Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Pak: ಪಾಕ್‌ಗಿಂತ ಟೀಂ ಇಂಡಿಯಾ ಹೆಚ್ಚು ಒತ್ತಡದಲ್ಲಿದೆ ಎಂದ ಮಿಸ್ಬಾ ಉಲ್ ಹಕ್!

India vs pakistan match

ಭಾನುವಾರ ಭಾರತ-ಪಾಕಿಸ್ತಾನ ತಂಡದ ಮುಖಾಮುಖಿಯಿಂದಾಗಿ ಕ್ರಿಕೆಟ್‌ ಅಭಿಮಾನಿಗಳಿಗೆ ಅಕ್ಟೊಬರ್ 23 ಸೂಪರ್ ಸಂಡೇ ಆಗಿ ಪರಿಣಮಿಸಿದೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯದಲ್ಲಿ ಟಾಸ್ ಗೆದ್ದಿರುವಂತಹ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಭಾರತ-ಪಾಕಿಸ್ತಾನ ಪಂದ್ಯ ಅಂದಕೂಡಲೇ ಹೈವೋಲ್ಟೇಜ್‌ ಕಾದಾಟ ಅನ್ನೋದ್ರಲ್ಲಿ ಅನುಮಾನವಿಲ್ಲ. ಅಭಿಮಾನಿಗಳು ಸಹ ಈ ಎರಡು ತಂಡಗಳ ಮುಖಾಮುಖಿಯನ್ನು ಪಂದ್ಯಕ್ಕಿಂತ ಹೆಚ್ಚಾಗಿ ಯುದ್ಧದಂತೆ ವೀಕ್ಷಿಸುವುದು ಸಹಜ. ಹೀಗಿರುವಾಗ ಉಭಯ ತಂಡಗಳ ಬಲಾಬಲದ ಲೆಕ್ಕಾಚಾರದ ಚರ್ಚೆಯು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ ಉಲ್‌ ಹಕ್ ಕುತೂಹಲಕಾರಿ ಹೇಳಿಕೆ ನೀಡಿದ್ದು, ಭಾರತದ ಮೇಲೆ ಒತ್ತಡ ಹೆಚ್ಚಿದೆ ಎಂದಿದ್ದಾರೆ.

ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚಿನ ಅಡ್ವಾಂಟೇಜ್!

ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚಿನ ಅಡ್ವಾಂಟೇಜ್!

ಭಾರತ ಮತ್ತು ಪಾಕಿಸ್ತಾನ ಹೆಡ್‌ ಟು ಹೆಡ್‌ ಫೈಟ್‌ನಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಅಡ್ವಾಂಟೇಜ್ ಹೊಂದಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಹೆಚ್ಚಿನ ಒತ್ತಡದಲ್ಲಿದೆ ಎಂದು ಮಿಸ್ಬಾ ಉಲ್ ಹಕ್ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಏಷ್ಯಾಕಪ್‌ 2022ರಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಟೀಂ ಇಂಡಿಯಾ ಫೈನಲ್ ತಲುಪಲು ಅಡ್ಡಗಾಲಿಟ್ಟಿದ್ದಲ್ಲದೆ ಪ್ರಮುಖ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಸೋಲಿಸಿ ಮನೆಗಟ್ಟಿತು. ಕಳೆದ ಬಾರಿಯ ಟಿ20 ವಿಶ್ವಕಪ್‌ನ ಸೋಲು ಹಾಗೂ ಏಷ್ಯಾಕಪ್‌ನಲ್ಲಿ ಪಾಕ್‌ ವಿರುದ್ಧ ಮುಖಭಂಗ ಭಾರತ ತಂಡದ ಮೇಲೆ ಸಾಕಷ್ಟು ಒತ್ತಡವನ್ನು ಹಾಕಿದೆ ಎಂದು ಮಿಸ್ಬಾ ಹೇಳಿದ್ದಾರೆ.

Ind vs Pak: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ, ಪ್ಲೇಯಿಂಗ್ 11

ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ ಎಂದ ಮಿಸ್ಬಾ

ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ ಎಂದ ಮಿಸ್ಬಾ

ಸಾಮಾನ್ಯವಾಗಿ ವಿಶ್ವಕಪ್ ಅಂದಕೂಡಲೇ ಪಾಕಿಸ್ತಾನ ತಂಡವು ಹೆಚ್ಚಿನ ಒತ್ತಡದಲ್ಲಿರುತ್ತಿತ್ತು. ಆದ್ರೆ ಈ ಬಾರಿ ಒತ್ತಡವು ಭಾರತದ ಮೇಲಿರಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ನಿಂದ ಹೊರಬಿದ್ದರು, ಏಷ್ಯಾಕಪ್‌ನಲ್ಲೂ ಕೂಡ ಅದೇ ರೀತಿಯಾದ ಪ್ರದರ್ಶನ ನೀಡಿದ್ರು. ಹೀಗಾಗಿ ಭಾರತವು ಹೆಚ್ಚಿನ ಒತ್ತಡದಲ್ಲಿದೆ ಎಂದು ಮಿಸ್ಬಾ ಎ ಸ್ಪೋರ್ಟ್ಸ್‌ ಗೆ ತಿಳಿಸಿದ್ದಾರೆ.

