ಕೊಹ್ಲಿ ನಿವೃತ್ತಿ ಆಗೋವರೆಗೂ ಪಾಕಿಸ್ತಾನ ಗೆಲ್ಲಲ್ಲ ಎಂಬುದು ಆತನಿಗೆ ಗೊತ್ತಿದೆ: ಅಖ್ತರ್ ವಿರುದ್ಧ ನೆಟ್ಟಿಗರು ಟ್ರೋಲ್

ಇಡೀ ಕ್ರಿಕೆಟ್ ಜಗತ್ತು ಪ್ರಸ್ತುತ ಓರ್ವ ಆಟಗಾರನ ಕುರಿತಾಗಿಯೇ ಮಾತನಾಡುತ್ತಿದೆ. ಆತ ಬೇರೆ ಯಾರು ಅಲ್ಲ, ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ. ಪಾಕಿಸ್ತಾನ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಇನ್ನಿಂಗ್ಸ್‌ಗೆ ಮನಸೋಲದವರೇ ಉಳಿದಿಲ್ಲ. ಪಾಕಿಸ್ತಾನ ತಂಡದಿಂದ ಗೆಲುವನ್ನ ಕಸಿದುಕೊಂಡ ವಿರಾಟ್ ಕೊಹ್ಲಿ ಅಬ್ಬರದ ಆಟವಾಡಿ ಭಾರತಕ್ಕೆ ಗೆಲುವು ತಂದಿಟ್ಟರು.
53 ಎಸೆತಗಳಲ್ಲಿ ಅಜೇಯ 83ರನ್ ಕಲೆಹಾಕಿದ ಕೊಹ್ಲಿ ಇನ್ನಿಂಗ್ಸ್ ನೋಡಿ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಸೋಲು ಬಹುತೇಕ ಕಟ್ಟಿಟ್ಟ ಬುತ್ತಿ ಎಂಬತ್ತಿದ್ದ ಪಂದ್ಯವನ್ನ ಟೀಂ ಇಂಡಿಯಾಗೆ ಕಡೆಗೆ ತಿರುಗಿಸಿ ತನ್ನ ತಾಕತ್ತು ಪ್ರದರ್ಶಿಸಿದ್ದಾರೆ.
ಹೀಗೆ ಕೊಹ್ಲಿ ಇನ್ನಿಂಗ್ಸ್ ಕುರಿತು ಇನ್ನೂ ಮಾತನಾಡುತ್ತಿರುವ ವೇಳೆಯಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.

ಕೊಹ್ಲಿ ಏಕೆ ನಿವೃತ್ತಿಗೊಳ್ಳಬೇಕು ಎಂದು ಹೇಳಿದ ಶೋಯೆಬ್ ಅಖ್ತರ್
ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಅಮೋಘ ಗೆಲುವು ತಂದುಕೊಟ್ಟರು. ಆದ್ರೆ ವಿರಾಟ್ ಕೊಹ್ಲಿ ಇಷ್ಟೇ ಶಕ್ತಿಯನ್ನು ಬಳಸಿದರೆ ಏಕದಿನ ಕ್ರಿಕೆಟ್‌ನಲ್ಲಿ 3 ಶತಕ ಸಿಡಿಸಬಹುದು. ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಆಡುವುದು ಉತ್ತಮ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ರೆ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಅಖ್ತರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಕೊಹ್ಲಿ ನಿವೃತ್ತಿ ಆಗದಿದ್ರೆ ಪಾಕಿಸ್ತಾನ ಗೆಲ್ಲಲ್ಲ ಎಂಬ ಭಯವೇ!
ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಆಡುವವರೆಗೂ ಪಾಕಿಸ್ತಾನ ತಂಡವು ಭಾರತದ ಮೇಲೆ ಗೆಲ್ಲಲು ಸಾಧ್ಯವಿಲ್ಲವೇ ಎಂಬ ಭಯವಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಹೇಳಿಕೆಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕಂಡ್ರೆ ಪಾಕಿಸ್ತಾನಿಗರಿಗೆ ಭಯವಿದೆ, ಹೀಗಾಗಿಯೇ ನಿವೃತ್ತಿ ಘೋಷಿಸಲಿ ಎಂದು ಅಖ್ತರ್ ಹೇಳಿದ್ದಾರೆ ಎಂದು ಟ್ರೋಲ್ ಮಾಡಲಾಗಿದೆ.
ಟರ್ಕಿಯಲ್ಲಿ IPL 2023 ಆಟಗಾರರ ಹರಾಜು ಪ್ರಕ್ರಿಯೆ? ಬಹಿಷ್ಕಾರ ಹಾಕುತ್ತೇವೆ ಎಂದು ಅಭಿಮಾನಿಗಳ ಎಚ್ಚರಿಕೆ
ಭಯ ಪಡಬೇಡ ಅಖ್ತರ್, ಕೊಹ್ಲಿ ಸಾಕಷ್ಟು ಶಕ್ತಿಶಾಲಿ ಎಂದ ಅಭಿಮಾನಿ
ಇನ್ನು ಅಖ್ತರ್ ಹೇಳಿಕೆಗೆ ಉತ್ತರಿಸಿರುವ ಟೀಂ ಇಂಡಿಯಾ ಅಭಿಮಾನಿಯೊಬ್ಬರು ಭಯಪಡಬೇಡಿ ಅಖ್ತರ್, ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶಕ್ತಿಶಾಲಿ ಆಟಗಾರನಾಗಿದ್ದಾರೆ. ಸಾಕಷ್ಟು ಎನರ್ಜಿ ಅವರ ಬಳಿಯಲ್ಲಿ ಇದೆ. ವರ್ಕ್‌ಲೋಡ್ ನಿಭಾಯಿಸಲು ಈಗಾಗಲೇ ಆತ ನಾಯಕತ್ವವನ್ನ ತ್ಯಜಿಸಿದ್ದಾನೆ. ಮುಂದಿನ ದಿನಗಳಲ್ಲಿ ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ರನ್ ಬಾರಿಸಲಿದ್ದಾನೆ ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾನೆ.
ವಿರಾಟ್ ಕೊಹ್ಲಿ ಆಟವನ್ನು ಮೆಚ್ಚಿ ವಿಚಿತ್ರ ಸಲಹೆ ನೀಡಿದ ಮಾಜಿ ಪಾಕ್ ಆಟಗಾರ
ವಿರಾಟ್ ಕೊಹ್ಲಿ ರೆಕಾರ್ಡ್‌ಗಾಗಿ ಆಡುತ್ತಿಲ್ಲ, ದೇಶಕ್ಕಾಗಿ ಆಡುತ್ತಿದ್ದಾರೆ!
ವಿರಾಟ್ ಕೊಹ್ಲಿ ಟಿ20ಯಲ್ಲಿ ಇಷ್ಟು ಎನರ್ಜಿ ಬಳಸುವ ಬದಲು ಏಕದಿನ ಕ್ರಿಕೆಟ್‌ನಲ್ಲಿ 3 ಶತಕ ಸಿಡಿಸಬಹುದು ಎಂಬ ಶೋಯೆಬ್ ಅಖ್ತರ್ ಹೇಳಿಕೆಗೆ ಅಭಿಮಾನಿಯೊಬ್ಬರು ಸರಿಯಾಗಿನೇ ಉತ್ತರ ನೀಡಿದ್ದಾರೆ. ವಿರಾಟ್ ಕೊಹ್ಲಿ ರೆಕಾರ್ಡ್‌ಗೋಸ್ಕರ ಆಡುತ್ತಿಲ್ಲ, ಆತ ಭಾರತದ ಗೆಲುವಿವಾಗಿ ಆಡುತ್ತಿದ್ದಾನೆ ಎಂದು ಟಾಂಗ್ ನೀಡಿದ್ದಾರೆ.
ಒಟ್ನಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಹವಾ ಜೋರಾಗಿಯೇ ಮುಂದುವರಿದಿದೆ. ಮಲಗಿದ್ದ ಸಿಂಹ ಮತ್ತೆ ಘರ್ಜಿಸಲು ಶುರು ಮಾಡಿದೆ. ವಿರಾಟ್ ನಡೆದಿದ್ದೇ ದಾರಿ ಎಂಬಂತೆ ತನ್ನ ಪ್ರದರ್ಶನವನ್ನ ಶುರು ಮಾಡಿದ್ದು ,ವಿರಾಟ್ ಕೊಹ್ಲಿ ಇಡೀ ವಿಶ್ವಕಪ್‌ನಲ್ಲಿ ಅಂತಹದ್ದೇ ಪ್ರದರ್ಶನವನ್ನ ಮುಂದುವರಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications