For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾಗೆ ಇದೊಂದೇ ದಾರಿ ಎಂದ ಆ್ಯರೋನ್ ಫಿಂಚ್

Australia

ಐಸಿಸಿ ಟಿ20 ವಿಶ್ವಕಪ್‌ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾದಲ್ಲಿ ಭಾಗವಹಿಸಿರುವ ತಂಡಗಳಿಗೆ ಈ ಬಾರಿ ಹೆಚ್ಚು ವಿಲನ್ ಆಗಿ ಎದುರಾಗಿದ್ದು ಮಳೆರಾಯ. ಬಲಿಷ್ಠ ತಂಡಗಳೇ ಈ ಬಾರಿ ಸೆಮಿಫೈನಲ್ ತಲುಪಲು ಹೆಣಗಾಡಲು ಕಾರಣ ಒಂದು ತಂಡದ ಪ್ರದರ್ಶನವಾದ್ರೆ, ಮತ್ತೊಂದು ಮಳೆಯಿಂದಾಗಿ ಫಲಿತಾಂಶದ ಮೇಲೆ ಬೀರಿರುವ ಪರಿಣಾಮವಾಗಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೂ ಕೂಡ ಇದ್ರಿಂದ ಹೊರತಾಗಿಲ್ಲ. ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋತ ಬಳಿಕ , ಶ್ರೀಲಂಕಾ ವಿರುದ್ಧ ಭರ್ಜರಿಯಾಗಿದ್ದ 7 ವಿಕೆಟ್‌ಗಳ ಜಯ ಸಾಧಿಸಿತು. ಆದ್ರೆ ಮೂರನೇ ಪಂದ್ಯದಲ್ಲಿ ಆಸಿಸ್ ತಂಡವು ಗೆದ್ದಿದ್ದರೆ ಸೆಮಿಫೈನಲ್ ಹಾದಿ ಸುಗಮಗೊಳ್ಳುತ್ತಿದ್ದು. ಆದ್ರೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ನಂತಹ ಬದ್ಧ ಎದುರಾಳಿ ವಿರುದ್ಧದ ಪಂದ್ಯದಲ್ಲೇ ಮಳೆ ಸರಿಯಾಗಿ ಕೈ ಕೊಟ್ಟಿತು. ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತು.

ಈ ಕಾರಣದಿಂದಾಗಿ ಗ್ರೂಪ್ 1 ಪಾಯಿಂಟ್ಸ್ ಟೇಬಲ್‌ನಲ್ಲಿ ಸೆಮಿಫೈನಲ್ ತಲುಪಲು ಪೈಪೋಟಿ ಎದುರಾಗಿದ್ದು, ಆಸಿಸ್ ನಾಯಕ ಆ್ರೋನ್ ಫಿಂಚ್ ಕೂಡ ತಲೆ ಕೆಡಿಸಿಕೊಂಡಿದ್ದಾರೆ.

 ಸೆಮಿಫೈನಲ್ ತಲುಪಲು ನೆಟ್ ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ: ಫಿಂಚ್

ಸೆಮಿಫೈನಲ್ ತಲುಪಲು ನೆಟ್ ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ: ಫಿಂಚ್

ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಲು ನೆಟ್ ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ ಎಂದು ಕಾಂಗರೂ ರಾಷ್ಟ್ರದ ನಾಯಕ ಆ್ಯರೋನ್ ಫಿಂಚ್ ಒಪ್ಪಿಕೊಂಡಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಿ ನೆಟ್‌ ರನ್‌ರೇಟ್ ನಮ್ಮ ಭವಿಷ್ಯ ನಿರ್ಧರಿಸಲಿದೆ ಎಂದು ಫಿಂಚ್‌ಗೆ ಮನವರಿಯಾಗಿದೆ.

ಆಸ್ಟ್ರೇಲಿಯಾ ತಂಡವು ಇಷ್ಟು ದೊಡ್ಡ ಮಟ್ಟಿಗೆ ರನ್‌ರೇಟ್‌ನಲ್ಲಿ ಹಿಂದೆ ಬೀಳಲು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲು ಕಾರಣವಾಗಿದೆ. ಇದು ಆಸಿಸ್‌ ನೆಟ್ ರೇಟ್‌ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಶ್ರೀಲಂಕಾ ವಿರುದ್ಧ 7 ವಿಕೆಟ್‌ ಭರ್ಜರಿ ಜಯ ಸಾಧಿಸಿದ್ರು ಸಹ ಆಸಿಸ್ ನೆಟ್ ರನ್‌ರೇಟ್ -1.555 ನಷ್ಟಿದೆ.

ಟಿ20 ವಿಶ್ವಕಪ್‌ನ ಅತಿ ಹೆಚ್ಚು ಮೌಲ್ಯಯುತ ಆಟಗಾರ ಈತನೇ ಎಂದ ಮಾಜಿ ಕ್ರಿಕೆಟಿಗ

ಪಂದ್ಯ ಗೆಲ್ಲುವ ಜೊತೆಗೆ ರನ್‌ರೇಟ್ ಹೆಚ್ಚಿಸಿಕೊಳ್ಳುವಂತಹ ಪ್ರದರ್ಶನ ನೀಡಬೇಕಿದೆ!

ಪಂದ್ಯ ಗೆಲ್ಲುವ ಜೊತೆಗೆ ರನ್‌ರೇಟ್ ಹೆಚ್ಚಿಸಿಕೊಳ್ಳುವಂತಹ ಪ್ರದರ್ಶನ ನೀಡಬೇಕಿದೆ!

