T20 World Cup 2022 Final : ಮಳೆಯಿಂದಾಗಿ ನ.13ರಂದು ಫೈನಲ್ ನಡೆಯಲಿದ್ರೆ, ಸೋಮವಾರ ಎಷ್ಟು ಓವರ್ ಪಂದ್ಯ? ಏನು ಸಮಯ?

ಐಸಿಸಿ ಟಿ20 ವಿಶ್ವಕಪ್ 2022 ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಭಾನುವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಮೆಲ್ಬರ್ನ್‌ನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆಯಲಿರುವ ಪಂದ್ಯದತ್ತ ಇಡೀ ಕ್ರಿಕೆಟ್ ಲೋಕದ ದೃಷ್ಟಿ ನೆಟ್ಟಿದೆ.
ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವು, ವೇಗಿಗಳ ಮೇಲೆ ಹೆಚ್ಚು ನಂಬಿಕೆಯಿಟ್ಟಿರುವ ಪಾಕಿಸ್ತಾನ ತಂಡದೆದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಅಮೋಘ ಜಯ ಸಾಧಿಸಿ ಫೈನಲ್ ಪ್ರವೇಶಿಸಿರುವ ಬಟ್ಲರ್ ಪಡೆ, ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಮತ್ತೊಂದೆಡೆ ಅದೃಷ್ಟದ ಜೊತೆಗೆ ಅಮೋಘ ಆಟವಾಡಿ ಫೈನಲ್ ಟಿಕೆಟ್ ಪಡೆದಿರುವ ಬಾಬರ್ ಅಜಂ ತಂಡವು ಕೂಡ 13 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆಲ್ಲುವ ಕನಸನ್ನು ಕಟ್ಟಿಕೊಂಡಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ
ಭಾನುವಾರ ನಡೆಯಲಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಹವಾಮಾನ ಮುನ್ಸೂಚನೆ ನೀಡುವ 'ಆಕ್ಯುವೆದರ್' ಪ್ರಕಾರ ಮೆಲ್ಬರ್ನ್‌ನಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಇಷ್ಟಲ್ಲದೆ ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ಶೇಕಡಾ 95ರಷ್ಟು ಮಳೆ ಆಗುವ ಮುನ್ಸೂಚನೆ ನೀಡಲಾಗಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ವರುಣರಾಯ ಅಡ್ಡಗಾಲಿಡುವ ಸಾಧ್ಯತೆಯ ಪ್ರಮಾಣ ಹೆಚ್ಚಿದೆ.

ಮಳೆ ಬಂದ್ರೆ ನವೆಂಬರ್ 14ಕ್ಕೆ ಫೈನಲ್ ಪಂದ್ಯ
ಈಗಾಗಲೇ ಭಾನುವಾರ ನಿಗದಿಯಾಗಿರುವ ಫೈನಲ್ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ್ರೆ, ನವೆಂಬರ್ 14ಕ್ಕೆ ಫೈನಲ್ ಪಂದ್ಯವನ್ನು ನಡೆಸಲು ಈಗಾಗಲೇ ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ. ನವೆಂಬರ್ 13ರಂದು ಕನಿಷ್ಠ ಉಭಯ ತಂಡಗಳು ತಲಾ 10 ಓವರ್‌ಗಳಂತೆ 20 ಓವರ್‌ಗಳನ್ನ ಆಡಿದರಷ್ಟೇ ಫಲಿತಾಂಶವನ್ನು ನೀಡಲು ನಿರ್ಧರಿಸಲಿದ್ದು, ಇಲ್ಲದೇ ಹೋದಲ್ಲಿ ಸೋಮವಾರ ಫೈನಲ್ ಕಾದಾಟ ನಡೆಯಲಿದೆ.
ಟಿ20 ವಿಶ್ವಕಪ್: ಪಾಕಿಸ್ತಾನ vs ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳನ್ನು ಘೋಷಿಸಿದ ಐಸಿಸಿ

