ತಮಗೆ ತಾವೇ ರೇಟಿಂಗ್ ನೀಡಿದ ಸೂರ್ಯಕುಮಾರ್ , ಬಾಬರ್ ಅಜಮ್: ಫೀಲ್ಡಿಂಗ್‌ನಲ್ಲಿ ವೀಕ್ ಎಂದು ಒಪ್ಪಿಕೊಂಡ ಬಾಬರ್!

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್‌ನ ಅತಿ ದೊಡ್ಡ ಬದ್ಧ ಎದುರಾಳಿಗಳು ಮುಖಾಮುಖಿಯಾಗುತ್ತಿದ್ದು, ಎಲ್ಲರ ಕಣ್ಣು ಮೆಲ್ಬರ್ನ್‌ನ ಎಂಸಿಜಿ ಮೈದಾನದತ್ತ ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಎರಡು ಪವರ್‌ಹೌಸ್ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ.
ಐಸಿಸಿ 2021ರ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅನುಭವಿಸದ ಮುಖಭಂಗಕ್ಕೆ ಪ್ರತೀಕಾರವಾಗಿ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸನ್ನದ್ಧಗೊಂಡಿದ್ದು, ಈಗಾಗಲೇ ಅಂತಿಮ ಹನ್ನೊಂದು ಆಟಗಾರರು ಯಾರು ಎಂಬುದನ್ನ ಹಿಟ್‌ಮ್ಯಾನ್ ಪರಿಗಣಿಸಿದ್ದಾರೆ.
ಉಭಯ ತಂಡಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಯಾರು ಅಬ್ಬರಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಐಸಿಸಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಸೂರ್ಯ ಹಾಗೂ ಬಾಬರ್ ತಮಗೆ ತಾವೇ ರೇಟಿಂಗ್ ನೀಡಿದ್ದಾರೆ.