ಮುಂಬರುವ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಕುರಿತಾಗಿ ನ್ಯೂಸ್ 18 ಜೊತೆಗೆ ಮಾತನಾಡಿದ ನಾಯಕ ಆ್ಯರೋನ್ ಫಿಂಚ್ ನೆಟ್ ರನ್‌ರೇಟ್ ದೊಡ್ಡ ಪಾತ್ರವಹಿಸಲಿದ್ದು ತಂಡ ಕೇವಲ ಗೆಲುವಷ್ಟೇ ಪಡೆದ್ರೆ ಸಾಲಲ್ಲ ಎಂದಿದ್ದಾರೆ.

'' ಹೌದು, ನನ್ನ ಪ್ರಕಾರ ರನ್‌ ರೇಟ್ ಹೆಚ್ಚಿಸುವಂತಹ ಪ್ರದರ್ಶನ ಬೇಕಾಗಿದೆ. ಏಕೆಂದರೆ ಐರ್ಲೆಂಡ್ ಯಾವ ರೀತಿಯ ಪ್ರದರ್ಶನ ನೀಡಬಲ್ಲದು ಎಂಬುದು ತಿಳಿದಿದೆ. ಹೀಗಾಗಿ ಪಂದ್ಯಕ್ಕೂ ಮುನ್ನ ರನ್‌ರೇಟ್ ಹೆಚ್ಚಿಸುವಂತಹ ಪ್ರದರ್ಶನ ನೀಡಬೇಕೆಂದು ತೆರಳಲು ಸಾಧ್ಯವಿರುವುದಿಲ್ಲ'' ಎಂದಿದ್ದಾರೆ.

'' ಏಕೆಂದರೆ ತಂಡವು ಮೊದಲು ಪಂದ್ಯವನ್ನು ಗೆಲ್ಲಬೇಕಾಗಿದೆ ನಂತರ ರನ್‌ರೇಟ್‌ ಕಡೆಗೂ ಕೂಡ ಗಮನ ಹರಿಸಬೇಕಿದೆ. ನೆಟ್‌ ರನ್‌ರೇಟ್ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕರೆ ನಾವು ಮುನ್ನಡೆಯುತ್ತೇವೆ. ಅಂತಿಮವಾಗಿ ಕಠಿಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಿದೆ. ಅಂತಿಮವಾಗಿ ಫಲಿತಾಂಶವು ನಿರ್ಧರಿಸಲಿದೆ'' ಎಂದು ಫಿಂಚ್ ತಮ್ಮ ಮಾತಿಗೆ ಸೇರಿಸಿದ್ದಾರೆ.

IND vs SA: ಭಾರತಕ್ಕೆ ದಿನೇಶ್ ಕಾರ್ತಿಕ್‌ಗಿಂತ ರಿಷಭ್ ಪಂತ್‌ನ ಅಗತ್ಯವಿದೆ; ಕಪಿಲ್ ದೇವ್

ನಮ್ಮ ಮೊದಲ ಗಮನ ಮುಂದಿನ ಎರಡು ಪಂದ್ಯ ಗೆಲ್ಲುವುದಾಗಿದೆ : ಆಸಿಸ್ ನಾಯಕ

ನಮ್ಮ ಮೊದಲ ಗಮನ ಮುಂದಿನ ಎರಡು ಪಂದ್ಯ ಗೆಲ್ಲುವುದಾಗಿದೆ : ಆಸಿಸ್ ನಾಯಕ

ಆಸಿಸ್ ತಂಡದ ನಾಯಕ ಆ್ಯರೋನ್ ಫಿಂಚ್ ನಮ್ಮ ಮುಂದಿನ ಗಮನವು ಮೊದಲು ಎರಡೂ ಪಂದ್ಯವನ್ನ ಗೆಲ್ಲುವುದಾಗಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡವನ್ನ ಎದುರಿಸಲಿದೆ.

''ನಾವೆಲ್ಲಾ ಮಾಡಬೇಕಾಗಿರುವ ಮೊದಲ ಕೆಲಸ ಎರಡೂ ಪಂದ್ಯಗಳನ್ನ ಗೆಲ್ಲಲು ಪ್ರಯತ್ನಿಸುವುದು. ನಮ್ಮ ಕಡೆಗೆ ಕೆಲವು ವಿಷಯಗಳು ಪಾಸಿಟಿವ್ ಆಗಲಿದೆ ಎಂದು ನಂಬಿದ್ದೇನೆ'' ಎಂದು ಫಿಂಚ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕಳೆದ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ ನಂತರ, ಮುಂದಿನ ಪಂದ್ಯವು ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಮಳೆ ಅಡ್ಡಿಪಡಿಸುವುದಿಲ್ಲ ಎಂದು ಆಸಿಸ್ ನಾಯಕ ನಂಬಿದ್ದಾರೆ.

ಪ್ರಸ್ತುತ ಗ್ರೂಪ್ 1ರಲ್ಲಿ 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 1 ಗೆಲುವು, 1 ಸೋಲು ಹಾಗೂ 1 ಫಲಿತಾಂಶವಿಲ್ಲದೆ 3 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದಷ್ಟೇ ಪಾಯಿಂಟ್ಸ್ ಹೊಂದಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ನೆಟ್‌ ರನ್‌ರೇಟ್ ಉತ್ತಮವಿರುವ ಕಾರಣ ಕಾಂಗರೂ ತಂಡಕ್ಕಿಂತ ಮೇಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ 2022ರ ಸೂಪರ್ 12 ಹಂತದ ಪಾಯಿಂಟ್ಸ್‌ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Story first published: Sunday, October 30, 2022, 14:45 [IST]
Other articles published on Oct 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+