Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಇಂಗ್ಲೆಂಡ್ ಗೆದ್ದ ಬಳಿಕ ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್

England vs New zealand

ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಇಂಗ್ಲೆಂಡ್ 20ರನ್‌ಗಳಿಂದ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ನಾಯಕ ಜಾಸ್‌ ಬಟ್ಲರ್ 47 ಎಸೆತಗಳಲ್ಲಿ 73ರನ್‌ ಸಿಡಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಬಟ್ಲರ್‌ಗೆ ಉತ್ತಮ ಸಾಥ್ ನೀಡಿದ ಅಲೆಕ್ಸ್ ಹೇಲ್ಸ್ 40 ಎಸೆತಗಳಲ್ಲಿ 52ರನ್ ಸಿಡಿಸುವ ಮೂಲಕ ಮಿಂಚಿದ್ರು.

81ರನ್‌ಗಳ ಆರಂಭಿಕ ಜೊತೆಯಾಟ ಪಡೆದ ಇಂಗ್ಲೆಂಡ್ ಓಪನರ್‌ಗಳಿಬ್ಬರು ತಮ್ಮ ಆಟವಾಡಿ ಪೆವಿಲಿಯನ್‌ಗೆ ಮರಳಿದ ಬಳಿಕ ಉಳಿದ ಬ್ಯಾಟರ್‌ಗಳು ತಂಡದ ಸ್ಕೋರನ್ನು ಮತ್ತಷ್ಟು ಹೆಚ್ಚಿಸುವಲ್ಲಿ ವಿಫಲಗೊಂಡರು. ಮೊಯಿನ್ ಅಲಿ 5, ಲಿವಿಂಗ್‌ಸ್ಟೋನ್ 20, ಹ್ಯಾರಿ ಬ್ರೂಕ್ 8ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 179ರನ್ ಕಲೆಹಾಕಿತು.

ನ್ಯೂಜಿಲೆಂಡ್‌ ಟಾಪ್ ಆರ್ಡರ್ ವೈಫಲ್ಯ, 20ರನ್ ಸೋಲು

ನ್ಯೂಜಿಲೆಂಡ್‌ ಟಾಪ್ ಆರ್ಡರ್ ವೈಫಲ್ಯ, 20ರನ್ ಸೋಲು

180ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭಿಕರಿಬ್ಬರು ಬಹುಬೇಗನೆ ಪೆವಿಲಿಯನ್ ಸೇರಿದ್ದು ಕಿವೀಸ್ ಸೋಲಿಗೆ ಪ್ರಮುಖ ಕಾರಣವಾಯ್ತು. ಕೇನ್ ವಿಲಿಯಮ್ಸನ್‌ 40 ಎಸೆತಗಳಲ್ಲಿ 40ರನ್‌ ಸಿಡಿಸಿ ನಿಧಾನಗತಿಯ ಆಟವಾಡಿದ್ರೆ, ಗ್ಲೆನ್ ಫಿಲಿಪ್ಸ್‌ 36 ಎಸೆತಗಳಲ್ಲಿ 62ರನ್ ಸಿಡಿಸಿದ ಇನ್ನಿಂಗ್ಸ್ ವ್ಯರ್ಥವಾಯಿತು. ಜೇಮ್ಸ್ ನೀಶಮ್ ಹಾಗೂ ಡೆರಿಲ್ ಮಿಚೆಲ್ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 159ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಪರಿಣಾಮ ಇಂಗ್ಲೆಂಡ್ 20ರನ್‌ಗಳಿಂದ ಪಂದ್ಯ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 2 ಸ್ಥಾನಕ್ಕೆ ಜಿಗಿದಿದೆ.

SMAT 2022: 55 ಎಸೆತಗಳಲ್ಲಿ 126ರನ್ ಚಚ್ಚಿದ ಶುಭಮನ್ ಗಿಲ್, ಕರ್ನಾಟಕ ವಿರುದ್ಧ ಪಂಜಾಬ್‌ಗೆ ಗೆಲುವು

ಪಂದ್ಯ ಸೋತರು ಅಗ್ರಸ್ಥಾನದಲ್ಲೇ ಉಳಿದ ನ್ಯೂಜಿಲೆಂಡ್

ಪಂದ್ಯ ಸೋತರು ಅಗ್ರಸ್ಥಾನದಲ್ಲೇ ಉಳಿದ ನ್ಯೂಜಿಲೆಂಡ್

ಇಂಗ್ಲೆಂಡ್ ವಿರುದ್ಧ ಪಂದ್ಯ ಸೋತರು ಸಹ ನ್ಯೂಜಿಲೆಂಡ್ ಉತ್ತಮ ನೆಟ್‌ ರನ್‌ರೇಟ್ ಹೊಂದಿರುವ ಕಾರಣ ಗ್ರೂಪ್ 1ರಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ. ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಹಾಗೂ 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್ ಕಲೆಹಾಕಿದ್ದು, +2.233 ನೆಟ್‌ ರನ್‌ರೇಟ್ ಹೊಂದಿದೆ.