''ಒಂದು ವೇಳೆ ಪಾಕಿಸ್ತಾನ ತಂಡವು ಮೊದಲ ಪಂಚ್ ನೀಡಿದ್ದಲ್ಲಿ, ಶಾಹೀನ್ ಅಫ್ರಿದಿ ಭಾರತದ ಓಪನಿಂಗ್ ಜೊತೆಯಾಟವನ್ನ ಬೇರ್ಪಡಿಸಿದ್ದಲ್ಲಿ, ಭಾರತಕ್ಕೆ ಕಠಿಣವಾಗಲಿದೆ. ಯಾರು ಮೊದಲು ಮೇಲುಗೈ ಸಾಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಭಾರತವು ಮೊದಲು ಬೌಲಿಂಗ್ ಮಾಡಿ ಚೇಸಿಂಗ್ ಮಾಡುವ ಕಂಫರ್ಟ್‌ ಜೋನ್‌ನಲ್ಲಿದೆ. ಪಾಕಿಸ್ತಾನ ಇತ್ತೀಚೆಗೆ ಅದನ್ನೇ ಮಾಡಿದೆ. ಒಂದು ವೇಳೆ ಹವಾಮಾನ ಸರಿಯಿಲ್ಲದಿದ್ದರೆ ಉಭಯ ತಂಡಗಳು ಮೊದಲು ಬೌಲಿಂಗ್ ಮಾಡಿ ಚೇಸಿಂಗ್ ಮಾಡಲು ಇಷ್ಟಪಡುತ್ತವೆ. ಈಗಿನ ಪ್ರಶ್ನೆ ಏನೆಂದರೆ ಪೂರ್ಣ 20 ಓವರ್‌ಗಳ ಪಂದ್ಯ ಇದ್ದರೆ ಹೇಗೆ? ಎಂಬುದಾಗಿದೆ'' ಎಂದು ಮಿಸ್ಬಾ ಸೇರಿಸಿದ್ದಾರೆ.

ತಮಗೆ ತಾವೇ ರೇಟಿಂಗ್ ನೀಡಿದ ಸೂರ್ಯಕುಮಾರ್ , ಬಾಬರ್ ಅಜಮ್: ಫೀಲ್ಡಿಂಗ್‌ನಲ್ಲಿ ವೀಕ್‌ ಎಂದು ಒಪ್ಪಿಕೊಂಡ ಬಾಬರ್!

ಮಿಸ್ಬಾ ಉಲ್ ಹಕ್‌ ಮಾತನ್ನು ಅಲ್ಲಗೆಳೆದ ಲೆಜೆಂಡ್ ವಾಸಿಂ ಅಕ್ರಂ

ಮಿಸ್ಬಾ ಉಲ್ ಹಕ್‌ ಮಾತನ್ನು ಅಲ್ಲಗೆಳೆದ ಲೆಜೆಂಡ್ ವಾಸಿಂ ಅಕ್ರಂ

ಆದ್ರೆ ಮಿಸ್ಬಾ ಉಲ್ ಹಕ್ ಮಾತನ್ನು ಅವರದ್ದೇ ದೇಶದ ಮಾಜಿ ಆಟಗಾರ, ಲೆಜೆಂಡರಿ ಪೇಸರ್ ವಾಸಿಂ ಅಕ್ರಂ ಅಲ್ಲಗೆಳೆದಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನಕ್ಕಿಂತ ಟೀಂ ಇಂಡಿಯಾ ಒಂದು ಹೆಜ್ಜೆ ಮುಂದಿದೆ ಎಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯವು ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿದ್ದು, 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ಮೊದಲ 4 ಓವರ್‌ಗಳಲ್ಲಿ ಇಬ್ಬರು ಓಪನರ್‌ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದು, ಸ್ಟಾರ್ ಬ್ಯಾಟರ್‌ಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಭಾರತದ ಯುವ ವೇಗಿ ಅರ್ಷ್‌ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಬಾಬರ್ ಅಜಮ್ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರೆ, ಮೊಹಮ್ಮದ್ ರಿಜ್ವಾನ್ 12 ಎಸೆತಗಳಲ್ಲಿ ಕೇವಲ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

Story first published: Sunday, October 23, 2022, 14:14 [IST]
Other articles published on Oct 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+