100 ರೇಟಿಂಗ್‌ನಲ್ಲಿ ತಮಗೆ ತಾವೇ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ?
ಐಸಿಸಿ ಕೇಳಿರುವ ಪ್ರಶ್ನೆ ಏನಂದ್ರೆ ಸೂರ್ಯಕುಮಾರ್ ಕುಮಾರ್ ಹಾಗೂ ಬಾಬರ್ ಅಜಮ್ ತಮ್ಮ ಆಟಕ್ಕೆ ಎಷ್ಟು ರೇಟಿಂಗ್ ನೀಡುತ್ತೀರಾ ಎಂಬುವುದಾಗಿದೆ. ಉದಾಹರಣೆಗೆ ಬ್ಯಾಟಿಂಗ್ ಶಕ್ತಿ, ಸ್ಟ್ರೋಕ್ ಪ್ಲೇ, ಸ್ಪಿನ್ನರ್‌ಗಳ ಎದುರು ಬ್ಯಾಟಿಂಗ್, ಪೇಸರ್‌ಗಳ ಎದುರು ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿ ನಿಮಗೆ ನೀವೆ ಎಷ್ಟು ರೇಟಿಂಗ್ ನೀಡುತ್ತೀರಾ ಎಂಬುವುದಾಗಿದೆ. ಇದಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಬಾಬರ್ ಅಜಮ್ ಪ್ರತಿಯೊಂದು ಅಂಶಕ್ಕೂ ರೇಟಿಂಗ್ ನೀಡಿದ್ದು, ಈ ಕೆಳಗೆ ಕಾಣಬಹುದು.
Ind vs Pak: ಹೈವೋಲ್ಟೇಜ್ ಪಂದ್ಯದ ಡ್ರೀಂ ಟೀಂ, ಪಿಚ್ ರಿಪೋರ್ಟ್, ಫ್ಯಾಂಟೆಸಿ ಟಿಪ್ಸ್, ಪ್ಲೇಯಿಂಗ್ 11
ಸೂರ್ಯಕುಮಾರ್ ಬ್ಯಾಟಿಂಗ್ ರೇಟಿಂಗ್ 100ಕ್ಕೆ ಎಷ್ಟು?
ಪವರ್: 90
ಸ್ಟ್ರೋಕ್ ರೇಂಜ್: 93
ಸ್ಪಿನ್: 95
ಪೇಸ್: 93
ಫೀಲ್ಡಿಂಗ್: 90
ಟೀಂ ಇಂಡಿಯಾ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೈದಾನದ ಯಾವುದೇ ಮೂಲೆಗೆ ಚೆಂಡನ್ನ ಅಟ್ಟುವ ಸಾಮರ್ಥ್ಯ ಹೊಂದಿದ್ದು, ತಮ್ಮ ಆಟಕ್ಕೆ 100ಕ್ಕೆ ಎಲ್ಲ ಅಂಶಗಳಿಗೂ 90ಕ್ಕೂ ಹೆಚ್ಚು ರೇಟಿಂಗ್ ನೀಡಿದ್ದಾರೆ. ಅದ್ರಲ್ಲೂ ಪೇಸರ್‌ಗಳಿಗಿಂತ ಸ್ಪಿನ್ನರ್‌ಗಳ ವಿರುದ್ಧ ತಾನು ಪ್ರಭಾವ ಬೀರಬಹುದು ಎಂದು ಹೇಳಿಕೊಂಡಿದ್ದು, ಪೇಸರ್ 90, ಸ್ಪಿನ್ ವಿರುದ್ಧ 95 ರೇಟಿಂಗ್ ನೀಡಿದ್ದಾರೆ. ಪವರ್ ಹಾಗೂ ಪೀಲ್ಡಿಂಗ್‌ಗೆ 90 ಪಾಯಿಂಟ್ ಕೊಟ್ಟಿದ್ದಾರೆ. ಸೂರ್ಯ ಸ್ಟ್ರೋಕ್‌ರೇಂಜ್ 93ರಷ್ಟಿದೆ.
ಟಿ20 ವಿಶ್ವಕಪ್: ಆಸ್ಟ್ರೇಲಿಯಾದ ಹೀನಾಯ ಸೋಲಿಗೆ ಕಾರಣ ತಿಳಿಸಿದ ಆ್ಯರೋನ್ ಫಿಂಚ್
ಬಾಬರ್ ಅಜಮ್ ಬ್ಯಾಟಿಂಗ್ ರೇಟಿಂಗ್ 100ಕ್ಕೆ ಎಷ್ಟು?
ಪವರ್: 70
ಸ್ಟ್ರೋಕ್ ರೇಂಜ್: 80
ಸ್ಪಿನ್: 75
ಪೇಸ್: 90
ಫೀಲ್ಡಿಂಗ್: 60
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಫೀಲ್ಡಿಂಗ್‌ನಲ್ಲಿ ತಾನು ಹಿಂದಿದ್ದು, ಸಾಕಷ್ಟು ಸುಧಾರಿಸಬೇಕಿದೆ ಎಂದು ಒಪ್ಪಿಕೊಂಡಿದ್ದಾರೆ. ಫೀಲ್ಡಿಂಗ್‌ನಲ್ಲಿ ಅವರು 100ಕ್ಕೆ ಕೇವಲ 60 ರೇಟಿಂಗ್ ನೀಡಿದ್ದು, ಸ್ಪಿನ್ನರ್‌ಗಳಿಗಿಂತ ಪೇಸ್ ಬೌಲರ್‌ಗಳ ಎದುರು ಆಡುವುದು ತುಂಬಾ ಇಷ್ಟ ಎಂದು ಹೇಳಿದ್ದಾರೆ. ಸ್ಪಿನ್ ವಿರುದ್ಧ 100ಕ್ಕೆ 75 ಪಾಯಿಂಟ್ಸ್ ನೀಡಿದ್ರೆ, ಪೇಸರ್ ವಿರುದ್ಧ 90 ಪಾಯಿಂಟ್ಸ್ ಕೊಟ್ಟಿದ್ದಾರೆ. ಜೊತೆಗೆ ಪವರ್ ಕೂಡ ಬೆಳವಣಿಗೆಯಾಗಬೇಕು ಎಂದಿದ್ದಾರೆ.
PKL 2022: ಯು ಮುಂಬಾ ವಿರುದ್ಧ ಭರ್ಜರಿಯಾಗಿ ಗೆದ್ದ ಬೆಂಗಳೂರು ಬುಲ್ಸ್, ರೈಡಿಂಗ್‌ನಲ್ಲಿ ಅಬ್ಬರಿಸಿದ ಭರತ್

ಭಾರತ ಮತ್ತು ಪಾಕ್ ಸಂಭಾವ್ಯ ಪ್ಲೇಯಿಂಗ್ 11
ಭಾನುವಾರ ಮಧ್ಯಾಹ್ನ 1.30ಕ್ಕೆ ಎಂಸಿಜಿ ಮೈದಾನದಲ್ಲಿ ಮುಖಾಮುಖಿಯಾಗುತ್ತಿರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹುದು ಎಂಬುದನ್ನ ಈ ಕೆಳಗೆ ಕಾಣಬಹುದಾಗಿದೆ.
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖಾರ್ ಜಮಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಶಾನ್ ಮಸೂದ್, ಆಸಿಫ್ ಅಲಿ, ಶದಾಬ್ ಖಾನ್, ಶಾಹಿನ್ ಅಫ್ರಿದಿ, ನಾಸಿರ್ ಷಾ, ಹ್ಯಾರಿಸ್ ರೌಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications