನ್ನ ಆತ್ಮವಿಶ್ವಾಸವನ್ನು ಎಲ್ಲಿಯೂ ಕಳೆದುಕೊಂಡಿಲ್ಲ. ಯಾವುದೋ ಒಂದು ದಿನ ಪ್ರದರ್ಶನ ತಗ್ಗಿರಬಹುದು. ಆದ್ರೆ ವಿಶ್ವಕಪ್‌ನಂತಹ ವೇದಿಕೆಗೆ ಬಂದಾಗ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ'' ಎಂದು ಶೋಯೆಬ್ ಮಲ್ಲಿಕ್ ಅರ್ಷ್‌ದೀಪ್ ಕುರಿತು ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications