ಟಿ20 ವಿಶ್ವಕಪ್: ಟೆಂಬಾ ಬವುಮಾ 50 ಹೊಡೆದ್ರೆ ನನ್ನ ಅಕೌಂಟ್ ಡಿಲೀಟ್ ಮಾಡುವೆ! ಸತತ ಕಳಪೆ ಆಟಕ್ಕೆ ಫ್ಯಾನ್ಸ್ ಆಕ್ರೋಶ

ಟಿ20 ಫಾರ್ಮೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಕಳಪೆ ಫಾರ್ಮ್ ಮುಂದುವರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಟೆಂಬಾ ಕೇವಲ 2ರನ್‌ಗೆ ಔಟಾದರು.
ಟಿ20 ಫಾರ್ಮೆಟ್‌ನಲ್ಲಿ ಇದುವರೆಗೂ ಅತ್ಯಂತ ಆಕರ್ಷಕ ಎನ್ನುವ ಮಟ್ಟಿಗೆ ಪ್ರದರ್ಶನ ನೀಡದ ಟೆಂಬಾ ಬವುಮಾ ಚುಟುಕು ಕ್ರಿಕೆಟ್‌ನಲ್ಲಿ ಕಳಪೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಸಿಡ್ನಿಯಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬವುಮಾ 6 ಎಸೆತಗಳಲ್ಲಿ 2ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಟಸ್ಕಿನ್ ಅಹ್ಮದ್ ಬೌಲಿಂಗ್‌ನಲ್ಲಿ ನುರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಟೆಂಬಾ ಮತ್ತೊಮ್ಮೆ ಕೆಟ್ಟದಾಗಿ ಔಟಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಏಕೈಕ ಅರ್ಧಶತಕ ದಾಖಲಿಸಿರುವ ಈತ ದಕ್ಷಿಣ ಆಫ್ರಿಕಾ ತಂಡದ ನಾಯಕ ಹೇಗೆ ಆದ್ರೂ ಎಂದೆಲ್ಲಾ ನೆಟ್ಟಿಗರು ಕಿಡಿಕಾರಿದ್ದಾರೆ.
ದಕ್ಷಿಣ ಆಫ್ರಿಕಾದ ಪರ ಖೋಟಾದ ನಾಯಕ ಈತ ಎಂದೆಲ್ಲಾ ಟೀಕೆ ಮಾಡಿರುವ ನೆಟ್ಟಿಗರು, ಚುಟುಕು ಫಾರ್ಮೆಟ್‌ನಲ್ಲಿ ಟೆಂಬಾ ಇನ್ನಿಂಗ್ಸ್ ಕುರಿತು ಕಿಡಿಕಾರಿದ್ರು.
35 ಎಸೆತಗಳೊಳಗೆ ಟೆಂಬಾ ಅರ್ಧಶತಕ ಸಿಡಿಸಿದ್ರೆ ನನ್ನ ಅಕೌಂಟ್ ಡಿಲೀಟ್ ಮಾಡುವೆ!
ಟೆಂಬಾ ಬವುಮಾ ಟಿ20 ಕ್ರಿಕೆಟ್‌ನಲ್ಲಿ ಮಿಂಚಿನ ಆಟವಾಡುವ ಆಟಗಾರನಲ್ಲದಿದ್ರೂ, ದ.ಆಫ್ರಿಕಾ ತಂಡದ ಪರ ಓಪನರ್ ಆಗಿ ಕಣಕ್ಕಿಳಿಯುವುದು ಆಶ್ಚರ್ಯಕ್ಕೆ ಕಾರಣವಾಗಿದೆ. 115.42 ರ ಸ್ಟ್ರೈಕ್‌ರೇಟ್ ಹೊಂದಿರುವ ಬವುಮಾ ಇದುವರೆಗೂ 30 ಪಂದ್ಯಗಳಲ್ಲಿ 569ರನ್ ಕಲೆಹಾಕಿದ್ದು, ಕೇವಲ 1 ಅರ್ಧಶತಕ ದಾಖಲಿಸಿದ್ದಾರೆ.
ಟೆಂಬಾ ಬವುಮಾ 35 ಎಸೆತ ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನ ದಾಖಲಿಸಿದ್ರೆ ನನ್ನ ಟ್ವಿಟ್ಟರ್ ಅಕೌಂಟ್ ಡಿಲೀಟ್ ಮಾಡುವೆ ಎಂದು ಅಭಿಮಾನಿಯೊಬ್ಬರು ಟೆಂಬಾಗೆ ಸವಾಲೊಡ್ಡಿದ್ದಾರೆ.
ಟಿ20 ವಿಶ್ವಕಪ್: ಯುವರಾಜ್ ಸಿಂಗ್ ದಾಖಲೆ ಮುರಿದ ರೋಹಿತ್ ಶರ್ಮಾ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್
ಕಳೆದ 7 ಇನ್ನಿಂಗ್ಸ್‌ನಲ್ಲಿ ಟೆಂಬಾ ಎರಡಂಕಿಯನ್ನೇ ಮುಟ್ಟಿಲ್ಲ!
ಟೆಂಬಾ ಬವುಮಾ ಎಷ್ಟರ ಮಟ್ಟಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಕಳೆದ ಏಳು ಇನ್ನಿಂಗ್ಸ್ ನೋಡಬಹುದಾಗಿದೆ. ಟೆಂಬಾ ಕಳೆದ ಏಳು ಇನ್ನಿಂಗ್ಸ್‌ನಲ್ಲಿ 8(10), 8(11), 0(4), 0(7), 3(8), 2(2), 2(6), ರನ್ ಗಳಿಸಿದ್ದು ಅವರ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ.
ಟೆಂಬಾ ಬವುಮಾ 51 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ದಾಖಲಿಸಿದ್ರೆ, 30 ಟಿ20 ಪಂದ್ಯಗಳಲ್ಲಿ ಕೇವಲ 1 ಅರ್ಧಶತಕ ಗಳಿಸಿದ್ರು ಸಹ ಈತ ಟಿ20 ಕ್ಯಾಪ್ಟನ್ ಆಗಿ ಹೇಗೆ ಉಳಿದಿದ್ದಾನೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಇನ್ನು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವ ನೆಟ್ಟಿಗರು ಟೆಂಬಾ ಬವುಮಾ ಬೇಗನೆ ಔಟಾದ್ರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಒಳಿತು ಎಂದು ಟೀಕಿಸಿದ್ದಾರೆ.
T20 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ದ.ಆಫ್ರಿಕಾಗೆ ಭರ್ಜರಿ ಗೆಲುವು, 104ರನ್‌ಗಳಿಂದ ಸೋತ ಶಕೀಬ್ ಪಡೆ

ದ.ಆಫ್ರಿಕಾ ಪರ ಅಬ್ಬರಿಸಿದ ಡಿಕಾಕ್ ಮತ್ತು ರೊಸ್ಸೊ
ಬಾಂಗ್ಲಾದೇಶ ವಿರುದ್ಧ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಟೆಂಬಾ ಬವುಮಾ ಬೇಗನೆ ವಿಕೆಟ್ ಒಪ್ಪಿಸಿದ್ರೂ ಸಹ ಕ್ವಿಂಟನ್ ಡಿಕಾಕ್ ಹಾಗೂ 52 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ರೊಸ್ಸೊ, ದಕ್ಷಿಣ ಆಫ್ರಿಕಾ ತಂಡವು ಬೃಹತ್ ಮೊತ್ತ ದಾಖಲಿಸಲು ನೆರವಾದರು. 56 ಎಸೆತಗಳಲ್ಲಿ ಭರ್ಜರಿಯಾಗಿ 109ರನ್ ಸಿಡಿಸಿದ ರೊಸ್ಸೊ ಬಾಂಗ್ಲಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ 194.64ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಅವಕ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತು.
ಟಿ20 ವಿಶ್ವಕಪ್‌ನಲ್ಲಿ ಮೊದಲ ಶತಕ ದಾಖಲಿಸಿದ ರೊಸ್ಸೊ ಟಿ20 ವಿಶ್ವಕಪ್‌ನ 4ನೇ ವೇಗದ ಶತಕ ದಾಖಲಿಸಿದ್ರು. ಈ ಇಬ್ಬರು ಬ್ಯಾಟರ್‌ಗಳ ನೆರವಿನಿಂದ ದಕ್ಷಿಣ ಆಪ್ರಿಕಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ 101ರನ್‌ಗೆ ಆಲೌಟ್ ಆಗುವ ಮೂಲಕ 104ರನ್‌ಗಳ ಹೀನಾಯ ಸೋಲು ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications