ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್‌ ಮಿಲ್ಲರ್‌ ರನೌಟ್ ಚೌನ್ಸ್‌ ಕೈ ಚೆಲ್ಲಿದ R. ಅಶ್ವಿನ್: ಮಂಕಡಿಂಗ್ ವಾರ್ನಿಂಗ್

David warner

ಪರ್ತ್‌ ಸ್ಟೇಡಿಯಂನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಹರಿಣಗಳು ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿದರು. ಮೊದಲೆರಡು ಪಂದ್ಯ ಗೆದ್ದಿದ್ದ ಭಾರತವು ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಮೊದಲ ಸೋಲನ್ನ ಅನುಭವಿಸಿದೆ.

ಭಾರತ ನೀಡಿದ್ದ 134ರನ್ ಗುರಿ ಬೆನ್ನತ್ತಿದ ದ.ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಏಡೆನ್ ಮಕ್ರಾಮ್ ಉತ್ತಮ ಸಾಥ್ ಕೊಟ್ಟ ಪರಿಣಾಮ ಹರಿಣಗಳು ಪಂದ್ಯ ಜಯಿಸಿದ್ರು. ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಂಪಾದಿಸಿತು.

ಹರಿಣಗಳ ದಾಳಿಗೆ ತರಗೆಲೆಯಂತಾದ ಭಾರತದ ಟಾಪ್ ಆರ್ಡರ್

ಹರಿಣಗಳ ದಾಳಿಗೆ ತರಗೆಲೆಯಂತಾದ ಭಾರತದ ಟಾಪ್ ಆರ್ಡರ್

ದ.ಆಫ್ರಿಕಾ ಬೌಲಿಂಗ್ ದಾಳಿಗೆ ಪವರ್‌ಪ್ಲೇ ಓವರ್‌ಗಳಲ್ಲಿ ತತ್ತರಿಸಿದ ಟೀಂ ಇಂಡಿಯಾ ಟಾಪ್ ಆರ್ಡರ್ ಯಾರೂ ಊಹಿಸಿದ ರೀತಿಯಲ್ಲಿ ನೆಲಕಚ್ಚಿತು. ಮೊದಲಿಗೆ ಕೆ.ಎಲ್ ರಾಹುಲ್ 14 ಎಸೆತಗಳಲ್ಲಿ 9ರನ್‌ಗೆ ಔಟಾದ್ರೆ, ರೋಹಿತ್ 14 ಎಸೆತಗಳಲ್ಲಿ 15ರನ್ ಸಿಡಿಸುವ ಮೂಲಕ ವಿಕೆಟ್ ಒಪ್ಪಿಸಿದ್ರು.

ದಕ್ಷಿಣ ಆಫ್ರಿಕಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಲುಂಗಿ ಎನ್‌ಗಿಡಿ ತನ್ನ ಮೊದಲ ಓವರ್‌ನಲ್ಲೇ ಎರಡುವ ವಿಕೆಟ್ ಕಬಳಿಸಿದ್ರು. ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ 2 ಬೌಂಡರಿ ಸಿಡಿಸಿ ತಿರುಗೇಟು ನೀಡುವ ಲಕ್ಷಣ ತೋರಿದರು. ಆದ್ರೆ ಮತ್ತೆ ದಾಳಿಗಿಳಿದ ಲುಂಗಿ ಎನ್‌ಗಿಡಿ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ವಿರಾಟ್ 12, ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯ 2ರನ್‌ಗೆ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ನುಂಗಲಾರದ ತುತ್ತಾಯಿತು.

ಭಾರತ 8.3 ಓವರ್‌ಗಳಲ್ಲಿ 49ರನ್‌ಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಈ ವೇಳೆಯಲ್ಲಿ 6ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ ಸೂರ್ಯಕುಮಾರ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ತಂಡದ ಸ್ಕೋರನ್ನು 100ರ ಗಡಿದಾಟಿಸಿದ್ರು. ಸೂರ್ಯಕುಮಾರ್ ಅರ್ಧಶತಕದ ನೆರವಿನಿಂದ ಭಾರತ 133 ರನ್ ಕಲೆಹಾಕಿತು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಇದು ಕಾರಣ; ಕೊಹ್ಲಿಯನ್ನು ದೂಷಿಸಿದ ಭುವಿ!

ದಕ್ಷಿಣ ಆಫ್ರಿಕಾ ಆರಂಭವೂ ಉತ್ತಮವಾಗಿರ್ಲಿಲ್ಲ, 24ರನ್‌ಗೆ 2 ವಿಕೆಟ್

ದಕ್ಷಿಣ ಆಫ್ರಿಕಾ ಆರಂಭವೂ ಉತ್ತಮವಾಗಿರ್ಲಿಲ್ಲ, 24ರನ್‌ಗೆ 2 ವಿಕೆಟ್

ಈ ಸಣ್ಣ ಗುರಿಯನ್ನ ಬೆನತ್ತಿದ ದ.ಆಫ್ರಿಕಾ ಆರಂಭ ಕೂಡ ಉತ್ತಮವಾಗಿರ್ಲಿಲ್ಲ. 24ರನ್‌ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ನಾಯಕ ಟೆಂಬಾ ಬವುಮಾ 15 ಎಸೆತಗಳನ್ನ ಎದುರಿಸಿ 10ರನ್ ಕಲೆಹಾಕಿದರು. ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಬವುಮಾ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಆದ್ರೆ ಏಡೆನ್ ಮಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಜೊತೆಯಾಟವು ತಂಡವನ್ನು ಗೆಲುವಿನ ದಡ ತಲುಪಿಸಿತು. ಮಕ್ರಾಮ್ 52ರನ್ ಕಲೆಹಾಕಿ ಔಟಾದ್ರೆ, ಡೇವಿಡ್ ಮಿಲ್ಲರ್ ಅಜೇಯ 59 ರನ್‌ಕಲೆಹಾಕಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಆದ್ರೆ ಮಿಲ್ಲರ್ ಔಟ್ ಮಾಡಲು ರವಿಚಂದ್ರನ್ ಅಶ್ವಿನ್‌ಗೆ ಅವಕಾಶವಿತ್ತು. ಆದ್ರೆ ಮಂಕಡಿಂಗ್ ಸ್ಪೆಷಲಿಸ್ಟ್ ಆ್ಯಶ್ ವಾರ್ನಿಂಗ್ ಕೊಟ್ಟು ಸುಮ್ಮನಾಗಿದ್ದಾರೆ.

IND Vs SA: ಇದು ಬೆಂಗಳೂರು ಪಿಚ್ ಅಲ್ಲ : ದಿನೇಶ್ ಕಾರ್ತಿಕ್ ಆಟಕ್ಕೆ ಮಾಜಿ ಬ್ಯಾಟರ್ ಟೀಕೆ

ಡೇವಿಡ್ ಮಿಲ್ಲರ್ ರನೌಟ್ ಅವಕಾಶ ಕೈಬಿಟ್ಟ ಅಶ್ವಿನ್

ಡೇವಿಡ್ ಮಿಲ್ಲರ್ 46 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 59ರನ್ ಕಲೆಹಾಕಿದರು. ಈ ಮೂಲಕ ಆಫ್ರಿಕಾ ಪರ ಗೆಲುವಿನ ಇನ್ನಿಂಗ್ಸ್‌ ಆಡಿದ್ರು. 18ನೇ ಓವರ್‌ನಲ್ಲಿ ಅಶ್ವಿನ್‌ಗೆ 2 ಸಿಕ್ಸರ್ ಸಿಡಿಸಿದ್ದ ಡೇವಿಡ್ ಮಿಲ್ಲರ್ ಸುಲಭವಾಗಿ ಪಂದ್ಯ ಜಯಿಸಿದ್ರು.

ಆದ್ರೆ ಮಿಲ್ಲರ್ ರನೌಟ್‌ ಮಾಡುವ ಅವಕಾಶವನ್ನು ಅಶ್ವಿನ್ ಕೈ ಚೆಲ್ಲಿರುವ ವೀಡಿಯೋ ಬೆಳಕಿಗೆ ಬಂದಿದೆ. ಚೆಂಡು ಎಸೆತಕ್ಕೂ ಮೊದಲೇ ಕ್ರೀಸ್‌ ಬಿಡುವ ಬ್ಯಾಟರ್‌ಗಳನ್ನು ಮಂಕಡಿಂಗ್ ಮಾಡಲು ನಿಸ್ಸೀಮರಾದ ಅಶ್ವಿನ್ ಈ ಬಾರಿ ಡೇವಿಡ್ ಮಿಲ್ಲರ್‌ಗೆ ಒಂದು ಅವಕಾಶ ನೀಡುವ ಮೂಲಕ ರನೌಟ್ ವಾರ್ನಿಂಗ್ ನೀಡಿದರು. ಈ ಕುರಿತಾದ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Story first published: Monday, October 31, 2022, 13:46 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X