ಸೋಮವಾರಕ್ಕೆ ಹೆಚ್ಚುವರಿ 2 ಗಂಟೆಗಳ ಸಮಯ ನಿಗದಿ
ಸಾಮಾನ್ಯವಾಗಿ ಟಿ20 ಅಂತರಾಷ್ಟ್ರೀಯ ಪಂದ್ಯಕ್ಕೆ ಎಕ್ಟ್ರಾ ಟೈಂ ಆಗಿ 30 ನಿಮಿಷವನ್ನು ನೀಡಲಾಗುತ್ತದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಹೆಚ್ಚುವರಿ ಸಮಯವನ್ನು 2 ಗಂಟೆಗೆ ಈಗಾಗಲೇ ಐಸಿಸಿ ನಿಗದಿಪಡಿಸಿತ್ತು. ಆದ್ರೆ ಮೆಲ್ಬರ್ನ್‌ನಲ್ಲಿ ಮಳೆ ಭೀತಿ ಎದುರಾಗಿರುವುದರಿಂದ ಸೋಮವಾರಕ್ಕೆ(ನ.14) ಫೈನಲ್ ಮುಂದೂಡಲ್ಪರೆ 2 ಗಂಟೆಗಳ ಎಕ್ಟ್ರಾ ಟೈಂ ಬದಲು, 4 ಗಂಟೆಗಳ ಕಾಲ ವಿಸ್ತರಿಸಲು ಐಸಿಸಿ ನಿರ್ಧರಿಸಿದೆ.
ಈಗಾಗಲೇ ಪೂರ್ವ ನಿರ್ಧಾರದಂತೆ ಫೈನಲ್ ಪಂದ್ಯವು ಭಾನುವಾರ ಸ್ಥಳೀಯ ಕಾಲಮಾನ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ 1.30ಕ್ಕೆ) ಆಯೋಜಿಸಲಾಗಿದ್ದು, ಸೋಮವಾರಕ್ಕೆ ಪಂದ್ಯ ಮುಂದೂಡಲ್ಪಟ್ಟರೆ, ನವೆಂಬರ್ 14ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 3ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ) ಪಂದ್ಯ ನಡೆಯಲಿದೆ.
PAK vs ENG: ಹೀಗಾದ್ರೆ ಮಾತ್ರ ಪಾಕಿಸ್ತಾನ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯ; ಕೆವಿನ್ ಪೀಟರ್ಸನ್

ಮಳೆಯಿಂದಾಗಿ ಸೋಮವಾರವೂ ಪಂದ್ಯ ಸ್ಥಗಿತಗೊಂಡರೆ ಏನು ಗತಿ?
ಈಗಾಗಲೇ ಮೇಲೆ ತಿಳಿಸಿರುವಂತೆ ಐಸಿಸಿ ಮೀಸಲು ದಿನವನ್ನು ಗೊತ್ತು ಮಾಡಿದೆ. ಹೀಗಾಗಿ ಭಾನುವಾರ ಒಂದು ವೇಳೆ ಮಳೆಯಿಂದಾಗಿ ಪಂದ್ಯದ ಓವರ್‌ಗಳು ಕಡಿತಗೊಂಡು ಪಂದ್ಯ ನಡೆಯಿತಾದ್ರೂ, ಪುನಃ ಪಂದ್ಯ ಸ್ಥಗಿತಗೊಂಡ್ರೆ, ಸೋಮವಾರ ನಿಗದಿತ ಸಮಯದಲ್ಲಿ ಉಳಿದ ಓವರ್‌ಗಳಿಗೆ ಪಂದ್ಯ ಮುಂದುವರಿಯಲಿದೆ.
ಇಲ್ಲಿ ಗಮನಿಸಬೇಕಾದ ವಿಚಾರ ಏನಂದ್ರೆ, ಟಾಸ್ ಆದ ಬಳಿಕ ಪಂದ್ಯವು ಶುರುವಾಗಿದೆ(ಲೈವ್) ಎಂದು ತೀರ್ಮಾನಿಸಲಿದ್ದು, ಎರಡು ದಿನಗಳಲ್ಲಿ ಕನಿಷ್ಠ 20 ಓವರ್‌ಗಳ ಪಂದ್ಯ ನಡೆಯಬೇಕಿದೆ. ಆದ್ರೆ ಒಂದು ವೇಳೆಯಲ್ಲಿ ಮೆಲ್ಬರ್ನ್‌ನಲ್ಲಿ ಎರಡು ದಿನಗಳ ಕಾಲ ಮಳೆ ಅಡ್ಡಿಪಡಿಸಿದ್ರೆ, ಎರಡು ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುವುದು. ಪ್ರಶಸ್ತಿಯು ಉಭಯ ತಂಡಗಳಿಗೆ ಹಂಚಿಕೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications