For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್‌: ಬಾಂಗ್ಲಾದೇಶ ವಿರುದ್ಧ ದ.ಆಫ್ರಿಕಾಗೆ ಭರ್ಜರಿ ಗೆಲುವು, 104ರನ್‌ಗಳಿಂದ ಸೋತ ಶಕೀಬ್ ಪಡೆ

South africa vs bangladesh

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 104ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಹರಿಣಗಳ ದಾಳಿಗೆ ತತ್ತರಿಸಿದ ಬಾಂಗ್ಲಾ ಟೀಂ ಕೇವಲ 101ರನ್‌ಗಳಿಗೆ ಆಲೌಟ್ ಆಗಿದೆ.

ಭಾರೀ ಅಂತರದಲ್ಲಿ ಬಾಂಗ್ಲಾದೇಶ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. 16.3 ಓವರ್‌ಗಳಲ್ಲಿ 101 ರನ್‌ಗಳಿಗೆ ಬಾಂಗ್ಲಾದೇಶ ಆಲೌಟ್‌ ಆಗಿದ್ದು ಮುಖಭಂಗ ಅನುಭವಿಸಿದೆ.

ದ.ಆಫ್ರಿಕಾ ನೀಡಿದ್ದ 206ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಶಕೀಬ್ ಅಲ್ ಹಸನ್ ಪಡೆ ಸತತ ವಿಕೆಟ್ ಕಳೆದುಕೊಳ್ಳುವ ಮೂಲಕ ಸ್ವಲ್ಪವೂ ಹೋರಾಟ ಪ್ರದರ್ಶಿಸದೆ ಸೋಲನ್ನ ಒಪ್ಪಿಕೊಂಡಿದೆ.

ಹರಿಣಗಳ ವೇಗಕ್ಕೆ ತತ್ತರಿಸಿ ಹೋದ ಶಕೀಬ್ ಹಸನ್ ಟೀಂ

ಹರಿಣಗಳ ವೇಗಕ್ಕೆ ತತ್ತರಿಸಿ ಹೋದ ಶಕೀಬ್ ಹಸನ್ ಟೀಂ

ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಆರ್ಡರ್‌ ಸ್ವಲ್ಪವೂ ಉತ್ತಮ ಹೋರಾಟ ಪ್ರದರ್ಶಿಸದೆ ಸೋಲುವ ಮೂಲಕ ಟೀಕೆಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶ ಪರ ಲಿಟ್ಟನ್ ದಾಸ್ 34ರನ್‌ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ಬಾಂಗ್ಲಾ ತಂಡಕ್ಕೆ ಆಧಾರವಾಗಲಿಲ್ಲ. ಸೌಮ್ಯ ಸರ್ಕಾರ್ 16ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ನಾಯಕ ಶಕೀಬ್ ಕೇವಲ 1ರನ್‌ಗೆ ವಿಕೆಟ್‌ ಒಪ್ಪಿಸಿದ್ರು. ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್ ಪರೇಡ್ ನಡೆಸುವ ಮೂಲಕ ಬಾಂಗ್ಲಾದೇಶ ತಂಡವು 16.3 ಓವರ್‌ಗಳಲ್ಲಿ ಕೇವಲ 101ರನ್‌ಗಳಿಗೆ ಸರ್ವಪತನಗೊಂಡಿತು.

104ರನ್‌ಗಳ ಬೃಹತ್ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಗ್ರೂಪ್ 2ನಲ್ಲಿ 3 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ದ.ಆಫ್ರಿಕಾ ಪರ ಎನ್ರಿಕ್ ನೊರ್ಕಿಯಾ 4, ತಬ್ರೈಜ್ ಶಮ್ಸಿ 3, ಕಗಿಸೊ ರಬಾಡ ಹಾಗೂ ಕೇಶವ್ ಮಹಾರಾಜ ತಲಾ 1 ವಿಕೆಟ್ ಪಡೆದರು.

205ರನ್ ಕಲೆಹಾಕಿದ ದ. ಆಫ್ರಿಕಾ, ರೊಸ್ಸೊ ಅಬ್ಬರದ ಶತಕ

205ರನ್ ಕಲೆಹಾಕಿದ ದ. ಆಫ್ರಿಕಾ, ರೊಸ್ಸೊ ಅಬ್ಬರದ ಶತಕ

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಕಳೆದ ಪಂದ್ಯದಲ್ಲಿ ಮಳೆಯಿಂದಾಗಿ ಪಾಯಿಂಟ್ಸ್ ಕಳೆದುಕೊಂಡಿದ್ದರ ಪರಿಣಾಮ ಬಾಂಗ್ಲಾದೇಶ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು.

ಉತ್ತಮ ಆರಂಭ ಪಡೆಯದಿದ್ದರೂ ದಕ್ಷಿಣ ಆಫ್ರಿಕಾ ಓಪನರ್ ಕ್ವಿಂಟನ್ ಡಿಕಾಕ್ ಮತ್ತು ರಿಲೇ ರೊಸ್ಸೊ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಬೃಹತ್ ಸ್ಕೋರ್ ಕಲೆಹಾಕಲು ನೆರವಾದರು. ಕ್ವಿಂಟನ್ ಡಿಕಾಕ್ 38 ಎಸೆತಗಳಲ್ಲಿ 63ರನ್ ಸಿಡಿಸಿದ್ರೆ, ರಿಲೇ ರೊಸ್ಸೊ ಅಬ್ಬರದ ಶತಕ ದಾಖಲಿಸಿದ್ದಾರೆ. ಇದು ಪ್ರಸ್ತುತ ಟಿ20 ವಿಶ್ವಕಪ್‌ನ ಮೊದಲ ಶತಕವಾಗಿದೆ.

52 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ರೊಸ್ಸೊ, ದಕ್ಷಿಣ ಆಫ್ರಿಕಾ ತಂಡವು ಬೃಹತ್ ಮೊತ್ತ ದಾಖಲಿಸಲು ನೆರವಾದರು. 56 ಎಸೆತಗಳಲ್ಲಿ ಭರ್ಜರಿಯಾಗಿ 109ರನ್ ಸಿಡಿಸಿದ ರೊಸ್ಸೊ ಬಾಂಗ್ಲಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ 194.64ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಅವಕ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತು. ರೊಸ್ಸೊ ಆಟದಿಂದಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು.

ಬಾಂಗ್ಲಾ ವಿರದ್ಧ 104 ರನ್ ಗೆಲುವಿನೊಂದಿಗೆ 2 ಪಾಯಿಂಟ್‌ ಜೊತೆಗೆ ಉತ್ತಮ ನೆಟ್ ರನ್‌ರೇಟ್‌ ಕಲೆಹಾಕಿರುವ ದ. ಆಫ್ರಿಕಾ ಗ್ರೂಪ್ 2ನಲ್ಲಿ ಟಾಪರ್ ಆಗಿದೆ. ಜೊತೆಗೆ ಬರೋಬ್ಬರಿ +5.200 ನೆಟ್‌ ರನ್‌ರೇಟ್‌ನೊಂದಿಗೆ ಮುನ್ನಡೆ ಸಾಧಿಸಿದೆ.

ಟಿ20 ವಿಶ್ವಕಪ್‌: ರಿಲೇ ರೊಸ್ಸೋ ಸ್ಪೋಟಕ ಬ್ಯಾಟಿಂಗ್, ಸತತ 2ನೇ ಶತಕ ದಾಖಲಿಸಿದ ಮೊದಲ ಪ್ಲೇಯರ್!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕಿ ನಾರ್ಜಿಯಾ, ತಬ್ರೈಜ್ ಶಮ್ಸಿ

ಬೆಂಚ್: ಮಾರ್ಕೊ ಜಾನ್ಸೆನ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಲುಂಗಿ ಎನ್ಗಿಡಿ


ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್

ಬೆಂಚ್: ಎಬಾಡೋತ್ ಹೊಸೈನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಯಾಸಿರ್ ಅಲಿ

Story first published: Thursday, October 27, 2022, 13:02 [IST]
Other articles published on Oct 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+