ಇನ್ನು ಸೆಮಿಫೈನಲ್ ಆಸೆ ಜೀವಂತವಾಗಿರಿಸಿರುವ ಇಂಗ್ಲೆಂಡ್ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಹಾಗೂ 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್ ಕಲೆಹಾಕಿದ್ದು, +0.547 ನೆಟ್‌ ರನ್‌ರೇಟ್ ಹೊಂದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ.

ಆಸ್ಟ್ರೇಲಿಯಾ ಸೆಮಿಫೈನಲ್ ಹಾದಿ ಕಠಿಣ

ಆಸ್ಟ್ರೇಲಿಯಾ ಸೆಮಿಫೈನಲ್ ಹಾದಿ ಕಠಿಣ

ಇಂಗ್ಲೆಂಡ್ ಗೆಲುವಿನ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮಿಫೈನಲ್ ಹಾದಿ ಕಠಿಣಗೊಂಡಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ತಂಡದಷ್ಟೇ ಪಾಯಿಂಟ್ಸ್ ಹೊಂದಿರುವ ಆಸ್ಟ್ರೇಲಿಯಾ ನೆಟ್‌ ರನ್‌ರೇಟ್‌ -0.304 ಹೊಂದಿರುವ ಕಾರಣ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಸೆಮಿಫೈನಲ್ ಖಚಿತಪಡಿಸಿಕೊಳ್ಳಲು ನ್ಯೂಜಿಲೆಂಡ್ ಮುಂದಿನ ಪಂದ್ಯದಲ್ಲಿ ಐರ್ಲೆಂಡ್, ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಿದೆ. ಮೂರು ತಂಡಗಳ ಪಾಯಿಂಟ್ಸ್ 5 ಆಗಿರುವ ಕಾರಣ ಸೆಮಿಫೈನಲ್ ತಲುಪಲು ಪ್ರಬಲ ಹೋರಾಟ ಎದುರಾಗಿದೆ.

ಕೊನೆಯ ಮೂರು ಸ್ಥಾನದಲ್ಲಿ ಶ್ರೀಲಂಕಾ 4 ಪಂದ್ಯಗಳಿಂದ 4 ಪಾಯಿಂಟ್ಸ್, ಐರ್ಲೆಂಡ್ 4 ಪಂದ್ಯಗಳಿಂದ 3 ಪಾಯಿಂಟ್ಸ್ ಕಲೆಹಾಕಿದ್ದು ಸೆಮಿಫೈನಲ್ ಅವಕಾಶ ಬಹುತೇಕ ಮುಗಿದಿದೆ. ಇನ್ನು ಕೊನೆಯ ಸ್ಥಾನದಲ್ಲಿರುವ ಅಫ್ಘಾನಿಸ್ತಾನ 4 ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಜಯಿಸದೆ 2 ಪಾಯಿಂಟ್ಸ್ ಹೊಂದಿದೆ.

ಗ್ರೂಪ್ 2 ಪಾಯಿಂಟ್ಸ್ ಟೇಬಲ್ ಅಪ್‌ಡೇಟ್

ಗ್ರೂಪ್ 2 ಪಾಯಿಂಟ್ಸ್ ಟೇಬಲ್ ಅಪ್‌ಡೇಟ್

ಇನ್ನು ಗ್ರೂಪ್ 2ರಲ್ಲಿ ಭಾರತ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಅಲಂಕರಿಸಿದ್ದು, 3 ಪಂದ್ಯಗಳಿಂದ 5 ಪಾಯಿಂಟ್ಸ್ (+2.772), ಭಾರತ 3 ಪಂದ್ಯಗಳಿಂದ 4 ಪಾಯಿಂಟ್ಸ್‌ (+0.844), ಬಾಂಗ್ಲಾದೇಶ 3 ಪಂದ್ಯಗಳಿಂದ 4 ಪಾಯಿಂಟ್ಸ್‌ (-1.533) ಹೊಂದಿದ್ದು, ಕೊನೆಯ ಮೂರು ಸ್ಥಾನವನ್ನ ಜಿಂಬಾಬ್ವೆ, ಪಾಕಿಸ್ತಾನ, ನೆದರ್ಲ್ಯಾಂಡ್ಸ್‌ ಅಲಂಕರಿಸಿವೆ.

Story first published: Tuesday, November 1, 2022, 17:55 [IST]
Other articles published on Nov 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+