ನಾನು ಸಾರ್ವಕಾಲಿಕ ಶ್ರೇಷ್ಟನಲ್ಲ ಎಂದ ವಿರಾಟ್ ಕೊಹ್ಲಿ: ಟ್ವಿಟ್ಟರ್‌ನಲ್ಲಿ ಫ್ಯಾನ್ಸ್‌ ಪ್ರತಿಕ್ರಿಯೆ

ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಆಡಿರುವ ಎರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ದಾಖಲಿಸುವ ಮೂಲಕ ಮಿಂಚಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 82ರನ್ ಕಲೆಹಾಕಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ ಆಡಿದ್ರು.

ಕೊಹ್ಲಿ ಫಾರ್ಮ್‌ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲೂ ಮುಂದುವರಿಯಿತು. 44 ಎಸೆತಗಳಲ್ಲಿ ಅಜೇಯ 62ರನ್ ಕಲೆಹಾಕಿದ ವಿರಾಟ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಕಾಣಬಹುದು. ಹೀಗಾಗಿ ವಿರಾಟ್ ಸದ್ಯ ಟೀಂ ಇಂಡಿಯಾದ ಪ್ರಮುಖ ಟ್ರಂಪ್‌ಕಾರ್ಡ್ ಆಗಿ ಪರಿಣಮಿಸಿದ್ದಾರೆ. ಓಪನರ್‌ಗಳಿಬ್ಬರು ವಿಫಲರಾದ್ರೂ ಅಮೋಘ ಆಟವಾಡುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ನೀವು ಕ್ರಿಕೆಟ್‌ನ GOAT (ಗ್ರೇಟೆಸ್ಟ್ ಆಫ್ ಆಲ್ ಟೈಂ) ಎಂದು ಪರಿಗಣಿಸುತ್ತೀರ ಎಂಬ ಪ್ರಶ್ನೆಗೆ ವಿರಾಟ್ 'ನೋ' ಎಂದು ಉತ್ತರ ನೀಡಿದ್ದಾರೆ.

ನಾನು ಸಾರ್ವಕಾಲಿಕ ಶ್ರೇಷ್ಟನಲ್ಲ ಎಂದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಟಿಯಲ್ಲಿ ಕೇಳಿದ ಪ್ರಶ್ನೆಗೆ ನಾನು ಸಾರ್ವಕಾಲಿಕ ಶ್ರೇಷ್ಟನಲ್ಲ, ನನ್ನ ಪ್ರಕಾರ ಸಚಿನ್ ತೆಂಡೂಲ್ಕರ್ ಮತ್ತು ವಿವ್ ರಿಚರ್ಡ್ಸ್ ಸಾರ್ವಕಾಲಿಕ ಶ್ರೇಷ್ಟ ಆಟಗಾರರು ಎಂದು ಹೇಳಿದ್ದರು.

ಆದ್ರೆ ವಿರಾಟ್ ಕೊಹ್ಲಿ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿರಾಟ್ ಕೊಹ್ಲಿ ಏನೇ ಅಂದರೂ ಆತ GOAT ಎಂದು ಕರೆದಿದ್ದಾರೆ.

ಆತನ ನಿವೃತ್ತಿಗೂ ಮುನ್ನ ಒಂದು ಬಾರಿಯಾದ್ರೂ IPLನಲ್ಲಿ ಅವಕಾಶ ನೀಡಿ: ಸಿಕಂದರ್ ರಾಜಾ ಫ್ಯಾನ್ಸ್ ಒತ್ತಾಯ

GOAT ಎಂದು ತನ್ನನ್ನು ತಾನೇ ಹೇಳಿಕೊಳ್ಳುವುದಿಲ್ಲ!

ಸಾರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಯಾರೂ ತಮಗೆ ತಾವೇ ಹೇಳಿಕೊಳ್ಳುವುದಿಲ್ಲ. ಅದೇ ರೀತಿ ವಿರಾಟ್ ಕೊಹ್ಲಿ ಹೇಳಿಕೊಳ್ಳದೆ ಹಿಂಜರಿದಿದ್ದಾರೆ. ಆದ್ರೆ ನಮ್ಮ ಪ್ರಕಾರ ವಿರಾಟ್ ಕೊಹ್ಲಿಯೇ ಸಾರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ಆತನ ಗುಣವನ್ನು ಅವನ ಹೇಳಿಕೆಯ ಮೂಲಕವೇ ಕಾಣಬಹುದಾಗಿದೆ. ಆತ ಬೇಕಾದ್ದ ರೀತಿಯಲ್ಲಿ ಉತ್ತರ ನೀಡಬಹುದಿತ್ತು. ಆದ್ರೆ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ದೈತ್ಯ ವಿವ್ ರಿಚರ್ಡ್ಸ್‌ ಕಡೆಗೆ ಗ್ರೇಟೆಸ್ಟ್‌ ಆಫ್ ಆಲ್‌ ಟೈಂ ಎಂದು ಬೊಟ್ಟು ಮಾಡಿದ್ದಾರೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಅದ್ಭುತ ಆಟಗಾರ, ಏನನ್ನೂ ಸಾಭೀತುಪಡಿಸಬೇಕಾಗಿಲ್ಲ: ರೋಜರ್ ಬಿನ್ನಿ

ಸಚಿನ್ ದಾಖಲೆಯನ್ನ ಮುರಿದಿರುವ ಕಿಂಗ್ ಕೊಹ್ಲಿ

ಸಚಿನ್ ದಾಖಲೆಯನ್ನ ಮುರಿದಿರುವ ಕಿಂಗ್ ಕೊಹ್ಲಿ

ಐಸಿಸಿ ಟೂರ್ನಿಯಲ್ಲಿ ಇಷ್ಟು ದಿನಗಳ ಕಾಲ ಇದ್ದ ಸಚಿನ್ ದಾಖಲೆಯನ್ನ ಕಿಂಗ್ ಕೊಹ್ಲಿ ಈಗಾಗಲೇ ಮುರಿದಿದ್ದಾರೆ. ಐಸಿಸಿ ಟೂರ್ನಮೆಂಟ್‌ನಲ್ಲಿ ಇದುವರೆಗೆ 62 ಪಂದ್ಯಗಳಲ್ಲಿ ದಾಖಲೆಯ 60.63ರ ಬ್ಯಾಟಿಂಗ್ ಸರಾಸರಿಯಲ್ಲಿ ವಿರಾಟ್ 2548 ರನ್‌ ಕಲೆಹಾಕಿದ್ದಾರೆ. ಜೊತೆಗೆ 2 ಶತಕ ಹಾಗೂ 23 ಅರ್ಧಶತಕ ದಾಖಲಿಸುವ ಮೂಲಕ ಸಚಿನ್ ಹೆಸರಲ್ಲಿದ್ದ 23 ಬಾರಿ 50+ ಸ್ಕೋರ್ ದಾಖಲೆಯನ್ನ ಈಗಾಗಲೇ ಮುರಿದರು. ವಿರಾಟ್ ಕೊಹ್ಲಿ ವೈಯಕ್ತಿಕ ಗರಿಷ್ಠ 107ರನ್ ಆಗಿದೆ.

ವಿರಾಟ್ ಕೊಹ್ಲಿ 2014 ಮತ್ತು 2016ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್‌ ಪಡೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, October 29, 2022, 16:22 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X