ಟಿ20 ವಿಶ್ವಕಪ್: ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತಕಾರಿ ಸುದ್ದಿ!

ಐಸಿಸಿ ಟಿ20 ವಿಶ್ವಕಪ್ ಗ್ರೂಪ್ 2ನಲ್ಲಿ ಸ್ಥಾನ ಪಡೆದಿರುವ ಟೀಂ ಇಂಡಿಯಾ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ವಿಶ್ವಕಪ್‌ನ ಸೆಮಿಫೈನಲ್ ಟಿಕೆಟ್ ಪಡೆಯಲು ಭಾರತ ಮುಂದಿನ ಎರಡು ಪಂದ್ಯಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು, ನೆದರ್ಲ್ಯಾಂಡ್ಸ್ ವಿರುದ್ಧ 56ರನ್‌ಗಳಿಂದ ಗೆದ್ದ ಭಾರತ ಪರ್ತ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲನ್ನ ಅನುಭವಿಸಿತು. ಹೀಗಾಗಿ ಭಾರತ ಸೆಮಿಫೈನಲ್ ತಲುಪಲು ಮುಂದಿನ ಎರಡು ಪಂದ್ಯಗಳ ಫಲಿತಾಂಶ ಬಹುಮುಖ್ಯ.

ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಎದುರಾಗಲಿದೆ ಮಳೆ ಕಾಟ!
ಅಡಿಲೇಡ್‌ನ ಅಡಿಲೇಡ್ ಓವಲ್ ಮೈದಾನದಲ್ಲಿ ನವೆಂಬರ್ 2ರಂದು ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ನಡೆಯಲಿದೆ. ಪ್ರಸ್ತುತ 4 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಭಾರತ ಬಾಂಗ್ಲಾ ವಿರುದ್ಧ ಗೆಲ್ಲಲು ರಣತಂತ್ರ ಹೂಡಲು ರೆಡಿಯಾಗಿದ್ದು, ಅಡಿಲೇಡ್‌ಗೆ ಈಗಾಗಲೇ ಪ್ರಯಾಣ ಬೆಳೆಸಿದೆ. ಆದ್ರೆ ಟೀ ಇಂಡಿಯಾ ಓವಲ್ ಅಂಗಳಕ್ಕೆ ಕಾಲಿಡುವುದಕ್ಕೂ ಮೊದಲೇ ಕಹಿ ಸುದ್ದಿ ಎದುರಾಗಿದೆ.
ಹವಾಮಾನ ವರದಿಯ ಪ್ರಕಾರ ಅಡಿಲೇಡ್ ಓವಲ್‌ನಲ್ಲಿ ಮಳೆಯು ಪ್ರಮುಖ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈ ಮೂಲಕ ಅಭಿಮಾನಿಗಳಿಗೆ ಪಂದ್ಯಕ್ಕೂ ಮೊದಲೇ ಬೇಸರ ಮೂಡಿದೆ.
ಡೇವಿಡ್ ಮಿಲ್ಲರ್ ರನೌಟ್ ಚೌನ್ಸ್ ಕೈ ಚೆಲ್ಲಿದ R. ಅಶ್ವಿನ್: ಮಂಕಡಿಂಗ್ ವಾರ್ನಿಂಗ್

ಶೇಕಡಾ 70ರಷ್ಟು ಮಳೆ ಬರುವ ಸಾಧ್ಯತೆ
ಅಡಿಲೇಡ್‌ನಲ್ಲಿ ಬುಧವಾರ ಶೇಕಡಾ 70ರಷ್ಟು ಮಳೆಬರುವ ಸಾಧ್ಯತೆ ಎದುರಾಗಿದೆ. ಆದ್ರೆ 1 ರಿಂದ 3 ಮಿಲಿ ಮೀಟರ್ ಮಳೆಯಾಗಲಿದೆ ಎಂಬುದು ಕೊಂಚ ಸಮಾಧಾನ ತರುವಂತಹ ವಿಷಯವಾಗಿದೆ. ಸ್ಟೇಡಿಯಂನಲ್ಲಿ ಪಶ್ಚಿಮದಿಂದ ನೈರುತ್ಯದ ಕಡೆಗೆ 25 ರಿಂದ 35 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.
ಹೆಡ್ ಟು ಹೆಡ್ ರೆಕಾರ್ಡ್ ಭಾರತ ಎದುರಾಳಿ ಬಾಂಗ್ಲಾದೇಶ ವಿರುದ್ಧ ಮೇಲುಗೈ ಸಾಧಿಸಿದ್ದು, ಇದುವರೆಗೆ 11 ಟಿ20 ಅಂತರಾಷ್ಟ್ರೀಯ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ 10 ಪಂದ್ಯಗಳನ್ನ ಜಯಿಸಿದೆ. ಬಾಂಗ್ಲಾದೇಶ ಕೇವಲ 1 ಬಾರಿ ಪಂದ್ಯ ಜಯಿಸಿದೆ.
'ಖಾಸಗಿತನಕ್ಕೆ ಆಕ್ರಮಣ': ಹೋಟೆಲ್ ಕೋಣೆಯ ವಿಡಿಯೋ ಲೀಕ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ ಗರಂ

ಭಾರತ ಮತ್ತು ಬಾಂಗ್ಲಾದೇಶ ಸಂಭಾವ್ಯ 11
ಭಾರತ ಸಂಭಾವ್ಯ 11: ರೋಹಿತ್ ಶರ್ಮಾ(ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್
ಬಾಂಗ್ಲಾದೇಶ ಸಂಭಾವ್ಯ 11: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications